ETV Bharat / state

ಕುಣಿಗಲ್ ಶಾಸಕ ರಂಗನಾಥ್ ಆಯ್ಕೆ ಎತ್ತಿ ಹಿಡಿದ ಹೈಕೋರ್ಟ್; ಪರಾಜಿತ ಬಿಜೆಪಿ ಅಭ್ಯರ್ಥಿ ಅರ್ಜಿ ವಜಾ - High Court

author img

By ETV Bharat Karnataka Team

Published : Jun 29, 2024, 5:39 PM IST

ಕುಣಿಗಲ್ ಕ್ಷೇತ್ರದ ಕಾಂಗ್ರೆಸ್​ ಶಾಸಕ ಡಾ.ರಂಗನಾಥ್ ಅವರ ಆಯ್ಕೆ ರದ್ದುಪಡಿಸಿ, ತಮ್ಮನ್ನು ಶಾಸಕರನ್ನಾಗಿ ಘೋಷಣೆ ಮಾಡಬೇಕು ಎಂದು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣ ಕುಮಾರ್ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

High Court
ಹೈಕೋರ್ಟ್ (ETV Bharat)

ಬೆಂಗಳೂರು: ಚುನಾವಣಾ ಅಕ್ರಮ ಎಸಗಿ ಆಯ್ಕೆಯಾದ ಆರೋಪದ ಮೇಲೆ ಕುಣಿಗಲ್ ಶಾಸಕ ಡಾ.ರಂಗನಾಥ್‌ ಅವರ ಶಾಸಕ ಸ್ಥಾನ ರದ್ದುಗೊಳಿಸುವಂತೆ ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ. ಅರ್ಜಿಯಲ್ಲಿರುವ ಆರೋಪಗಳು ಊಹೆ ಮತ್ತು ಕಲ್ಪನೆಯ ಆಧಾರದಲ್ಲಿವೆ ಎಂದು ನ್ಯಾಯ ಪೀಠ ಅಭಿಪ್ರಾಯಪಟ್ಟಿದೆ.

ಕುಣಿಗಲ್ ಶಾಸಕ ಡಾ.ರಂಗನಾಥ್ ಅವರ ಆಯ್ಕೆ ರದ್ದುಪಡಿಸಿ, ತಮ್ಮನ್ನು ಶಾಸಕರನ್ನಾಗಿ ಘೋಷಣೆ ಮಾಡಬೇಕು ಎಂದು ಕೋರಿ ಕೃಷ್ಣ ಕುಮಾರ್ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆಯನ್ನು ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ನಡೆಸಿದರು.

ಪ್ರಜಾಪ್ರತಿನಿಧಿ ಕಾಯ್ದೆ ಅಡಿಯಲ್ಲಿ ತಿಳಿಸಿರುವಂತೆ ಅರ್ಜಿಯಲ್ಲಿ ಭೌತಿಕ ಅಂಶಗಳನ್ನು ಹೊಂದಿಲ್ಲ ಕಾನೂನಿನಡಿ ಅಗತ್ಯವನ್ನು ಪೂರೈಸುವುದಿಲ್ಲ. ಇಡೀ ಅರ್ಜಿಯಲ್ಲಿನ ಆರೋಪಗಳು ಊಹೆ ಮತ್ತು ಕಲ್ಪನೆಯ ಆಧಾರದಲ್ಲಿವೆ. ಹೀಗಾಗಿ ಡಾ. ರಂಗನಾಥ್ ಅವರ ಆಯ್ಕೆ ಅಸಿಂಧು ಎಂಬುದಾಗಿ ಘೋಷಣೆ ಮಾಡಲು ಈ ಅಂಶಗಳು ಆಧಾರವಾಗುವುದಿಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸುವುದಾಗಿ ನ್ಯಾಯ ಪೀಠ ತಿಳಿಸಿತು.

ಅರ್ಜಿದಾರರು ಆರೋಪಿಸುವ ಎಲ್ಲ ಅಂಶಗಳನ್ನು ಅಗತ್ಯ ಕಾರಣಗಳೊಂದಿಗೆ ನೀಡಬೇಕು. ಯಾವುದೇ ರೀತಿಯಲ್ಲಿಯೂ ಅಸ್ಪಷ್ಟವಾಗಿರಬಾರದು. ಇಲ್ಲವಾದಲ್ಲಿ ಅದು ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಬರುವುದಿಲ್ಲ. ಅರ್ಜಿದಾರರ ಆರೋಪಗಳಿಗೆ ಯಾವದೇ ಆಧಾರಗಳಿಲ್ಲ. ಶಾಸಕ ರಂಗನಾಥ್ ಸಮ್ಮತಿಯೊಂದಿಗೆ ಅವರ ಏಜೆಂಟರ ವಿರುದ್ಧ ಆರೋಪಗಳು ಚುನಾವಣಾ ಅಕ್ರಮದ ವ್ಯಾಪ್ತಿಗೆ ಬರುವುದಿಲ್ಲ. ಯಾವುದೇ ಆರೋಪಗಳು ನಿರ್ದಿಷ್ಟ ಮತ್ತು ಸ್ಪಷ್ಟವಾಗಿಲ್ಲ. ಹೀಗಾಗಿ ಅರ್ಜಿಯ ವಿಚಾರಣೆ ಮುಂದುವರೆಸುವುದಕ್ಕೆ ಕಾನೂನಿನ ದುರ್ಬಳಕೆ ಆಗಲಿದೆ ಎಂದೂ ಹೇಳಿತು.

ಪ್ರಕರಣದಲ್ಲಿ ರಂಗನಾಥ್ ಪರ ಮತಯಾಚನೆಗೆ ಅಡುಗೆ ಸೆಟ್‌ಗಳನ್ನು ವಿತರಣೆ ಆರೋಪದಲ್ಲಿ ಬಂಧನಕೊಳಗಾಗಿದ್ದ ಆರೋಪಿಗಳು ಶಾಸಕರಾದ ರಂಗನಾಥ್ ಅವರಿಗೆ ಗೊತ್ತಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಆರೋಪಿಗಳು ತನಿಖೆ ವೇಳೆ ರಂಗನಾಥ್ ಹೆಸರುನ್ನು ತಿಳಿಸಿಲ್ಲ. ಅಲ್ಲದೆ, ಚುನಾವಣಾ ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ದಾಖಲಾಗಿರುವ ಪ್ರಕರಣಗಳು ಚುನಾವಣಾ ಅಕ್ರಮ ಅಡಿಯಲ್ಲಿ ಬರುವುದಿಲ್ಲ. ಹೀಗಾಗಿ ಆರೋಪ ಸಾಬೀತಾಗುವುದಿಲ್ಲ ಎಂದು ನ್ಯಾಯ ಪೀಠ ವಿವರಿಸಿತು.

ಜತೆಗೆ, ರಂಗನಾಥ್ ಅನುಯಾಯಿಗಳು ಪ್ರೀಪೇಡ್ ಕಾರ್ಡ್ ವಿತರಣೆ ಮಾಡಿರುವುದು ಒಪ್ಪಿಕೊಂಡಿದ್ದಾರೆ. ಆದರೆ, ಕಾರ್ಡ್‌ಗಳನ್ನು ಬಳಸಿ ಅದರ ಲಾಭ ಮಾಡಿಕೊಂಡಿಲ್ಲ. ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಇರುವ ಕಾರ್ಡ್‌ಗಳು ನಕಲಿಯಾಗಿವೆ. ಹೀಗಾಗಿ ಆರೋಪ ಆಧಾರ ರಹಿತವಾಗಿದೆ. ಇದೇ ಕಾರಣದಿಂದ ರಂಗನಾಥ್ ಆಯ್ಕೆ ಅಸಿಂಧುಗೊಳಿಸಲಾಗುವುದಿಲ್ಲ ಎಂದು ನ್ಯಾಯ ಪೀಠ ಸ್ಪಷ್ಪಪಡಿಸಿತು.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಡಿ. ಕೃಣ್ಣ ಕುಮಾರ್ 16ನೇ ವಿದಾನಸಭಾ ಚುನಾವಣೆಗೆ ಕುಣಿಗಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ರಂಗನಾಥ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಚುನಾವಣೆಯಲ್ಲಿ ಡಾ.ರಂಗನಾಥ್ ವಿಜಯಿ ಎಂಬುದಾಗಿ ಘೋಷಣೆ ಮಾಡಲಾಗಿತ್ತು.

ಆದರೆ, ಡಾ.ರಂಗನಾಥ್ ಅವರು ತಮ್ಮ ಏಜೆಂಟ್‌ಗಳ ಮೂಲಕ 2023ರ ಮಾರ್ಚ್​ ತಿಂಗಳಲ್ಲಿ ಕ್ಷೇತ್ರದ ಎಲ್ಲ ಮತದಾರರಿಗೆ ಅಡುಗೆ ಮತ್ತು ಊಟ ಮಾಡುವುದಕ್ಕೆ ಅಗತ್ಯವಿರುವ ಪರಿಕರಗಳು, ಕಾಂಗ್ರೆಸ್ ಪಕ್ಷದಿಂದ ವಿತರಿಸಿದ್ದ ಪ್ರೀಪೇಯ್ಡ್ ಕಾರ್ಡ್‌ಗಳು ಹಾಗೂ ತಮ್ಮ ಆಸ್ತಿಯ ವಿವರಗಳನ್ನು ಸಲ್ಲಿಸಿರಲಿಲ್ಲ. ಆ ಮೂಲಕ ಚುನಾವಣಾ ಅಕ್ರಮಗಳನ್ನು ನಡೆಸುವ ಮೂಲಕ ಆಯ್ಕೆಯಾಗಿದ್ದಾರೆ ಎಂಬುದಾಗಿ ಕೃಷ್ಣ ಕುಮಾರ್ ತನ್ನ ಅರ್ಜಿಯಲ್ಲಿ ಆರೋಪಿಸಿದ್ದರು.

ಚುನಾವಣೆಗೂ ಮುನ್ನವೇ ಮತದಾರರಿಗೆ ಹಂಚಲು ತಂದಿದ್ದ ರಂಗನಾಥ್ ಮತ್ತು ಬೆಂಗಳೂರು ಗ್ರಾಮಾಂತರ ಸಂಸದರಾಗಿದ್ದ ಡಿ.ಕೆ. ಸುರೇಶ್ ಅವರ ಭಾವಚಿತ್ರವುಳ್ಳ ಅಡುಗೆ ಉಪಕರಣಗಳನ್ನು ತಹಶೀಲ್ದಾರ್ ವಾಹನ ಸಮೇತ ವಶಕ್ಕೆ ಪಡೆದುಕೊಂಡಿದ್ದರು. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದ ಅನುಮತಿ ಮೇರೆಗೆ ಈ ಉಪಕರಣಗಳ ಬಿಡುಗಡೆಯಾದ ಬಳಿಕ ಮತದಾರರಿಗೆ ಹಂಚಿಕೆ ಮಾಡಿದ್ದರು. ಈ ಕಾರಣಗಳಿಂದ ರಂಗನಾಥ್ ಅವರ ಆಯ್ಕೆ ಅಸಿಂಧು ಎಂದು ಘೋಷಣೆ ಮಾಡಬೇಕು, ತಮ್ಮನ್ನು ಕ್ಷೇತ್ರದ ಶಾಸಕ ಎಂಬುದಾಗಿ ಪ್ರಕಟಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೃಷ್ಣ ಕುಮಾರ್​ ಕೋರಿದ್ದರು.

ಇದನ್ನೂ ಓದಿ: ಪೆನ್‌ಡ್ರೈವ್ ಹಂಚಿಕೆ: ಪ್ರೀತಂಗೌಡ ವಿರುದ್ಧದ ತನಿಖೆಗೆ ಹೈಕೋರ್ಟ್ ಅನುಮತಿ, ಬಂಧಿಸದಂತೆ ನಿರ್ಬಂಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.