ಮೈಸೂರು: ನಗರದಲ್ಲಿ ಭಾನುವಾರ ಮುಕ್ತಾಯವಾದ ಐಟಿಎಫ್ ಮೈಸೂರು ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಅಮೆರಿಕದ ಎರಡನೇ ಶ್ರೀಲಂಕಾದ ಆಟಗಾರ್ತಿ ಜೆಸ್ಸಿ ಆನಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಮೈಸೂರಿನ ಚಾಮರಾಜಪುರಂನಲ್ಲಿರುವ ಮೈಸೂರು ಟೆನ್ನಿಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಜೆಸ್ಸಿ ಆನಿ 3-6, 6-3, 7-6 (8-6) ಸೆಟ್ಗಳಿಂದ, ಭಾರತದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಶ್ರೀವಲ್ಲಿ ರಶ್ಮಿಕಾ ಭಾಮಿದಿಪಾಟಿ ವಿರುದ್ಧ ಗೆಲುವು ಸಾಧಿಸಿದರು. ಇದರೊಂದಿಗೆ 15,000 ಡಾಲರ್ಗಳ ಮೊತ್ತದ ಪ್ರಶಸ್ತಿಯನ್ನು ಜಯಿಸಿದರು.
ಫೈನಲ್ ಪಂದ್ಯದಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮೊದಲ ಸೆಟ್ನಲ್ಲಿ ಶ್ರೀವಲ್ಲಿ ರಶ್ಮಿಕಾ ಭಾಮಿದಿಪಾಟಿ (6-3) ಜಯ ಸಾಧಿಸಿದ್ದರು. ಆದರೆ, ಹಿನ್ನಡೆ ಬಳಿಕ ಪುಟಿದೆದ್ದ ಆನಿ, 2ನೇ ಸೆಟ್ನಲ್ಲಿ 6-3 ಅಂಕಗಳಿಂದ ಮೇಲುಗೈ ಸಾಧಿಸಿದರು. ಈ ನಡುವೆ ಸುಮಾರು 20 ನಿಮಿಷಗಳ ಕಾಲ ಮಳೆ ಅಡ್ಡಿಪಡಿಸಿತು. ತದನಂತರ, ಆನಿ ಆಕ್ರಮಕಾರಿ ಆಟ ಪ್ರದರ್ಶಿಸಿ, ಭಾರತೀಯ ಆಟಗಾರ್ತಿಯನ್ನು ಮಣಿಸಿದರು.
ಸ್ಪೈಲಿಶ್ಡ್ ಬ್ಯಾಕ್ ಹ್ಯಾಂಡ್, ಫೋರ್ ಹ್ಯಾಂಡ್ ಹೊಡೆತಗಳ ಮೂಲಕ ಸಂಪೂರ್ಣ ನಿಯಂತ್ರಣ ಸಾಧಿಸಿದ ಆನಿ, ಶ್ರೀವಲ್ಲಿ ವಿರುದ್ಧ ಪಾರಮ್ಯ ಮೆರೆದರು. ಶ್ರೀವಲ್ಲಿ 12ನೇ ಗೇಮ್ನಲ್ಲಿ ಮ್ಯಾಚ್ ಪಾಯಿಂಟ್ ಹೊಂದಿದ್ದರು. ಆದರೆ, ಅವರ ಕೆಲ ಪ್ರಮಾದಗಳಿಂದ ಅನಿ ಸರ್ವ್ ಹಿಡಿದಿಟ್ಟು, ಪಂದ್ಯವನ್ನು ಟೈ-ಬ್ರೇಕರ್ಗೆ ಕೊಂಡೊಯ್ದರು. ಈ ಸಂದರ್ಭದಲ್ಲಿ ಶ್ರೀವಲ್ಲಿ ಹೋರಾಟ ಫಲಿಸದೆ, ಅಮೆರಿಕದ ಆಟಗಾರ್ತಿ ಮುನ್ನಡೆ ಸಾಧಿಸಿದರು.
ಪಂದ್ಯದ ಕೊನೆಯ ಹಂತದಲ್ಲಿ 6-6 ಅಂಕಗಳ ಸಮಬಲ ಕಂಡುಬಂದಿತ್ತು. ಆದರೆ, ಈ ಹಂತದಲ್ಲಿ ಶ್ರೀವಲ್ಲಿ ಮಾಡಿದ ಎರಡು ತಪ್ಪುಗಳಿಂದ ಪ್ರಶಸ್ತಿಯು ಅಮೆರಿಕದ ಆಟಗಾರ್ತಿಯ ಪಾಲಾಯಿತು.
ಇದನ್ನೂ ಓದಿ: ಮಹಿಳಾ ಟಿ20 ವಿಶ್ವಕಪ್: ಆಸೀಸ್ ವಿರುದ್ಧ ಭಾರತಕ್ಕೆ ಸೋಲು; ಕಿವೀಸ್ ಜೊತೆ ಪಾಕ್ ಗೆದ್ದರೆ ಸೆಮೀಸ್ಗೆ ಲಗ್ಗೆ?