ETV Bharat / state

ಐಐಎಸ್ಸಿ ಮುಕ್ತ ದಿನ: ಕ್ಯಾಂಪಸ್ ವೀಕ್ಷಿಸಿದ ಸಾರ್ವಜನಿಕರು, ವಿದ್ಯಾರ್ಥಿಗಳು - iisc Open Day

ಭಾರತೀಯ ವಿಜ್ಞಾನ ದಿನ ಅಂಗವಾಗಿ ಐಐಎಸ್ಸಿಯಲ್ಲಿ ಮುಕ್ತ ದಿನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಭೇಟಿ ನೀಡಿ, ಪ್ರಾತ್ಯಕ್ಷಿಕೆ ಮತ್ತು ಆವಿಷ್ಕಾರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅವಕಾಶವಿದೆ.

ಐಐಎಸ್ಸಿ ಮುಕ್ತ ದಿನ
ಐಐಎಸ್ಸಿ ಮುಕ್ತ ದಿನ
author img

By ETV Bharat Karnataka Team

Published : Feb 24, 2024, 7:12 PM IST

Updated : Feb 24, 2024, 9:12 PM IST

ಐಐಎಸ್ಸಿ ಮುಕ್ತ ದಿನ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಯಲ್ಲಿ ಇಂದು ಮುಕ್ತ ದಿನ ಹಮ್ಮಿಕೊಳ್ಳಲಾಗಿತ್ತು. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ ಪ್ರವೇಶಿಸಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಇಂದು ಬೆಳಗ್ಗೆ 9 ಗಂಟೆಯಿಂದಲೇ ಕ್ಯಾಂಪಸ್ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ಸಂಜೆ 5 ಗಂಟೆಯವರೆಗೂ ಭೇಟಿ ನೀಡಿದರು.

ಭೇಟಿ ನೀಡುವವರು ಭಾರತೀಯ ವಿಜ್ಞಾನ ಸಂಸ್ಥೆಯ ವಿವಿಧ ವಿಭಾಗಗಳು, ದೈನಂದಿನ ಕಾರ್ಯ ಚಟುವಟಿಕೆ, ಆವಿಷ್ಕಾರ, ವಿಜ್ಞಾನ ಪ್ರಯೋಗಗಳು, ವೈಜ್ಞಾನಿಕ ಪ್ರಾತ್ಯಕ್ಷಿಕೆಗಳು ಹಾಗೂ ವಿಜ್ಞಾನ ಮಾದರಿಗಳ ಪ್ರದರ್ಶನ ಹಾಗೂ ಅವುಗಳ ಮಾಹಿತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ನಮ್ಮ ಕಾರ್ಯಕ್ರಮಗಳಿಗೆ ಮತ್ತು ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲು ಶಾಲಾ ಕಾಲೇಜುಗಳನ್ನು ಬಹಳ ವರ್ಷಗಳಿಂದ ತೊಡಗಿಸಿಕೊಳ್ಳುತ್ತಿದ್ದೇವೆ. ಆದರೆ ನಮ್ಮ ಬ್ರಹ್ಮಾಂಡದ ಬಗ್ಗೆ ತಿಳಿದುಕೊಳ್ಳಲು ಮತ್ತು ನಮ್ಮ ವಿಜ್ಞಾನಿಗಳೊಂದಿಗೆ ಸಂವಹನ ನಡೆಸಲು ರಾಷ್ಟ್ರೀಯ ವಿಜ್ಞಾನ ದಿನದ ಹಿನ್ನೆಲೆ ಸಾರ್ವಜನಿಕರನ್ನು ನಮ್ಮ ಆವರಣಕ್ಕೆ ಆಹ್ವಾನಿಸಲು ನಾವು ಕಳೆದ ವರ್ಷವಷ್ಟೇ ನಿರ್ಧರಿಸಿದ್ದೇವೆ ಎಂದು ಇಂಡಿಯನ್ ಇನ್ಸ್​ಸ್ಟಿಟ್ಯೂಟ್ ಆಫ್ ಆಸ್ಟ್ರೀಫಿಸಿಕ್ಸ್ (IIA) ನಿರ್ದೇಶಕಿ ಅನ್ನಪೂರ್ಣಿ ಸುಬ್ರಮಣ್ಯಂ ಅವರು ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಕಲೆ, ಸಾಹಿತ್ಯ, ಸಂಗೀತ ಮತ್ತು ನೃತ್ಯವನ್ನು ನೋಡಬಹುದಾಗಿದೆ. ಆದರೆ ವಿಜ್ಞಾನ ಮಾತ್ರ ಸಾರ್ವಜನಿಕ ರಂಗದಿಂದ ದೂರವಿದೆ. ಇದು ದೊಡ್ಡ ಕೊರತೆಯಾಗಿದೆ. ಅಂತೆಯೇ ಈ ರೀತಿಯ ಮುಕ್ತ ದಿನಗಳು ಮತ್ತು ವಿಜ್ಞಾನ ವಸ್ತು ಪ್ರದರ್ಶನಗಳು ಅಂತರವನ್ನು ಕಡಿಮೆ ಮಾಡಲಿವೆ ಎಂದು SCOPE ಮುಖ್ಯಸ್ಥ ನಿರುಜ್ ಮೋಹನ್ ರಾಮಾನುಜಂ ಅಭಿಪ್ರಾಯಪಟ್ಟಿದ್ದಾರೆ.

ಮಾದರಿಗಳು, ಪ್ರಾತ್ಯಕ್ಷಿಕೆಗಳು ಮತ್ತು ಪೋಸ್ಟರ್‌ಗಳ ಮೂಲಕ ಅನೇಕ ವೀಕ್ಷಣಾಲಯಗಳನ್ನು ಪ್ರದರ್ಶಿಸುವುದು ಸೇರಿದಂತೆ ಮುಕ್ತ ದಿನದ ಕಾರ್ಯಕ್ರಮಗಳ ಸರಣಿಯನ್ನು IIA ಖಗೋಳ ಭೌತಶಾಸ್ತ್ರ ವಿಭಾಗ ಆಯೋಜಿಸಿದೆ. ಭೌತಶಾಸ್ತ್ರದ ಪ್ರಯೋಗಗಳು, ಲೇಸರ್‌ ಬಳಸುವುದು, ಸೌರಕಲೆಗಳ ವೀಕ್ಷಣೆ ಮತ್ತು ಟೆಥರ್ಡ್ ಹೀಲಿಯಂ ಬಲೂನ್‌ನ ಪ್ರಾತ್ಯಕ್ಷಿಕೆಯೂ ಇರುತ್ತದೆ ಎಂದು ರಾಮಾನುಜಂ ಹೇಳಿದರು.

ಬೆಳಗ್ಗೆಯಿಂದಲೂ ನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ದಂಡು ಐಐಎಸ್ಸಿಗೆ ಹರಿದು ಬಂದಿತ್ತು. ಐಐಎಸ್ಸಿ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳ ಸಂಚಾರ ಅಧಿಕವಾಗಿದ್ದು, ಮುಕ್ತ ದಿನಕ್ಕೆ ಆಗಮಿಸುವವರು ಶಾಲಾ ಕಾಲೇಜು ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಇದನ್ನೂ ಓದಿ: ಬೆಂಗಳೂರಲ್ಲಿ ನೀರಿನ ಸಮಸ್ಯೆ: ಟ್ಯಾಂಕರ್ ಮೂಲಕ ನೀರು ಪೂರೈಕೆ, ಬೋರ್​​ವೆಲ್ ಕೊರೆಸಲು ತೀರ್ಮಾನ

Last Updated : Feb 24, 2024, 9:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.