ಹೈದರಾಬಾದ್: ಗುಣಮಟ್ಟದ ಶಿಕ್ಷಣ ಮತ್ತು ಸೌಲಭ್ಯಗಳನ್ನು ಒಳಗೊಂಡಂತೆ ದೇಶದ ಶಿಕ್ಷಣ ಸಂಸ್ಥೆಗಳಿಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರ್ಯಾಂಕಿಂಗ್ ಫ್ರೇಮ್‌ವರ್ಕ್ (NIRF-2024) ಶ್ರೇಯಾಂಕವನ್ನು ನೀಡುತ್ತಿದ್ದು, 2024 ರ ಸಾಲಿನ ರ್ಯಾಂಕಿಂಗ್ ಅನ್ನು ಸೋಮವಾರ ಬಿಡುಗಡೆ ಮಾಡಿದೆ. ಅದರಲ್ಲಿ ಕರ್ನಾಟಕದ ಹಲವು ಶಿಕ್ಷಣ ಸಂಸ್ಥೆಗಳು 100 ರ ಒಳಗೆ ಸ್ಥಾನ ಗಿಟ್ಟಿಸಿವೆ. ಅದರಲ್ಲೂ ಬೆಂಗಳೂರಿನ ಐಐಎಸ್ಸಿ ಸತತ 9ನೇ ವರ್ಷವೂ ದೇಶದಲ್ಲೇ ಅತ್ಯುನ್ನತ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ವಿಶ್ವವಿದ್ಯಾನಿಲಯಗಳಲ್ಲಿ ಮೊದಲ ಸ್ಥಾನ ಪಡೆದರೆ, ಒಟ್ಟಾರೆ ವಿಭಾಗದಲ್ಲಿ ದೇಶದಲ್ಲೇ ಎರಡನೇ ಸ್ಥಾನಿಯಾಗಿದೆ. ಅದೇ ರೀತಿಯಲ್ಲಿ, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ (NLSIU) ಕಾನೂನು ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಬೆಂಗಳೂರು (ಐಐಎಂ-ಬಿ) ಆಡಳಿತ ಶಿಕ್ಷಣ ಕ್ಷೇತ್ರದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ಒಟ್ಟಾರೆ ವಿಭಾಗಗಳ ಶ್ರೇಯಾಂಕದಲ್ಲಿ ರಾಜ್ಯದ ಸಂಸ್ಥೆಗಳು: ಸಾರ್ವತ್ರಿಕ ವಿಭಾಗದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು ದೇಶದಲ್ಲಿ 2 ನೇ ಸ್ಥಾನ ಪಡೆದಿದೆ. ಕಳೆದ ವರ್ಷವೂ ಇದೇ ಸ್ಥಾನದಲ್ಲಿತ್ತು. ಇನ್ನುಳಿದಂತೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ 14, ಜೆಎಸ್ಎಸ್ ಉನ್ನತ ಶಿಕ್ಷಣ ಅಕಾಡೆಮಿ 36, ಸುರತ್ಕಲ್ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 46, ಮೈಸೂರು ವಿಶ್ವವಿದ್ಯಾಲಯ 86, ಕೈಸ್ಟ್ ಚರ್ಚ್ 90, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 159 ನೇ ಸ್ಥಾನ ಪಡೆದಿವೆ.
ವಿಶ್ವವಿದ್ಯಾಲಯಗಳ ಶ್ರೇಯಾಂಕ ಪಟ್ಟಿ: ದೇಶದ ಅತ್ಯುತ್ತ್ತಮ ವಿಶ್ವವಿದ್ಯಾಲಯಗಳ ಪೈಕಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಅಗ್ರಸ್ಥಾನದಲ್ಲಿದೆ. ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿ 4, ಮೈಸೂರಿನ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ 24, ಮೈಸೂರು ವಿಶ್ವವಿದ್ಯಾಲಯ 54, ಕೈಸ್ಟ್ ಚರ್ಚ್ 60, ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ, ನಿಟ್ಟೆ ವಿಶ್ವವಿದ್ಯಾಲಯ 66, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 75, ಬೆಂಗಳೂರು ವಿಶ್ವವಿದ್ಯಾಲಯ 81, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ 90, ಯೆನೆಪೋಯ ಮೆಡಿಕಲ್ ವಿಶ್ವವಿದ್ಯಾಲಯ 95 ನೇ ಸ್ಥಾನ ಪಡೆದಿದೆ.
ಎಂಜಿನಿಯರಿಂಗ್ ವಿಭಾಗ: ಸುರತ್ಕಲ್ ಎನ್ಐಟಿಕೆ 17, ಮಣಿಪಾಲ್ ತಾಂತ್ರಿಕ ವಿಶ್ವವಿದ್ಯಾಲಯ 56, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 69, ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ, ಬೆಂಗಳೂರು 74, ಎಂಎಸ್ ರಾಮಯ್ಯ ತಾಂತ್ರಿಕ ಸಂಸ್ಥೆ 75, ಕ್ರೈಸ್ಟ್ ಚರ್ಚ್ 93, ಜೈನ್ ವಿಶ್ವವಿದ್ಯಾಲಯ ಬೆಂಗಳೂರು 95, ಆರ್ವಿ ಕಾಲೇಜ್ ಆಫ್ ಎಂಜಿನಿಯರಿಂಗ್ 99, ಸಿದ್ಧಗಂಗಾ ತಾಂತ್ರಿಕ ವಿಶ್ವವಿದ್ಯಾಲಯ 100ನೇ ಸ್ಥಾನ ಪಡೆದುಕೊಂಡಿವೆ.
ವೈದ್ಯಕೀಯ ವಿಭಾಗ: ವೈದ್ಯಕೀಯ ವಿಭಾಗದಲ್ಲಿ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ದೇಶದಲ್ಲೇ 4 ಸ್ಥಾನ ಪಡೆದುಕೊಂಡಿದೆ. ಇದರೊಂದಿಗೆ ಮಣಿಪಾಲ್ನ ಕಸ್ತೂರ್ಬಾ ವೈದ್ಯಕೀಯ ಕಾಲೇಜು 9, ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು 28, , ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು 33, ಮೈಸೂರಿನ JSS ವೈದ್ಯಕೀಯ ಕಾಲೇಜು 39, ಬೆಂಗಳೂರಿನ ಎಂಎಸ್ ರಾಮಯ್ಯ ವೈದ್ಯಕೀಯ ಕಾಲೇಜು 46 ನೇ ಸ್ಥಾನ ಪಡೆದಿದೆ.
ಕಾಲೇಜು ವಿಭಾಗ: ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ ಕಾಲೇಜು ದೇಶದಲ್ಲಿ 55, ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು 58, ಬೆಂಗಳೂರಿನ ಕ್ರಿಸ್ಟು ಜಯಂತಿ ಕಾಲೇಜು 60, ಬೆಂಗಳೂರಿನ ಎಂಎಸ್ ರಾಮಯ್ಯ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಅಂಡ್ ಕಾಮರ್ಸ್ 87 ನೇ ಸ್ಥಾನ ಪಡೆದಿವೆ.
ಆಡಳಿತ ವಿಭಾಗ: ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಎ ಮ್ಯಾನೇಜ್ಮೆಂಟ್ ದೇಶದಲ್ಲಿ 2ನೇ ಸ್ಥಾನ ಪಡೆದಿದೆ. ಟಿಎ ಪೈ ನಿರ್ವಹಣಾ ಸಂಸ್ಥೆ, ಮಣಿಪಾಲ 58, ಕ್ರೈಸ್ಟ್ ವಿಶ್ವವಿದ್ಯಾಲಯ 60, ಅಲಯನ್ಸ್ ವಿಶ್ವವಿದ್ಯಾಲಯ 71, ಜೈನ್ ವಿಶ್ವವಿದ್ಯಾಲಯ 77 ನೇ ಕ್ರಮಾಂಕದಲ್ಲಿದೆ.
ಕಾನೂನು ವಿಭಾಗ: ಕಾನೂನು ವಿಶ್ವವಿದ್ಯಾಲಯಗಳಲ್ಲಿ ದೇಶಕ್ಕೆ ರಾಜ್ಯದ ಶಿಕ್ಷಣ ಸಂಸ್ಥೆ ಪ್ರಥಮ ಸ್ಥಾನ ಪಡೆದಿದೆ. ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಮೊದಲಿದ್ದರೆ, ಕ್ರೈಸ್ಟ್ ವಿಶ್ವವಿದ್ಯಾಲಯ 15, ಅಲಯನ್ಸ್ ವಿಶ್ವವಿದ್ಯಾಲಯ 18 ನೇ ಸ್ಥಾನದಲ್ಲಿದೆ.
ಕೃಷಿ ವಿಶ್ವವಿದ್ಯಾಲಯ: ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ದೇಶದಲ್ಲಿ 11 ನೇ ಸ್ಥಾನದಲ್ಲಿದ್ದರೆ, ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ 24ನೇ ಶ್ರೇಯಾಂಕ ಪಡೆದಿದೆ.
ಪಬ್ಲಿಕ್ ವಿಶ್ವವಿದ್ಯಾಲಯ: ಈ ವಿಭಾಗದಲ್ಲಿ ಮೈಸೂರು ವಿಶ್ವವಿದ್ಯಾಲಯವು ದೇಶದಲ್ಲಿ 19ನೇ ಸ್ಥಾನಿಯಾಗಿದೆ. ಬಳಿಕ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 22, ಬೆಂಗಳೂರು ವಿಶ್ವವಿದ್ಯಾಲಯ 24, ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ 44 ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಬೆಂಗಳೂರಿನ ಐಐಎಸ್ಸಿಗೆ ಸತತ 9ನೇ ವರ್ಷವೂ ದೇಶದ ನಂಬರ್ 1 ವಿಶ್ವವಿದ್ಯಾಲಯ ಹೆಗ್ಗಳಿಕೆ - NIRF Ranking 2024