ETV Bharat / state

ಹುಬ್ಬಳ್ಳಿಯ 'ಬಡವರ ಸಂಜೀವಿನಿ' ಕಿಮ್ಸ್ ಆಸ್ಪತ್ರೆಯ ಹೆಸರು ಬದಲು; ಇದು 3ನೇ ಬಾರಿ - KIMS Rename - KIMS RENAME

ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ಎಂದಿದ್ದ ಹೆಸರು, ಇನ್ಮುಂದೆ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಾಗಿ ಬದಲಾಗಲಿದೆ. ಸೆಪ್ಟೆಂಬರ್‌ 6ರಂದು ಕೆಎಂಸಿ ಸಂಸ್ಥಾಪಕರ ದಿನಕ್ಕೂ ಮುನ್ನ ಆಸ್ಪತ್ರೆಗೆ ಮರುನಾಮಕರಣ ಮಾಡಲಾಗುತ್ತಿದೆ.

ಹುಬ್ಬಳ್ಳಿಯ ಕಿಮ್ಸ್ ಹೆಸರು ಬದಲಾವಣೆ
ಹುಬ್ಬಳ್ಳಿ ಕಿಮ್ಸ್ (ETV Bharat)
author img

By ETV Bharat Karnataka Team

Published : Jun 24, 2024, 4:41 PM IST

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಬಡವರ 'ಸಂಜೀವಿನಿ' ಎಂದೇ ಖ್ಯಾತಿ ಪಡೆದಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಇನ್ಮುಂದೆ 'ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿ- ಆರ್‌ಐ)ಯಾಗಿ ಹೆಸರು ಬದಲಿಸಿಕೊಳ್ಳಲಿದೆ. ಸಂಸ್ಥೆಯ ಹೆಸರು ಹೀಗೆ ಬದಲಾಗುತ್ತಿರುವುದು ಇದು 3ನೇ ಬಾರಿ.

1957ರಲ್ಲಿ ಆರಂಭವಾದಾಗ ಕರ್ನಾಟಕ ವೈದ್ಯಕೀಯ ಕಾಲೇಜ್‌ (ಕೆಎಂಸಿ) ಎಂದು ಹೆಸರಿಡಲಾಗಿತ್ತು. 44 ವರ್ಷಗಳ ಬಳಿಕ, ಅಂದರೆ 1996ರಲ್ಲಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ಎಂದು ಮರುನಾಮಕರಣ ಮಾಡಲಾಗಿತ್ತು. 28 ವರ್ಷಗಳ ನಂತರ, ಇದೀಗ ಮತ್ತೊಮ್ಮೆ ಹೆಸರು ಬದಲಾಯಿಸಲು ನಿರ್ಧರಿಸಲಾಗಿದೆ. ಇದಕ್ಕೆ ಈಗಾಗಲೇ ಸರ್ಕಾರದಿಂದ ಒಪ್ಪಿಗೆಯೂ ದೊರೆತಿದ್ದು, ಎರಡು ತಿಂಗಳ ಒಳಗೆ ಆರಂಭದಲ್ಲಿದ್ದ ಹಳೆ ಹೆಸರಿನ ಜೊತೆಗೆ 'ಸಂಶೋಧನಾ ಸಂಸ್ಥೆ' ಎನ್ನುವ ಹೊಸ ಪದ ಸೇರ್ಪಡೆಯಾಗಲಿದೆ.

ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿರುವ ಮೆಡಿಕಲ್ ಕಾಲೇಜುಗಳು ಅತ್ಯಂತ ಹಳೆಯ ಸರ್ಕಾರಿ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳಾಗಿವೆ. ಬೆಂಗಳೂರು ಮತ್ತು ಮೈಸೂರಿನ ವೈದ್ಯಕೀಯ ಕಾಲೇಜುಗಳು ಸಂಶೋಧನಾ ಸಂಸ್ಥೆಗಳಾಗಿ ಈಗಾಗಲೇ ಹೆಸರು ಬದಲಿಸಿಕೊಂಡಿವೆ. ಸಂಶೋಧನಾ ಸಂಸ್ಥೆಯಾಗಿ ಹೆಸರು ಬದಲಿಸಿಕೊಳ್ಳುತ್ತಿರುವ ಮೂರನೇ ಕಾಲೇಜು ಹುಬ್ಬಳ್ಳಿಯ ಕಿಮ್ಸ್‌ ಆಗಿದೆ. ಕಲಬುರಗಿ ಮೆಡಿಕಲ್‌ ಕಾಲೇಜು ಸಹ ಸಂಶೋಧನಾ ಕೇಂದ್ರವೆಂದು ಹೆಸರು ಬದಲಿಸಿಕೊಳ್ಳುವ ಪ್ರಕ್ರಿಯೆಯಲ್ಲಿದೆ.

ಈ ಕುರಿತು ಕಿಮ್ಸ್‌ ನಿರ್ದೇಶಕ ಡಾ.ಎಸ್‌.ಎಫ್‌.ಕಮ್ಮಾರ್‌ 'ಈಟಿವಿ ಭಾರತ್'​ಗೆ ಪ್ರತಿಕ್ರಿಯಿಸಿ, "ಕಿಮ್ಸ್‌ ಎಂದಾಗ ಕಾರವಾರ ಮತ್ತು ಕೊಪ್ಪಳದ ಮೆಡಿಕಲ್‌ ಕಾಲೇಜು ಎಂದು ಜನರಲ್ಲಿ ಗೊಂದಲವಾಗುತ್ತಿತ್ತು. ಹಳೇ ವಿದ್ಯಾರ್ಥಿಗಳು ಕೆಂಎಸಿನೇ ಇರಬೇಕು, ಆ ಹೆಸರಲ್ಲಿ ಭಾವನಾತ್ಮ ಸಂಬಂಧ ಇದೆ ಎನ್ನುತ್ತಿದ್ದರು. ರೋಗಿಗಳು ಈಗಲೂ ಕೆಎಂಸಿ ಎಂದೇ ಹೇಳುತ್ತಾರೆ. ಈ ಕುರಿತು ಸರ್ಕಾರಕ್ಕೆ ಕೆಎಂಸಿ–ಆರ್‌ಐ(ಕರ್ನಾಟಕ ಮೆಡಿಕಲ್‌ ಕಾಲೇಜು–ಸಂಶೋಧನಾ ಸಂಸ್ಥೆ) ಎಂದು ಹೆಸರಿಡಲು ಪ್ರಸ್ತಾವ ಸಲ್ಲಿಸಲಾಗಿತ್ತು" ಎಂದರು.

"ಆದರೆ, ಸರ್ಕಾರ ಹುಬ್ಬಳ್ಳಿ ಇನ್‌ಸ್ಟಿಟ್ಯೂಟ್ ಆಫ್‌ ಮೆಡಿಕಲ್‌ ಸೈನ್ಸ್‌ ಎಂದು ಹೆಸರಿಟ್ಟುಕೊಳ್ಳಲು ಸೂಚಿಸಿತ್ತು. ಹುಬ್ಬಳ್ಳಿ ಇನ್‌ಸ್ಟಿಟ್ಯೂಟ್‌ ಎಂದು ಹೆಸರು ಇಟ್ಟರೆ ಮತ್ತೆ ಹೊಸತಾಗುತ್ತದೆ ಎಂದು, ನಾವು ಕೆಎಂಸಿ ಎಂದೇ ನಾಮಕರಣ ಮಾಡಲು ಅವಕಾಶ ನೀಡಬೇಕು ಎಂದಾಗ, ಸರ್ಕಾರ ಹಸಿರು ನಿಶಾನೆ ನೀಡಿತು. ಬೆಂಗಳೂರಿನ ಬಿಎಂಸಿ–ಆರ್‌ಐ ಮಾದರಿಯಲ್ಲಿ ಕೆಎಂಸಿ–ಆರ್‌ಐ ಎಂದು ನಾಮಕರಣ ಮಾಡಲು ಸರ್ಕಾರ ಎರಡು ತಿಂಗಳ ಹಿಂದೆಯೇ ಪತ್ರ ಬರೆದು ತಿಳಿಸಿದೆ. ಚುನಾವಣಾ ನೀತಿ ಸಂಹಿತೆಯಿಂದ ಮರು ನಾಮಕರಣ ಪ್ರಕ್ರಿಯೆ ವಿಳಂಬವಾಗಿದೆ. ಸದ್ಯದಲ್ಲಿಯೇ ನಡೆಯಲಿರುವ ವೈದ್ಯಕೀಯ ಕಾಲೇಜುಗಳ ಸಲಹಾ ಮಂಡಳಿಯಲ್ಲಿ ವಿಷಯ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಸೆಪ್ಟೆಂಬರ್‌ 6ರಂದು ಕೆಎಂಸಿ ಸಂಸ್ಥಾಪಕರ ದಿನವಿದ್ದು, ಅದಕ್ಕೂ ಪೂರ್ವವೇ ಮರುನಾಮಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು" ಎಂದು ತಿಳಿಸಿದರು.

ಸಂಶೋಧನಾ ಕೇಂದ್ರವಾದರೆ ಲಾಭವೇನು?: ವೈದ್ಯಕೀಯ ಕಾಲೇಜನ್ನು ಸಂಶೋಧನಾ ಕೇಂದ್ರ ಮಾಡುವುದರಿಂದ ತೆರಿಗೆ ವಿನಾಯ್ತಿ ದೊರೆಯುತ್ತದೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕೆಲವು ವೈದ್ಯಕೀಯ ಸಲಕರಣೆಗಳಿಗೆ ಸುಂಕ ರಿಯಾಯಿತಿ ಸಿಗುತ್ತದೆ.

ಇದನ್ನೂ ಓದಿ: ಆನ್‌ಲೈನ್‌ ವಂಚನೆಗಳ ಬಗ್ಗೆ ಎಚ್ಚರ! ಒಬ್ಬರಿಗೆ ₹16.87 ಲಕ್ಷ, ಮತ್ತೊಬ್ಬರಿಗೆ ₹7.74 ಲಕ್ಷ ಮೋಸ - Cyber Crime

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.