ETV Bharat / state

ಅಂಬೇಡ್ಕರ್ ಪುತ್ಥಳಿಗೆ ಅಪಮಾನ: ಸೂಕ್ತ ತನಿಖೆ ಕೈಗೊಳ್ಳದ ಪೊಲೀಸರ ವಿರುದ್ಧ ಶಾಸಕರಿಗೆ ದೂರು - ಗಂಗಾವತಿ

ಗಂಗಾವತಿ ನಗರದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಅಪಮಾನ ಮಾಡಿರುವ ಘಟನೆ ನಡೆದು ತಿಂಗಳು ಗತಿಸಿದರೂ, ಪೊಲೀಸ್ ಅಧಿಕಾರಿಗಳು ಸೂಕ್ತ ರೀತಿ ತನಿಖೆ ಮಾಡುತ್ತಿಲ್ಲ ಎಂದು ಶಾಸಕ ಜಿ. ಜನಾರ್ದರೆಡ್ಡಿಗೆ ಪಟ್ಟಣದ ದಲಿತಪರ ಸಂಘಟನೆ ಯುವಕರು ದೂರು ನೀಡಿದರು.

Dalit organization youth complained.
ಶಾಸಕ ಜಿ. ಜನಾರ್ದರೆಡ್ಡಿ ಭೇಟಿ ಮಾಡಿ ದಲಿತಪರ ಸಂಘಟನೆ ಯುವಕರು ದೂರು ನೀಡಿದರು.
author img

By ETV Bharat Karnataka Team

Published : Jan 26, 2024, 9:21 PM IST

ಗಂಗಾವತಿ( ಕೊಪ್ಪಳ): ನಗರದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಅಪಮಾನ ಮಾಡಿರುವ ಘಟನೆ ನಡೆದು ಒಂದು ತಿಂಗಳು ಗತಿಸಿದರೂ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಶಾಸಕರ ಜಿ. ಜನಾರ್ದರೆಡ್ಡಿಗೆ ಪಟ್ಟಣದ ದಲಿತಪರ ಸಂಘಟನೆ ಯುವಕರು ದೂರು ನೀಡಿದರು.

ನಗರಸಭೆಯಲ್ಲಿ ಶುಕ್ರವಾರ ಶಾಸಕ ಜಿ ಜನಾರ್ದನ ರೆಡ್ಡಿ ಅವರನ್ನು ಮುಖಂಡ ಮರಿಸ್ವಾಮಿ ಬರಗೂರು ನೇತೃತ್ವದಲ್ಲಿ ಭೇಟಿ ಮಾಡಿದ ದಲಿತ ಸಂಘಟನೆ ಯುವಕರು, ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಇಲಾಖೆಯ ವೈಖರಿ ಅನುಮಾನಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮೀಪದಲ್ಲಿರುವ ಖಾಸಗಿ ಹೋಟೆಲ್, ಖಾಸಗಿ ಸ್ಟೇಷನರಿ ಅಂಗಡಿಯಲ್ಲಿ ಸಿಸಿ ಕ್ಯಾಮೆರಾ ಇವೆ, ಅಲ್ಲದೇ ನ್ಯಾಯಾಲಯದ ಆವರಣದಲ್ಲಿಯೂ ಸಿಸಿ ಕ್ಯಾಮೆರಾ ಇದೆ. ಆದರೆ, ಈ ಕ್ಯಾಮೆರಾ ಫುಟೇಜ್ ಸಂಗ್ರಹಿಸಿ ಪರಿಶೀಲಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಟೊಮೆಟೊ ಸಾಸ್ ಎಸೆದು ಅಪಮಾನ ಮಾಡಿದ ಘಟನೆ ನಡೆದು ತಿಂಗಳು ಸಮೀಪಿಸುತ್ತಿದೆ. ಉದ್ದೇಶ ಪೂರ್ವಕವಾಗಿ ಪೊಲೀಸರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದರ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಶಾಸಕರಿಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಜನಾರ್ದರೆಡ್ಡಿ , ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಅಪಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ತನಿಖೆ ಯಾವ ಹಂತಕ್ಕೆ ಬಂದಿದೆ ಎಂದು ವಿಚಾರಣೆ ನಡೆಸಲಾಗುವುದು. ಎರಡು ದಿನದಲ್ಲಿ ಪೊಲೀಸರು ಮತ್ತು ದಲಿತ ಪರ ಸಂಘಟನೆಯ ನಾಯಕರ ಸಭೆ ಕರೆದು ಚರ್ಚಿಸೋಣ ಎಂದು ದಲಿತಪರ ಸಂಘಟನೆ ಯುವಕರನ್ನು ಸಮಾಧಾನ ಪಡಿಸಿದರು.

ಇದನ್ನೂಓದಿ:ಗಣರಾಜ್ಯೋತ್ಸವ ಪರೇಡ್ ವೇಳೆ ಸಿಎಂ ಬಳಿ ಏಕಾಏಕಿ ನುಗ್ಗಲು ಯತ್ನಿಸಿದ ವ್ಯಕ್ತಿ; ವಶಕ್ಕೆ ಪಡೆದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.