ಕೊಪ್ಪಳ: ಕೊಪ್ಪಳ ತಾಲೂಕಿನ ಹೊಸಲಿಂಗಾಪುರದಲ್ಲಿ ಮೂರು ಜನ ಅನುಮಾನಾಸ್ಪದ ಸಾವು ಪ್ರಕರಣ ಮಂಗಳವಾರ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣವನ್ನ ಭೇದಿಸಿರುವ ಜಿಲ್ಲಾ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ವಸಂತ ಕುಮಾರಿಯನ್ನು ಪ್ರೀತಿಸಿ ಮದುವೆಯಾದವನ ಸಹೋದರನಿಂದಲೇ ಮೂರು ಜನರ ಕೊಲೆಯಾಗಿರುವುದು ಗೊತ್ತಾಗಿದೆ.
ವಸಂತಕುಮಾರಿ ಆರೀಫ್ನನ್ನು ಪ್ರೀತಿಸಿ ಮದುವೆಯಾಗಿದ್ದಳು. ಆರೀಫ್ ಸಹೋದರ ಆಸೀಫ್ನಿಗೆ ಇದರಿಂದ ಅಸೂಯೆ ಉಂಟಾಗಿತ್ತು. ಜೊತೆಗೆ ವಸಂತ ಕುಮಾರಿಯಿಂದಾಗಿ ಆರೀಫ್ ಮನೆಯಲ್ಲಿ ಮನಸ್ತಾಪವಾಗುತ್ತಿತ್ತು. ಇದೇ ಕಾರಣಕ್ಕೆ ಆಸೀಫ್ ವಸಂತಕುಮಾರಿಯನ್ನ ಗೋಡೆಗೆ ನೂಕಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಸೋಮವಾರ ಸಂಜೆ ವಸಂತಕುಮಾರಿ ಬರುವ ಮುನ್ನ ಆಕೆ ತಾಯಿ ರಾಜೇಶ್ವರಿ ಹಾಗೂ ಮಗು ಧರ್ಮತೇಜ್ರನ್ನು ಆಸೀಫ್ ಕೊಲೆ ಮಾಡಿದ್ದ ಎಂದು ಎಸ್ಪಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಮೇಲ್ನೋಟಕ್ಕೆ ಅಸಹಜ ಸಾವು ಎಂಬಂತೆ ಬಿಂಬಿತವಾಗಿತ್ತು. ಆದರೆ ಮೂವರಿಗೂ ಗಾಯಗಳಾಗಿರುವುದು ಕಂಡು ಬಂದಿತ್ತು. ಎಫ್ಎಸ್ಎಲ್ ವರದಿ ಬರಬೇಕಾಗಿದೆ. ಆರೀಫ್ ಹಾಗೂ ಆಸೀಫ್ ಸ್ವಂತ ಅಣ್ಣ ತಮ್ಮಂದಿರು. ವಸಂತಕುಮಾರಿ, ಆಸೀಫ್ ಹಾಗೂ ಆರೀಫ್ ಮೂರು ಜನರು ಗೊಂಬೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ತಮ್ಮನ ಮದುವೆ ಆದಾಗಿನಿಂದ ಮೂರು ಜನರನ್ನು ಕೊಲೆ ಮಾಡಿದ್ದಾನೆ ಎಂದು ಎಸ್ಪಿ ಯಶೋಧಾ ವಂಟಗೋಡಿ ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಓದಿ: ಕೊಪ್ಪಳ: ಅಜ್ಜಿ-ಮಗಳು-ಮೊಮ್ಮಗ ಮನೆಯಲ್ಲಿ ಶವವಾಗಿ ಪತ್ತೆ, ಸಾವಿನ ಸುತ್ತ ಅನುಮಾನದ ಹುತ್ತ - THREE PEOPLE DIED