ಹುಬ್ಬಳ್ಳಿ: ಪ್ರತಿ 12 ವರ್ಷಕ್ಕೊಮ್ಮೆ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಮಹಾ ಕುಂಭಮೇಳ ನಡೆಯುತ್ತದೆ. ಜನವರಿ 10 ರಿಂದ ಫೆ.28 ಮಹಾ ಕುಂಭಮೇಳದ ಹಿನ್ನೆಲೆಯಲ್ಲಿ ಐಆರ್ಸಿಟಿಸಿಯು (ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ) ಪ್ರಯಾಗರಾಜ್ನಲ್ಲಿ ಟೆಂಟ್ ಸಿಟಿ ನಿರ್ಮಾಣ ಮಾಡಿದೆ ಎಂದು ಐಆರ್ಸಿಟಿಸಿ ಟೂರಿಸಂ ಕಾರ್ಪೊರೇಷನ್ ಮೇಲ್ವಿಚಾರಕರಾದ ಹರ್ಷದೀಪ್ ಹಾಗೂ ನವೀನ್ ಅವರು ಮಾಹಿತಿ ನೀಡಿದ್ದಾರೆ.
'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಹಾ ಕುಂಭಮೇಳವು ನಾಲ್ಕು ಪವಿತ್ರ ಸ್ಥಳಗಳಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಸುವ ಹಿಂದೂಗಳ ತೀರ್ಥಯಾತ್ರೆಯಾಗಿದೆ. ಹೀಗಾಗಿ, ಈ ಬಾರಿ ಪ್ರಯಾಗ್ರಾಜ್ಗೆ ಲಕ್ಷಾಂತರ ಜನ ಬರುತ್ತಾರೆ. ಸಂಗಮದಲ್ಲಿ ಸ್ನಾನ ಮಾಡಿ ಪಾಪ ನಿವಾರಣೆಯಾಗಿ ಮೋಕ್ಷ ಪ್ರಾಪ್ತಿಗಾಗಿ ಪ್ರಾರ್ಥಿಸುತ್ತಾರೆ. ಅಲ್ಲಿಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಐಆರ್ಸಿಟಿಸಿ ಸುಸಜ್ಜಿತವಾದ ಅತ್ಯಾಧುನಿಕ ಟೆಂಟ್ ನಿರ್ಮಿಸಿ ವಸತಿ ವ್ಯವಸ್ಥೆ ಕಲ್ಪಿಸಿದೆ. ಎರಡು ವಿಧದ ಟೆಂಟ್ ವ್ಯವಸ್ಥೆ ಇದ್ದು, ಅದಕ್ಕೆ ತಕ್ಕಂತೆ ದರ ನಿಗದಿ ಪಡಿಸಲಾಗಿದೆ. ಬೆಳಗಿನ ಉಪಹಾರ, ಭೋಜನವೂ ಇದರಲ್ಲಿ ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಟೆಂಟ್ ಬುಕಿಂಗ್ ಆರಂಭ: ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರದಲ್ಲಿ ಪವಿತ್ರ ಸ್ನಾನ ಮಾಡಲು ಬರುವ ಭಕ್ತರಿಗೆ ಈ ವಸತಿ ವ್ಯವಸ್ಥೆ ಅನುಕೂಲವಾಗಲಿದೆ. ಪ್ರಾರಂಭಿಕ 6,995 ರೂ.ಗಳಿಂದ ವಿವಿಧ ಬಗೆಯ ದರ ನಿಗದಿಪಡಿಸಲಾಗಿದೆ. ಅದರಲ್ಲೂ ಪ್ರಮುಖವಾಗಿ, ಡಿಲಕ್ಸ್ ಹಾಗೂ ಪ್ರೀಮಿಯಂ ವಿಧಗಳಿದ್ದು, ಸಿಂಗಲ್ ಹಾಗೂ ಡಬಲ್ ಟೆಂಟ್ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಈಗಾಗಲೇ ಬುಕಿಂಗ್ ಆರಂಭಗೊಂಡಿದ್ದು, ಆಸಕ್ತರು ಆನ್ಲೈನ್ ಹಾಗೂ ಆಫ್ಲೈನ್ನಲ್ಲಿ ಹುಬ್ಬಳ್ಳಿ, ಬೆಂಗಳೂರು, ಮೈಸೂರು ರೈಲ್ವೆ ನಿಲ್ದಾಣದ ಕಚೇರಿಗಳಲ್ಲಿ ಬುಕ್ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಐಆರ್ಸಿಟಿಸಿಯಿಂದ ಕೈಗೆಟುಕುವ ದರದಲ್ಲಿ ರಾಜಸ್ಥಾನ ಸೂಪರ್ ಟೂರ್ ಪ್ಯಾಕೇಜ್
ಟೆಂಟ್ಗಳ ಪ್ರಮುಖ ವೈಶಿಷ್ಟ್ಯಗಳು:
- ಡಿಲಕ್ಸ್ ಟೆಂಟ್: ಬೆಲೆಬಾಳುವ ಮಲಗುವ ಕೋಣೆಗಳು, ಎನ್-ಸೂಟ್ ಸುಸಜ್ಜಿತವಾದ ಸ್ನಾನಗೃಹಗಳು, ರೂಮ್ ಹೀಟರ್ ಮತ್ತು ಬಿಸಿ ನೀರಿನ ವ್ಯವಸ್ಥೆ ಇರಲಿದೆ.
- ಪ್ರೀಮಿಯಂ ಟೆಂಟ್: ಈವೆಂಟ್ಗಳ ಲೈವ್ ಸ್ಟ್ರೀಮಿಂಗ್ನೊಂದಿಗೆ ಹೆಚ್ಚುವರಿಯಾಗಿ ಏರ್ ಕಂಡೀಷನರ್, ಎಲ್ಇಡಿ ಟಿವಿಗಳನ್ನು ಇದು ಒಳಗೊಂಡಿದೆ.
- 24 ಗಂಟೆಗಳ ಭದ್ರತೆ, ಫೈರ್-ರೆಸಿಸ್ಟೆಂಟ್ ಟೆಂಟ್ಸ್ ಇದಾಗಿದೆ.
- ಆರಾಮದಾಯಕ ಡೈನಿಂಗ್ ಹಾಲ್ಗಳಲ್ಲಿ ಅತಿಥಿಗಳಿಗಾಗಿ ಬಫೆ ಕ್ಯಾಟರಿಂಗ್ ಸೇವೆಗಳು ಲಭ್ಯವಿದೆ.
- 24 ಗಂಟೆಗಳ ವೈದ್ಯಕೀಯ ಸೇವೆ ಇರಲಿದೆ.
- ಆಕರ್ಷಣೆಗಳು ಮತ್ತು ಸ್ನಾನದ ಪ್ರದೇಶಗಳಿಗೆ ಶಟರ್ ಸೇವೆಗಳನ್ನು ಹೊಂದಿವೆ.
- ಸುಲಭ ಚಲನಶೀಲತೆಗಾಗಿ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ಕಾರ್ಟ್ಗಳು ಇರಲಿವೆ.
- ಸೆಲೆಬ್ರಿಟಿಗಳು/ಪ್ರಮುಖ ವ್ಯಕ್ತಿಗಳಿಂದ ದೈನಂದಿನ ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಅಧ್ಯಾತ್ಮಿಕ ಪ್ರವಚನಗಳು ನಡೆಯಲಿದೆ.
- ಯೋಗ/ಬೈಕಿಂಗ್/ಸ್ಟಾ ಸೌಲಭ್ಯ ಒದಗಿಸಲಾಗುತ್ತದೆ.
- ಇನ್ ಹೌಸ್ ಅತಿಥಿಯಾಗಿ ನದಿ ದಂಡೆಯ ಬಳಿ ಕಾರ್ಯನಿರ್ವಾಹಕ ಕೋಣೆ, ತಿನಿಸುಗಳು, ವಾಶರೂಂಗಳ ಸೌಲಭ್ಯವೂ ಲಭ್ಯವಿರಲಿದೆ.
ಇದನ್ನೂ ಓದಿ: 'ಟೆಂಪಲ್ ರನ್' ಟೂರ್ ಪ್ಯಾಕೇಜ್: ಕೇರಳ & ತಮಿಳುನಾಡಿನ ಪ್ರಸಿದ್ಧ ದೇವಾಲಯಗಳ ದಿವ್ಯದರ್ಶನ