ETV Bharat / state

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಬಳಿಕ ಬಳ್ಳಾರಿಗೆ ಆರೋಪಿ ತೆರಳಿರುವ ಶಂಕೆ: ಎನ್​ಐಎಯಿಂದ ಪರಿಶೀಲನೆ - bomb blast in Rameswaram Cafe

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ಎನ್​ಐಎ ತಂಡ ಶಂಕಿತ ಆರೋಪಿ ಕುರಿತು ಬಳ್ಳಾರಿಯಲ್ಲಿ ತೀವ್ರ ಕಾರ್ಯಚರಣೆ ನಡೆಸುತ್ತಿದೆ.

ಎನ್​ಐಎಯಿಂದ ಪರಿಶೀಲನೆ
ಎನ್​ಐಎಯಿಂದ ಪರಿಶೀಲನೆ
author img

By ETV Bharat Karnataka Team

Published : Mar 7, 2024, 10:36 AM IST

Updated : Mar 7, 2024, 4:42 PM IST

ಎನ್​ಐಎಯಿಂದ ಪರಿಶೀಲನೆ

ಬಳ್ಳಾರಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ಬಳ್ಳಾರಿ ಜಿಲ್ಲೆಯಲ್ಲಿ ಶಂಕಿತ ಆರೋಪಿಯ ಚಲನವಲನದ ಬಗ್ಗೆ ಮಾಹಿತಿ ದೊರಕಿದ್ದು ಎನ್​ಐಎ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ.

ಮಾಹಿತಿ ದೊರೆತ ಎನ್​ಐಎ ತಂಡ ಬೆಂಗಳೂರಿಂದ ಎರಡು ಕಾರುಗಳಲ್ಲಿ ಬಂದಿದ್ದು ಬಳ್ಳಾರಿಯ ಹೊಸ ಬಸ್ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಕೆಫೆಯಲ್ಲಿ ಬಾಂಬ್​ ಇದ್ದ ಬ್ಯಾಗ್​ ಇರಿಸಿ ಅಲ್ಲಿಂದ ಎಸ್ಕೇಪ್​ ಆಗಿದ್ದ ಶಂಕಿತ ತುಮಕೂರು ಮೂಲಕ ಬಳ್ಳಾರಿ ಬಸ್​ ನಿಲ್ದಾಣಕ್ಕೆ ಬಂದಿದ್ದಾನೆ. ಬಳಿಕ ಬಳ್ಳಾರಿ ಬಸ್ ನಿಲ್ದಾಣದಿಂದ ಮಂತ್ರಾಲಯ ಟು ಗೋಕರ್ಣ ಬಸ್​ ಮೂಲಕ ಭಟ್ಕಳಕ್ಕೆ ತೆರಳಿರುವ ಮಾಹಿತಿ ಆಧಾರದ ಮೇಲೆ ಎನ್​ಐಎ ಬಳ್ಳಾರಿಗೆ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ನಿನ್ನೆ ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ಬಸ್​ ನಿಲ್ದಾಣದಲ್ಲಿ ಶೋಧ ನಡೆಸಲಾಗುತ್ತಿದೆ. ಬಳ್ಳಾರಿ ಮತ್ತು ತುಮಕೂರು ಪೊಲೀಸರು ಎನ್​ಐಎ ತಂಡಕ್ಕೆ ಸಾಥ್​ ನೀಡಿದ್ದಾರೆ.

ಜತೆಗೆ ಬೆಂಗಳೂರು ಡಿಜಿಗೆ ಬ್ಲಾಸ್ಟ್​ ನಡೆಸುವ ಬಗ್ಗೆ ನೀಡಿರುವ ಅನಾಮಧೇಯ ಪತ್ರದಲ್ಲಿ ಉಲ್ಲೇಖಿಸಿರುವ ಸ್ಥಳಗಳನ್ನೂ ಪರಿಶೀಲಿಸಲಾಗುತ್ತಿದೆ.

ಎನ್​ಐಎಯಿಂದ ಪರಿಶೀಲನೆ
ಎನ್​ಐಎಯಿಂದ ಪರಿಶೀಲನೆ

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಂಬ್ ಇಟ್ಟವರು ದೇಶದ್ರೋಹಿಗಳು: ಯು.ಟಿ.ಖಾದರ್

ಬಸ್ ನಿಲ್ದಾಣದಲ್ಲಿ ಶೋಧ: ಬಸ್ ನಿಲ್ದಾಣದ ಪ್ರತೀ ಸಿಸಿಟಿವಿಯನ್ನು ತನಿಖಾ ತಂಡ ಪರಿಶೀಲನೆ ನಡೆಸುತ್ತಿದೆ. ಕಳೆದ ರಾತ್ರಿಯಿಂದ 10 ರಿಂದ 12 ಸಿಸಿಟಿವಿಯ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

Last Updated : Mar 7, 2024, 4:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.