ETV Bharat / state

ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಗಾದಿ ಹಿಡಿದ ಕಾಂಗ್ರೆಸ್; ಕೆ. ಚಮನ್ ಸಾಬ್ ಮೇಯರ್ ಆಗಿ ಆಯ್ಕೆ - Davanagere corporation election

author img

By ETV Bharat Karnataka Team

Published : 2 hours ago

ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಆಗಿ ಕೆ. ಚಮನ್​ ಸಾಬ್​ ಹಾಗೂ ಉಪಮೇಯರ್ ಆಗಿ ಸೋಗಿ ಶಾಂತಕುಮಾರ್ ಅವರು ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್​​ ಆದಿತ್ಯ ಬಿಸ್ವಾಸ್​ ಭಾಗವಹಿಸಿದ್ದರು.

DAVANAGERE CORPORATION
ದಾವಣಗೆರೆ ಮಹಾನಗರ ಪಾಲಿಕೆ (ETV Bharat)

ದಾವಣಗೆರೆ : ಪಾಲಿಕೆ ಮೇಯರ್ ಆಗಿ ಕೆ. ಚಮನ್ ಸಾಬ್ ಹಾಗೂ ಉಪಮೇಯರ್ ಆಗಿ ಸೋಗಿ ಶಾಂತಕುಮಾರ್ ಆಯ್ಕೆಯಾಗಿದ್ದಾರೆ. ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರಸನ್ನಕುಮಾರ್ ಕೆ 17 ಮತ ಪಡೆದಿದ್ದರೆ, ಇತ್ತ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಕೆ. ಚಮನ್ ಸಾಬ್ ಅವರು 30 ಮತಗಳನ್ನು ಪಡೆದು ಆಯ್ಕೆಯಾದರು.

ಇನ್ನು ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಎಸ್. ಟಿ ವೀರೇಶ್ 17 ಮತಗಳನ್ನ ಪಡೆದರೆ, ಕಾಂಗ್ರೆಸ್ ಪಕ್ಷದ ಸ್ಪರ್ಧಿ ಸೋಗಿ ಶಾಂತಕುಮಾರ್ 30 ಮತಗಳನ್ನು ಪಡೆದು ಉಪಮೇಯರ್ ಆಗಿ ಆಯ್ಕೆಯಾದರು. ಇನ್ನು ಈ ಮೇಯರ್ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಭಾಗವಹಿಸಿದ್ದರು.

ನೂತನ ಮೇಯರ್​ ಕೆ ಚಮನ್ ಸಾಬ್ ಮಾತನಾಡಿದರು (ETV Bharat)

ಚುನಾವಣೆ ಪ್ರಕ್ರಿಯೆ ನಡೆದಿದ್ದು ಹೇಗೆ? : ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಮೇಯರ್ ಚುನಾವಣೆ ಪ್ರಕ್ರಿಯೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಹಾನ್ ಆದಿತ್ಯ ಬಿಸ್ವಾಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮೇಯ‌ರ್ ಸ್ಥಾನವು ಹಿಂದುಳಿದ ವರ್ಗ 'ಅ' ಮತ್ತು ಉಪಮೇಯರ್ ಸ್ಥಾನವು ಹಿಂದುಳಿದ ವರ್ಗ 'ಬ' ಗೆ ಮೀಸಲಿತ್ತು. ಪಾಲಿಕೆ ಆಡಳಿತ ಅವಧಿಗೆ ಕೇವಲ ನಾಲ್ಕು ತಿಂಗಳು, 20 ದಿನಗಳಿಗೆ ಮಾತ್ರ ಉಳಿದಿದೆ.

ಪ್ರಸ್ತುತ ದಾವಣಗೆರೆ ಮಹಾನಗರ ಪಾಲಿಕೆಯ ಒಟ್ಟು 45 ಸದಸ್ಯರ ಪೈಕಿ ಓರ್ವ ಸದಸ್ಯರು ಅಕಾಲಿಕ ನಿಧನ ಹೊಂದಿದ್ದಾರೆ. ಇದರಿಂದ ಸದಸ್ಯರ ಬಲ 44ಕ್ಕಿದೆ. ಇನ್ನು ಸಂಸದರು, ಇಬ್ಬರು ಶಾಸಕರು, ಓರ್ವ ವಿಧಾನ ಪರಿಷತ್ ಸದಸ್ಯರು ಸೇರಿದಂತೆ 48 ಜನ ಮತದಾನ ಮಾಡುವ ಅರ್ಹತೆ ಕಾಂಗ್ರೆಸ್ ಹೊಂದಿದೆ. ಕಾಂಗ್ರೆಸ್ ತನ್ನ ಸದಸ್ಯರೊಟ್ಟಿಗೆ ಮೂವರು ಪಕ್ಷೇತರ ಅಭ್ಯರ್ಥಿಗಳು, ಬಿಜೆಪಿಯಿಂದ ಬಂದಿರುವ ನಾಲ್ಕು ಸದಸ್ಯರ ಬಲದಿಂದಾಗಿ ಅಧಿಕಾರ ಹಿಡಿಯಲು ಯಶಸ್ವಿಯಾಯಿತು. ಉಪ ಮೇಯ‌ರ್ ಸ್ಥಾನಕ್ಕೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಸೋಗಿ ಶಾಂತಕುಮಾರ್ ಆಯ್ಕೆಯಾಗಿದ್ದು, ವಿಶೇಷವಾಗಿತ್ತು.

K Chaman Sab
ಕೆ. ಚಮನ್ ಸಾಬ್ ಹಾಗೂ ಸೋಗಿ ಶಾಂತಕುಮಾರ್ (ETV Bharat)

ಮೊದಲ ಬಾರಿ ಮೇಯರ್ ಆಗಿ ಅಲ್ಪಸಂಖ್ಯಾತರು ಆಯ್ಕೆ : ಮಹಾನಗರ ಪಾಲಿಕೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತರು ಮೊದಲ ಬಾರಿ ಮೇಯರ್ ಆಗಿ ಆಯ್ಕೆಯಾದರು. ಜ. 06, 2007 ರಂದು ಪಾಲಿಕೆ ಜಾರಿಗೆ ಬಂದಿದ್ದು, ಒಟ್ಟು 17 ವರ್ಷಗಳೇ ಕಳೆದಿವೆ.

ಇದೇ ಮೊಟ್ಟಮೊದಲ ಬಾರಿಗೆ ಮುಸ್ಲಿಂ ಪಾಲಿಕೆ ಸದಸ್ಯ ಕೆ. ಚಮನ್ ಸಾಬ್ ಮೇಯರ್ ಆಗಿ ಆಯ್ಕೆಯಾದರು. ಅಲ್ಲದೇ ಉಸ್ತುವಾರಿ ಸಚಿವ ಎಸ್ ಎಸ್​ ಮಲ್ಲಿಕಾರ್ಜುನ್‌, ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.‌ ಪ್ರಭಾ ಮಲ್ಲಿಕಾರ್ಜುನ್‌ ಅವರು ನೂತನ ಮೇಯರ್ ಕೆ.‌ ಚಮನ್ ಸಾಬ್​ ಅವರಿಗೆ ಅಭಿನಂದಿಸಿದರು.

ನೂತನ ಮೇಯರ್ ಕೆ ಚಮನ್ ಸಾಬ್ ಪ್ರತಿಕ್ರಿಯಿಸಿ, "ನಾಲ್ಕು ತಿಂಗಳು ಮಾತ್ರ ಆಡಳಿತ ನಡೆಸಲು ಕಾಲಾವಕಾಶ ಇದೆ. ಪಾರದರ್ಶಕ ಆಡಳಿತ ನೀಡಲು ಪ್ರಯತ್ನ ಮಾಡ್ತೇನೆ, ಮೇಯರ್ ಆಗಲು ಸಚಿವ ಎಸ್. ಎಸ್ ಮಲ್ಲಿಕಾರ್ಜುನ್‌, ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌ ಸಹಕಾರದಿಂದ ಈ ಗಾದಿ ಸಿಕ್ಕಿದೆ'' ಎಂದು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ : ಚಾಮರಾಜನಗರ ನಗರಸಭೆ ಬಿಜೆಪಿ ತೆಕ್ಕೆಗೆ: ಕೊನೆ ಘಳಿಗೆಯಲ್ಲಿ ಗದ್ದುಗೆ ಕಳೆದುಕೊಂಡ ಕಾಂಗ್ರೆಸ್ - Chamarajanagar Corporation Election

ETV Bharat Logo

Copyright © 2024 Ushodaya Enterprises Pvt. Ltd., All Rights Reserved.