ETV Bharat / state

ರೇಣುಕಾಸ್ವಾಮಿ ಕೊಲೆ ಕೇಸ್​​​​​​​ನಲ್ಲಿ ತನಿಖಾಧಿಕಾರಿಗಳು ಬಿಟ್ಟರೆ ಬೇರೆ ಯಾರೂ ಮಧ್ಯ ಪ್ರವೇಶ ಮಾಡಿಲ್ಲ: ಸಚಿವ ಪರಮೇಶ್ವರ್ - Renukaswamy Murder Case

author img

By ETV Bharat Karnataka Team

Published : Jun 21, 2024, 12:14 PM IST

Updated : Jun 21, 2024, 2:22 PM IST

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ತನಿಖಾಧಿಕಾರಿಗಳನ್ನು ಬಿಟ್ಟರೆ ಬೇರೆ ಯಾರೂ ಮಧ್ಯ ಪ್ರವೇಶ ಮಾಡಿಲ್ಲ ಎಂದು ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

INTERVENED  INVESTIGATORS  MINISTER PARAMESHWAR  BENGALURU
ಸಚಿವ ಜಿ.ಪರಮೇಶ್ವರ್ (INTERVENED INVESTIGATORS MINISTER PARAMESHWAR BENGALURU)

ಸಚಿವ ಪರಮೇಶ್ವರ್ ಹೇಳಿಕೆ (ETV Bharat)

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿಗಳು ಬಿಟ್ಟರೆ ಯಾರೂ ಇದರಲ್ಲಿ ಮಧ್ಯಪ್ರವೇಶ ಮಾಡಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು. ಸದಾಶಿವನಗರ ತಮ್ಮ‌ ನಿವಾಸದ ಬಳಿ ಮಾತನಾಡಿದ ಅವರು, ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿಗಳು ಬಿಟ್ಟರೆ ಯಾರೂ ಮಧ್ಯಪ್ರವೇಶ ಮಾಡಿಲ್ಲ. ಅದರ ಅವಶ್ಯಕತೆ ಯಾರಿಗೂ ಇಲ್ಲ.‌ನಾನು ಅಥವಾ ಸಿಎಂ ಯಾರಿಗೂ ಸೊಪ್ಪು ಹಾಕಲ್ಲ, ಯಾರೂ ಕೂಡ ಬಂದಿಲ್ಲ. ದರ್ಶನ್ ಸೇರಿ ನಾಲ್ಕು ಜನರನ್ನ ಒಂದು ವಾರ ಕಸ್ಟಡಿಗೆ ಕೇಳಿದ್ದರು. ಆದರೆ, ಎರಡು ದಿನ ಕೊಟ್ಟಿದ್ದಾರೆ. ಅಷ್ಟರಲ್ಲಿ ವಿಚಾರಣೆ ಮುಗಿದರೆ ಜೆಸಿಗೆ ಕೊಡ್ತಾರೆ ಎಂದರು.

ಬಿಜೆಪಿ ಶಾಸಕರ ಸಂಬಂಧಿ ಪ್ರಕರಣದಲ್ಲಿ ಭಾಗಿ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಇದರಲ್ಲಿ ಇರಬಹುದೇನೋ ಗೊತ್ತಿಲ್ಲ. ಪಕ್ಷದ ಆಧಾರದ ಮೇಲೆ ಈ ಕೇಸ್ ನೊಡ್ತಾ ಇಲ್ಲ. ಒಂದು ವೇಳೆ ನಮ್ಮ ಪಕ್ಷದಲ್ಲಿ ಇದ್ದರೂ ತಪ್ಪಿತಸ್ಥರೇ. ಬೇರೆ ಪಕ್ಷದಲ್ಲಿ ಇದ್ದರೂ ತಪ್ಪಿತಸ್ಥರೇ. ಯಾರು ಏನು ತಪ್ಪು ಮಾಡಿದ್ದಾರೆ ಅದರ ಮೇಲೆ ತನಿಖೆ ನಡೆಯುತ್ತದೆ ಎಂದರು.‌

ನಮ್ಮ ಪೊಲೀಸರು ತಪ್ಪು ಮಾಡಿಲ್ಲ: ನೋಯ್ಡಾದಲ್ಲಿ ಕರ್ನಾಟಕ ಪೊಲೀಸರು ಪೇಚಿಗೆ ಸಿಲುಕಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರು ಮಫ್ತಿಯಲ್ಲಿ ಹೋಗಿದ್ರು. ಅಲ್ಲಿನ ಪೊಲೀಸರಿಗೆ ಮಾಹಿತಿ ಕೊಡಬೇಕಾಗಿತ್ತು, ಆದ್ರೆ ಕೊಟ್ಟಿಲ್ಲ. ಅಲ್ಲಿನ ಪೊಲೀಸರು ನೋಟಿಸ್ ಕೊಟ್ಟು ತಿಳಿಸಿ ಎಂದು ಹೇಳಿದ್ದಾರೆ. ವಾರಂಟ್​​ ಇಲ್ಲದೇ ಬಂಧಿಸಬೇಡಿ ಅಂತ ಹೇಳಿದ್ದಾರೆ. ನೋಟಿಸ್ ಕೊಟ್ಟು ಆ ಯೂಟ್ಯೂಬರ್ ಬರದೇ ಇದ್ದರೆ ಬಂಧನ ಮಾಡ್ತಾರೆ. ಕೆಲವು ಸಂದರ್ಭಗಳಲ್ಲಿ ಇಂತಹ ಘಟನೆ ನಡೆಯುತ್ತವೆ. ಅವರು ತಪ್ಪು ಏನೂ ಮಾಡಿಲ್ಲ ಎಂದರು.

ಎಐಸಿಸಿ ಇರುವುದೇ ನಮ್ಮನ್ನು ನಿಯಂತ್ರಿಸಲು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನಕ್ಕೆ ಎಐಸಿಸಿ ಕಮಿಟಿ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ಎಐಸಿಸಿ ಮಟ್ಟದಲ್ಲಿ ಗೆಲುವಿನ ನಿರೀಕ್ಷೆ ಬೇರೆ ಇತ್ತು. 15 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ನಾವು 15 ಸ್ಥಾನ ಗೆಲ್ಲಲಿಲ್ಲ. ಸರ್ಕಾರ ಇದ್ದು ಕೂಡ ಇಷ್ಟೊಂದು ಕಡಿಮೆ ಆಯ್ತು ಅಂತಾ ಆತ್ಮಾವಲೋಕನ ಅಥವಾ ಫ್ಯಾಕ್ಟ್ ಫೈಂಡಿಂಗ್ ಕಮಿಟಿ ರಚನೆ ಮಾಡಿದ್ದಾರೆ. ಎಲ್ಲ ರಾಜ್ಯಕ್ಕೂ ಮಾಡಿದ್ದಾರೆ. ನಮ್ಮ ರಾಜ್ಯಕ್ಕೂ ಮಾಡಿದ್ದಾರೆ ಎಂದರು.

ಈ ವರದಿ ಮೇಲೆ ಸಚಿವ ಸಂಪುಟ ಬದಲಾವಣೆ ಮಾಡ್ತಾರೆ ಎಂಬ ಚರ್ಚೆ ವಿಚಾರವಾಗಿ ಮಾತನಾಡಿ, ಅದು ಹೈ ಕಮಾಂಡ್​ಗೆ ಬಿಟ್ಟ ವಿಚಾರ. ಹೈ ಕಮಾಂಡ್ ಏನು ತೀರ್ಮಾನ ಮಾಡುತ್ತೋ ನಮಗೆ ಗೊತ್ತಾಗಲ್ಲ.‌ ಫ್ಯಾಕ್ಟ್ ಫೈಂಡಿಂಗ್ ಆಧಾರದ ಮೇಲೆ ಕೆಲವೊಮ್ಮೆ ನಿರ್ಧಾರಗಳು ಆಗುತ್ತದೆ. ಎಐಸಿಸಿ ಇರೋದೇ ನಮ್ಮನ್ನ ರೆಗ್ಯುಲೇಟ್ ಮಾಡುವುದಕ್ಕೆ ಎಂದರು.

ಚನ್ನಪಟ್ಟಣ ಉಪ ಚುನಾವಣೆ ವಿಚಾರವಾಗಿ ಮಾತನಾಡಿ, ಡಿಕೆಶಿ ಸ್ಪರ್ಧೆ ಮಾಡ್ತಾರೆ ಅಂತೇನಿಲ್ಲ. ಅವರ ಸಹೋದರ ಸಂಸತ್​ಗೆ ಬರೋದಿತ್ತು, ಆದರೆ ಅದು ಆಗಿಲ್ಲ. ಹೀಗಾಗಿ ಒಳ್ಳೆಯ ಅಭ್ಯರ್ಥಿ ಹಾಕಿದರೆ ಗೆಲ್ತೀವಿ ಅಂತ ಇರಬಹುದು. ಹಿಂದೆ ಕಾಂಗ್ರೆಸ್ ಚನ್ನಪಟ್ಟಣದಲ್ಲಿ ಗೆದ್ದಿಲ್ವಾ?. ಅಲ್ಲೂ ಕೂಡ ಕಾಂಗ್ರೆಸ್ ಮತವಿದೆ. ಸಾಂದರ್ಭಿಕವಾಗಿ ಕೆಲವೊಮ್ಮೆ ಬೇರೆ ಬೇರೆ ಆಯ್ಕೆ ಇವೆ. ಹಿಂದೆ ನನ್ನ ಕ್ಷೇತ್ರದಲ್ಲಿ ನಾನು ಸೋತಿದ್ದೇನೆ.‌ ನಂತರ ನಾನು ಅದೇ ಕ್ಷೇತ್ರದಲ್ಲಿ ಗೆದ್ದಿದ್ದೇನೆ ಎಂದರು.

ಜೈಲಿನಲ್ಲಿ ಸ್ಪೆಷಲ್ ಟ್ರೀಟ್ಮೆಂಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಕೆಲವು ಬಾರಿ ಇದು ಸತ್ಯ ಇರಬಹುದು.‌ ಹಿಂದೆ ಫೋನ್ ಜೊತೆಗೆ ಒಂದಿಷ್ಟು ವಸ್ತು ಸಿಕ್ಕಿವೆ. ಯಾರು ಜೈಲರ್ ಇರ್ತಾರೆ ಅದನ್ನು ನಿಯಂತ್ರಣ ಮಾಡ್ತಾರೆ ಎಂದರು.

ಓದಿ: ರಾಜ್ಯದ ಹಣಕಾಸು ಮೇಲುಸ್ತುವಾರಿಗೆ ವಿದೇಶಿ ಕನ್ಸಲ್ಟೆನ್ಸಿ ನೇಮಕ: ಸರ್ಕಾರದ ವಿರುದ್ಧ ಕಿಡಿಕಾರಿದ ವಿಜಯೇಂದ್ರ - Foreign consultancy for Finance

Last Updated : Jun 21, 2024, 2:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.