ETV Bharat / state

ವೃತ್ತಿಪರ ಕೋರ್ಸ್​ಗಳ‌ ಪ್ರವೇಶ ಅರ್ಜಿ ಸಲ್ಲಿಕೆಗೆ ಮತ್ತೊಂದು ಅವಕಾಶ ನೀಡಿದ ಕೆಇಎ - Karnataka Examination Authority

ವೃತ್ತಿಪರ ಕೋರ್ಸ್​ಗಳ‌ ಪ್ರವೇಶಕ್ಕೆ ಮಾರ್ಚ್​ 20ರ ವರೆಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಕೆಇಎ ಅವಕಾಶ ನೀಡಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
author img

By ETV Bharat Karnataka Team

Published : Mar 18, 2024, 7:21 PM IST

ಬೆಂಗಳೂರು: ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್​ಗಳ‌ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ‌ ಕೊನೆ‌ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತೊಮ್ಮೆ ವಿಸ್ತರಿಸಿದೆ. ಮಾರ್ಚ್​ 20ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಶುಲ್ಕ ಪಾವತಿಸಲು ಮಾ‌ರ್ಚ್​ 21 ಕೊನೆ ದಿನವಾಗಿದೆ. ಮತ್ತೊಮ್ಮೆ ವಿಸ್ತರಣೆ ಇರುವುದಿಲ್ಲ. ಇದೇ ಕೊನೆಯ ಅವಕಾಶ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ವೃತ್ತಿಪರ ಕೋರ್ಸ್​ಗಳ ಪ್ರವೇಶಾತಿಗೆ 18-04-2024 ಮತ್ತು 19-04-2024 ರಂದು ನಡೆಸಲಾಗುವ ಸಿಇಟಿ-2024ಕ್ಕೆ ಅರ್ಜಿ ಸಲ್ಲಿಸಲು ಸಾಕಷ್ಟು ಅವಕಾಶ ನೀಡಿದ್ದರೂ ಮತ್ತೆ ದಿನಾಂಕ ವಿಸ್ತರಣೆ ಮಾಡಲು ಅಭ್ಯರ್ಥಿಗಳು ಕೋರಿಕೆಯನ್ನು ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 18-03-2024 ರ ಸಂಜೆ 6.00 ಗಂಟೆಯಿಂದ 20-03-2024 ರ ರಾತ್ರಿ 11.59 ರ ವರೆಗೆ ನೋಂದಣಿ ಮಾಡಿ ಅರ್ಜಿ ಸಲ್ಲಿಸಲು ಹಾಗು 21-03-2024 ರ ಸಂಜೆ 5.30 ರ ವರೆಗೆ ಶುಲ್ಕ ಪಾವತಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ. ಇಲ್ಲಿಯವರೆಗೆ ಅರ್ಜಿ ಸಲ್ಲಿಸದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಹಾಗು ಶುಲ್ಕ ಪಾವತಿಸಬಹುದಾಗಿದೆ. ಈ ಮೇಲಿನ ದಿನಾಂಕಗಳಂದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬೆಂಗಳೂರು ಕೇಂದ್ರದಲ್ಲಿ ಮಾತ್ರ ಸಿಇಟಿ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ವೃತ್ತಿಪರ ಕೋರ್ಸ್​ಗಳಿಗೆ ನೋಂದಣಿ, ಆನ್‌ಲೈನ್ ಅರ್ಜಿ ಸಲ್ಲಿಸುವುದು ಮತ್ತು ಅರ್ಹತಾ ಷರತ್ತುಗಳ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್​​ನಲ್ಲಿ ಪ್ರಕಟಿಸಿರುವ ಅರ್ಜಿ ಸಲ್ಲಿಕೆ ಹಾಗು ಪರಿಶೀಲನೆಗೆ ಮಾಹಿತಿ ಪುಸ್ತಕ ಮತ್ತು ದಿನಾಂಕ 09-01-2024 ರ ಅಧಿಸೂಚನೆಯನ್ನು ಓದಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ.

ಇದನ್ನೂ ಓದಿ : Job Alert: ವಿಧಾನ ಪರಿಷತ್​​ನ ವಿವಿಧ ಹುದ್ದೆಗಳ ಭರ್ತಿಗೆ ಕೆಇಎ ಅಧಿಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.