ETV Bharat / state

ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ನಾಯಕನೆಂದರೆ ಅದು ಕುಮಾರಸ್ವಾಮಿ: ನಿಖಿಲ್​ - Nikhil Kumaraswamy - NIKHIL KUMARASWAMY

ಕುಮಾರಸ್ವಾಮಿ ಕೊಟ್ಟ ಮಾತನ್ನು ವಾಪಸ್​ ಪಡೆಯದೆ ಜೆಡಿಎಸ್​ - ಕಾಂಗ್ರೆಸ್​ ಮೈತ್ರಿ ಸರ್ಕಾರದಲ್ಲಿ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದರು ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದರು.

kumaraswamy-waived-farmers-loans-says-nikhil-kumaraswamy
ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ನಾಯಕನೆಂದರು ಅದು ಕುಮಾರಸ್ವಾಮಿ: ನಿಖಿಲ್​
author img

By ETV Bharat Karnataka Team

Published : Mar 31, 2024, 11:00 PM IST

ನಿಖಿಲ್​ ಕುಮಾರಸ್ವಾಮಿ ಪ್ರಚಾರ

ಮಂಡ್ಯ: ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 2013 -18 ನಡುವೆ ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗಿತ್ತು. ಈ ಅವಧಿಯಲ್ಲಿ ಸಾಲ ಮಾಡಿಕೊಂಡಿದ್ದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶ ಇತ್ತು. ಮಂಡ್ಯ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಆಗ ಕುಮಾರಸ್ವಾಮಿ ಅವರು ಮೃತರ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದ್ದರು. 2018ರಲ್ಲಿ ಕುಮಾರಸ್ವಾಮಿ ಅವರು ಜೆಡಿಎಸ್​ಗೆ ಬಹುಮತ ಸಿಕ್ಕರೆ ಸಂಪೂರ್ಣವಾಗಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಘೋಷಿಸಿದ್ದರು ಎಂದು ಜೆಡಿಎಸ್​ ಯುವ ಘಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಹೇಳಿದರು.

ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೆಡಿಎಸ್​ಗೆ ಬಹುಮತ ಬರಲಿಲ್ಲ. ಆದರೆ ಕುಮಾರಸ್ವಾಮಿ ಕೊಟ್ಟ ಮಾತನ್ನು ವಾಪಸ್​ ಪಡೆಯದೆ ಜೆಡಿಎಸ್​ - ಕಾಂಗ್ರೆಸ್​ ಮೈತ್ರಿ ಸರ್ಕಾರದಲ್ಲಿ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದರು. ದೇಶ, ರಾಜ್ಯದಲ್ಲಿ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ನಾಯಕನೆಂದರೆ ಅದು ಕುಮಾರಸ್ವಾಮಿಯವರು ಎಂದರು.

ಕುಮಾರಸ್ವಾಮಿ ಅವರಿಗೆ ಹೃದಯ ಸಮಸ್ಯೆ ಇದೆ. ಯಾರು ಅವರ ಎದೆಯನ್ನು ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಎದೆ ಮೇಲೆ 5 ಇಂಚು ಗಾಯದ ಗುರುತು ಇದೆ. ಅದು ಇನ್ನೂ ವಾಸಿಯಾಗಿಲ್ಲ. ಇದನ್ನು ತಿಳಿಯದ ಕೆಲವರು ಅವರ ವಿರುದ್ಧ ಲೇವಡಿ ಮಾಡುತ್ತಾರೆ. ಹೊಸ ತಂತ್ರಜ್ಞಾನವನ್ನು ಎಲ್ಲರೂ ಗೂಗಲ್‌ನಲ್ಲಿ ಸರ್ಚ್ ಮಾಡಬಹುದು. ಮೂರೇ ದಿನದಲ್ಲಿ ಚೇತರಿಸಿಕೊಳ್ಳುವಷ್ಟರ ಮಟ್ಟಿಗೆ ತಾಂತ್ರಿಕತೆ ಬೆಳೆದಿದೆ. ಆದರೆ ಕ್ಷೇತ್ರದ ಶಾಸಕರಿಗೆ ಈ ಬಗ್ಗೆ ಅರಿವೇ ಇಲ್ಲ. ನಮ್ಮ ಪಕ್ಷದಲ್ಲೇ ಬೆಳೆದು, ಇಡೀ ಕುಟುಂಬವೇ ನಮ್ಮ ಪಕ್ಷದಲ್ಲಿ ಅಧಿಕಾರ ಅನುಭವಿಸಿ ಈಗ ನಮ್ಮ ವಿರುದ್ಧವೇ ಮಾತನಾಡುತ್ತಿದ್ದಾರೆ. ಜನತೆ ಇದನ್ನು ನೋಡುತ್ತಿದ್ದಾರೆ. ಅವರೇ ಎಲ್ಲದಕ್ಕೂ ಉತ್ತರ ನೀಡುತ್ತಾರೆ ಎಂದು ಹೇಳಿದರು.

ಬದಲಾದ ಕಾಲಘಟ್ಟದಲ್ಲಿ ನಾನು ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬರಬೇಕಾಯಿತು. 2019ರಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. 7 ವಿಧಾನಸಭಾ ಕ್ಷೇತ್ರಗಳಲ್ಲೂ ನಮ್ಮದೇ ಪಕ್ಷದ ಶಾಸಕರು ಇದ್ದರು. ಆದರೂ ನಾನು ಸೋಲನ್ನೂ ಅನುಭವಿಸಬೇಕಾಯಿತು. ಆಗ ನಮ್ಮ ಕಾರ್ಯಕರ್ತರಿಗೆ ನೋವು ಆಕ್ರೋಶ ಉಂಟುಮಾಡಿತ್ತು. ಇದಕ್ಕೆ ಮತದಾರರು, ಕಾರ್ಯಕರ್ತರು ಹೊಣೆಯಲ್ಲ, ನಾವೇ ಹೊಣೆ ಎಂದು ನಿಖಿಲ್​ ಕುಮಾರಸ್ವಾಮಿ ಒಪ್ಪಿಕೊಂಡರು.

ಇದನ್ನೂ ಓದಿ: ಸಹಕಾರ ಕೋರಿ ಸುಮಲತಾ ಅಂಬರೀಶ್​ ಭೇಟಿಯಾದ ಕುಮಾರಸ್ವಾಮಿ - HDK MEETS SUMALATHA

ETV Bharat Logo

Copyright © 2025 Ushodaya Enterprises Pvt. Ltd., All Rights Reserved.