ETV Bharat / state

ಚಿಕ್ಕಮಗಳೂರು: ಮರಗಸಿ ಮಾಡುವ ವೇಳೆ ವಿದ್ಯುತ್ ತಂತಿ ತಾಗಿ ಮರದಲ್ಲೇ ಕಾರ್ಮಿಕ ಸಾವು - Laborer died in tree

author img

By ETV Bharat Karnataka Team

Published : Jun 1, 2024, 7:52 PM IST

ಸಿಲ್ವರ್​ ಮರಕ್ಕೆ ಮರಗಸಿ ಮಾಡುತ್ತಿದ್ದ ಕಾರ್ಮಿಕ ವಿದ್ಯುತ್​ ತಂತಿ ತಗುಲಿ ಮರದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ.

Laborer died in tree after being hit by an electric wire
ಮರಗಸಿ ಮಾಡುವ ವೇಳೆ ವಿದ್ಯುತ್ ತಂತಿ ತಾಗಿ ಮರದಲ್ಲೇ ಕಾರ್ಮಿಕ ಸಾವು (ETV Bharat)

ಚಿಕ್ಕಮಗಳೂರು: ವಿದ್ಯುತ್ ಶಾಕ್​ನಿಂದ ಕಾರ್ಮಿಕನೋರ್ವ ಮರದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಕಾಫಿ ತೋಟದಲ್ಲಿ ಬೆಳೆದಿರುವ ಬೃಹತ್ ಗಾತ್ರದ ಸಿಲ್ವರ್ ಮರಗಳನ್ನು, ಮರಗಸಿ ಮಾಡುವಾಗ ಈ ದುರಂತ ನಡೆದಿದೆ. ಚಂದ್ರಪ್ಪ(45) ಮೃತ ದುರ್ದೈವಿಯಾಗಿದ್ದಾರೆ. ಸಿಲ್ವರ್ ಮರದ ಅಡ್ಡ ಕೊಂಬೆಗಳನ್ನು ಕಡಿಯುವಾಗ ಈ ಅವಘಡ ಜರುಗಿದೆ.

ಮರ ನೇರವಾಗಿ ಬೆಳೆಯಲೆಂದು ಸಿಲ್ವರ್ ಮರಕ್ಕೆ ಮರಗಸಿ ಅನಿವಾರ್ಯವಾಗಿದ್ದು, ಪ್ರತಿಯೊಬ್ಬರು ಈ ಸಂದರ್ಭದಲ್ಲಿ ತೋಟದಲ್ಲಿ ಬೆಳೆದ ಸಿಲ್ವರ್ ಮರಗಳಿಗೆ ಮರಗಸಿ ಮಾಡಿಸುತ್ತಾರೆ. ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಈ ಅವಘಡ ನಡೆದಿದೆ. ಚಂದ್ರಪ್ಪ ಅವರು ಮರದ ಮೇಲಿದ್ದಾಗಲೇ ವಿದ್ಯುತ್ ಪ್ರವಹಿಸಿ ಮರದಲ್ಲೇ ಸಾವನ್ನಪ್ಪಿದ್ದಾನೆ. ಕೂಡಲೇ ವ್ಯಕ್ತಿಯ ಮೃತದೇಹವನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮೃತ ವ್ಯಕ್ತಿಯ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೂಡಿಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ವಿಜಯಪುರ : ಆಕಸ್ಮಿಕ ವಿದ್ಯುತ್‌ತಂತಿ ತಗುಲಿ ವ್ಯಕ್ತಿ ಸಾವು - Man died after electrocuted

ETV Bharat Logo

Copyright © 2024 Ushodaya Enterprises Pvt. Ltd., All Rights Reserved.