ETV Bharat / state

ಮೀಸಲಾತಿ ಕೊಟ್ಟರೆ ಮುತ್ತಿನ ಹಾರ, ಕೊಡದಿದ್ದರೆ ಸುವರ್ಣಸೌಧಕ್ಕೆ ಮುತ್ತಿಗೆ: ಕೂಡಲಸಂಗಮ ಸ್ವಾಮೀಜಿ ಸಂದರ್ಶನ - PANCHAMASALI RESERVATION

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಮತ್ತು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕುರಿತು ಕೂಡಲಸಂಗಮ ಸ್ವಾಮೀಜಿ 'ಈಟಿವಿ ಭಾರತ್‌'ಗೆ ಸಂದರ್ಶನ ನೀಡಿದ್ದಾರೆ.

ಪಂಚಮಸಾಲಿ ಮೀಸಲಾತಿ, ಕೂಡಲಸಂಗಮ ಸ್ವಾಮೀಜಿ, suvarnasoudha belagavi
2ಎ ಮೀಸಲಾತಿ ಬಗ್ಗೆ ಕೂಡಲಸಂಗಮ ಸ್ವಾಮೀಜಿ ಸಂದರ್ಶನ (ETV Bharat)
author img

By ETV Bharat Karnataka Team

Published : Dec 5, 2024, 7:56 PM IST

ಬೆಳಗಾವಿ: 2ಎ ಮೀಸಲಾತಿ‌ಗೆ ಆಗ್ರಹಿಸಿ ಮತ್ತೆ ಪಂಚಮಸಾಲಿ ಸಮಾಜ ಸಿಡಿದೆದ್ದಿದೆ. ಚಳಿಗಾಲ ಅಧಿವೇಶನದ ವೇಳೆ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿಗೆ ಸಿದ್ಧತೆ ನಡೆದಿದೆ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸ್ವಾಮೀಜಿ ಹಳ್ಳಿಹಳ್ಳಿಗೆ ಭೇಟಿ ನೀಡಿ ಜನರನ್ನು ಜಾಗೃತಿಗೊಳಿಸುತ್ತಿದ್ದಾರೆ.

"ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸುಮಾರು 18 ತಿಂಗಳಿನಿಂದ ಶಾಂತಿಯುತವಾಗಿ ಹೋರಾಡಿದ್ದೇವೆ. ಆದರೂ ಸೌಜನ್ಯಯುತವಾಗಿಯೂ ಕರೆದು ನಮ್ಮನ್ನು ಮಾತನಾಡಿಸಲಿಲ್ಲ. ವಕೀಲರು ಹೋರಾಟ ಮಾಡಿದ ಮೇಲೆ, ಬೆಂಗಳೂರಿಗೆ ಕರೆಸಿ ಮುಖ್ಯಮಂತ್ರಿಗಳು ಮಾತನಾಡಿದರು. ಆದರೆ, ಆ ವೇಳೆ ಯಾವುದೇ ಭರವಸೆ ಮತ್ತು ಸಮಯಾವಕಾಶವನ್ನೂ ಕೊಡಲಿಲ್ಲ. ಇದು ನಮಗೆ ಮತ್ತು ವಕೀಲರಿಗೆ ತೀವ್ರ ನಿರಾಸೆ ತಂದಿತು" ಎಂದು ಸ್ವಾಮೀಜಿ ಬೇಸರಿಸಿದರು.

2ಎ ಮೀಸಲಾತಿ ಬಗ್ಗೆ ಕೂಡಲಸಂಗಮ ಸ್ವಾಮೀಜಿ ಸಂದರ್ಶನ (ETV Bharat)

"ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಸರ್ಕಾರಗಳ ವಿರುದ್ಧ ಚಳಿಗಾಲ ಅಧಿವೇಶನ ವೇಳೆ ಧರಣಿ ಮಾಡುತ್ತಾ ಬಂದಿದ್ದೇವೆ. ಹಿಂದೆ ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗಲೂ ಸೌಧಕ್ಕೆ ಮುತ್ತಿಗೆ ಹಾಕಿದ್ದೆವು. 2020ರಲ್ಲಿ‌ ಯಡಿಯೂರಪ್ಪ ಸರ್ಕಾರ, 2022ರಲ್ಲಿ ಬೊಮ್ಮಾಯಿ ಸರ್ಕಾರಕ್ಕೂ ಬಿಸಿ ಮುಟ್ಟಿಸಿದ್ದೆವು. ಈಗ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ 5 ಸಾವಿರ ಟ್ರ್ಯಾಕ್ಟರ್, 10 ಸಾವಿರ ವಕೀಲರ ನೇತೃತ್ವದಲ್ಲಿ, ಲಕ್ಷಾಂತರ ಪಂಚಮಸಾಲಿ ಸಮುದಾಯದವರು ಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ. ಮೀಸಲಾತಿ ಘೋಷಿಸುವವರೆಗೂ ಅಲ್ಲೇ ಧರಣಿ ಮುಂದುವರಿಸುತ್ತೇವೆ" ಎಂದು ಸ್ವಾಮೀಜಿ ತಿಳಿಸಿದರು.

ಪಂಜಾಬ್ ಮಾದರಿ ಟ್ರಾಕ್ಟರ್ ರ‍್ಯಾಲಿ: "ದೆಹಲಿಯಲ್ಲಿ ಪಂಜಾಬ್ ರೈತರ ಮೆರವಣಿಗೆ ಮಾದರಿಯಲ್ಲಿ ನಾವು ಟ್ರ್ಯಾಕ್ಟರ್ ಮೆರವಣಿಗೆಗೆ ಸಜ್ಜಾಗಿದ್ದೇವೆ. ಆದರೆ, ನಮ್ಮದು ಕಾನೂನಿಗೆ ಪೂರಕವಾಗಿ, ಬಸವಣ್ಣನವರ ಶಾಂತಿ ತತ್ವ, ರಾಣಿ ಚನ್ನಮ್ಮನವರ ಹೋರಾಟ ಪ್ರೇರಣೆಯಾಗಿಸಿಕೊಂಡು ಶಾಂತಿಯುತ ಪ್ರತಿಭಟನೆ ಕೈಗೊಳ್ಳುತ್ತೇವೆ. ಡಿ.7ರಂದು ಬೆಳಗಾವಿಯಲ್ಲಿ ಸಮಾಜದ ಹಾಲಿ-ಮಾಜಿ ಶಾಸಕರು, ಮುಖಂಡರ ಸಭೆ ಕರೆದಿದ್ದೇವೆ. ಟ್ರ್ಯಾಕ್ಟರ್ ರ‍್ಯಾಲಿ ಎಲ್ಲಿಂದ ಆರಂಭಿಸಬೇಕು, ಸಮಾವೇಶ ಹೇಗಿರಬೇಕು, ‌ಸೌಧಕ್ಕೆ ಮುತ್ತಿಗೆ ಹಾಕುವ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ನಿರ್ಧರಿಸುತ್ತೇವೆ" ಎಂದು ತಿಳಿಸಿದರು.

ಡಿ.10ರಂದು ಮುತ್ತಿಗೆ: "ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಹೋರಾಟ ಹತ್ತಿಕ್ಕಲು ಅನೇಕರು ಯತ್ನಿಸಿದ್ದಾರೆ.‌ ಆದರೆ, ನಮ್ಮೊಳಗಿನ ಪ್ರಾಮಾಣಿಕ ಹೋರಾಟದ ಗುಣ, ಸಾಮಾಜಿಕ ನ್ಯಾಯದ ಪರ ಇರೋದರಿಂದ ಜನರ ರೂಪದಲ್ಲಿ ದೇವರು ನಮಗೆ ಶಕ್ತಿ ತುಂಬುತ್ತಿದ್ದಾನೆ.‌ ಬಸವಣ್ಣ, ಚನ್ನಮ್ಮಾಜಿ ಕಾಲದಲ್ಲೂ ಅಂಥ ಮನಸ್ಥಿತಿಗಳು ಇದ್ದವು. ಹಾಗಾಗಿ, ಯಾವುದೇ ಜನಪ್ರತಿನಿಧಿ, ಮುಖಂಡರ ಗಾಸಿಪ್ ಮಾತುಗಳಿಗೆ ಯಾರೂ ಕಿವಿಗೊಡಬಾರದು. ಡಿ.10ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದು ಶತಸಿದ್ಧ. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಜನರು ಹೋರಾಟದಲ್ಲಿ ಪಾಲ್ಗೊಳ್ಳಬೇಕು" ಎಂದು ಸ್ವಾಮೀಜಿ ಕರೆ ನೀಡಿದರು.

"ಹೋರಾಟಕ್ಕೂ ಮೊದಲು ಮೀಸಲಾತಿ ಘೋಷಿಸಿದರೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ 15 ಅಡಿ ಎತ್ತರದ ಮುತ್ತಿನ ಹಾರ ಹಾಕಿ, ಚನ್ನಮ್ಮಾಜಿ ಪುತ್ಥಳಿ ನೀಡಿ ಸನ್ಮಾನಿಸುತ್ತೇವೆ. ಮೀಸಲಾತಿ ಆದೇಶ ಪತ್ರ ಕೊಡದಿದ್ದರೆ ಮುತ್ತಿಗೆ ಹಾಕುವುದು ಶತಸಿದ್ಧ" ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.

ಪುರುಷರು ಬಸವಣ್ಣ, ಮಹಿಳೆಯರು ಚನ್ನಮ್ಮನಂತೆ ಬನ್ನಿ: "ಹಿಂದೆ ಬೆಂಗಳೂರಲ್ಲಿ 10‌ ಲಕ್ಷ, ಬೆಳಗಾವಿಯಲ್ಲಿ 20 ಲಕ್ಷ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿದ್ದೇವೆ.‌ ಹಾಗಾಗಿ, ಈ ಬಾರಿ ಶಕ್ತಿ ಪ್ರದರ್ಶನದ ಜೊತೆಗೆ ಸರ್ಕಾರದಿಂದ ನಮಗಾಗಿರುವ ಅಸಮಾನತೆ, ನೋವು ವ್ಯಕ್ತಪಡಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಸೇರುತ್ತೇವೆ. ಪ್ರತೀ ಊರಿನಿಂದ ಕನಿಷ್ಟ 1 ಟ್ರ್ಯಾಕ್ಟರ್ ತರಬೇಕು.‌ ತಮ್ಮ ವಾಹನಗಳಲ್ಲಿ ಜನರನ್ನು ಕರೆತರಬೇಕು. ಟ್ರ್ಯಾಕ್ಟರ್ ಮೂಲಕ ರಸ್ತೆ ತಡೆದು, ವಾಹನಗಳಲ್ಲಿ ಬರುವವರು ಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಪುರುಷರು ಬಸವಣ್ಣ, ಮಹಿಳೆಯರು ಚನ್ನಮ್ಮನಂತೆ ಪಾಲ್ಗೊಳ್ಳಬೇಕು" ಸ್ವಾಮೀಜಿ ಇದೇ ವೇಳೆ ಕರೆ ನೀಡಿದರು‌.

ಪಂಚಮಸಾಲಿ ಮೀಸಲಾತಿ, ಕೂಡಲಸಂಗಮ ಸ್ವಾಮೀಜಿ, suvarnasoudha belagavi
2ಎ ಮೀಸಲಾತಿ ಬಗ್ಗೆ ಕೂಡಲಸಂಗಮ ಸ್ವಾಮೀಜಿ ಜಾಗೃತಿ (ETV Bharat)

ಯತ್ನಾಳ್ ಗಟ್ಟಿ ನಾಯಕ: ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ, "ಸಿಎಂ ಸಿದ್ದರಾಮಯ್ಯನವರ ಭಯದಿಂದ ಅವರು ಹಿಂದೇಟು ಹಾಕುತ್ತಿರಬಹುದು. ಆದರೆ, ಅವರ ದೇಹ ಮಾತ್ರ ಅಲ್ಲಿದ್ದು, ಮನಸ್ಸು ನಮ್ಮ ಕಡೆಯೇ ಇದೆ. ಇನ್ನು ಯತ್ನಾಳ್ ಗಟ್ಟಿ ನಾಯಕ. ಹಾಗಾಗಿ, ಅವರ ಗುಣ ಇಂದಿನ ಕಾಂಗ್ರೆಸ್ ಶಾಸಕರು ಬೆಳೆಸಿಕೊಳ್ಳಬೇಕು. ಇನ್ನು ಕಾಂಗ್ರೆಸ್ ಶಾಸಕರು ಯತ್ನಾಳರಂತೆ ಗಟ್ಟಿ ಧ್ವನಿಯಲ್ಲಿ ಮಾತಾಡಬೇಕು. ಇಲ್ಲವೇ ಸಿದ್ದು ಸವದಿ-ಅರವಿಂದ ಬೆಲ್ಲದರಂತೆ ಸೌಹಾರ್ದಯುತ ಮಾತುಕತೆ ನಡೆಸಬೇಕು. ಅದೇ ರೀತಿ ಸಿ.ಸಿ.ಪಾಟೀಲರ ಹಾಗೆ ಸರ್ಕಾರ ಮತ್ತು ಸಮಾಜದ ಮಧ್ಯೆ ಸೇತುವೆ ಆಗಿಯಾದ್ರೂ ಕೆಲಸ ಮಾಡಬೇಕು" ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.

ಕಾಶಪ್ಪನವರ್ ಬರುವ ವಿಶ್ವಾಸವಿದೆ: "ನಮ್ಮ ಜೊತೆ ಶಾಸಕರಾದ ವಿನಯ್ ಕುಲಕರ್ಣಿ, ರಾಜು ಕಾಗೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಸೇರಿ ಹಲವು ಕಾಂಗ್ರೆಸ್ ನಾಯಕರು ಇದ್ದಾರೆ. ಅದೇ ರೀತಿ ವಿಜಯಾನಂದ ಕಾಶಪ್ಪನವರ್ ಕೂಡ ಹೋರಾಟದಲ್ಲಿ ಪಾಲ್ಗೊಳ್ಳುವ ವಿಶ್ವಾಸವಿದೆ" ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಇದನ್ನೂ ಓದಿ: ಬೆಳಗಾವಿಯನ್ನು 2ನೇ ರಾಜಧಾನಿಯಾಗಿ ಘೋಷಿಸಿ, ರಾಜ್ಯಮಟ್ಟದ ಕಚೇರಿ ಸ್ಥಳಾಂತರಿಸಿ ಅಧಿವೇಶನಕ್ಕೆ ಬನ್ನಿ: ಸರ್ಕಾರಕ್ಕೆ ಹೋರಾಟಗಾರರ ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.