ETV Bharat / state

ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿನ ಪ್ರಮುಖ ತೀರ್ಮಾನಗಳೇನು? - CABINET MEETING

ಸಾಗರಮಾಲಾ ಯೋಜನೆಯಡಿ ವಿವಿಧ ಯೋಜನೆಗಳ ಒಟ್ಟು 471.20 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ಮೊತ್ತಕ್ಕೆ ಅನುಮೋದನೆ ಸೇರಿದಂತೆ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

cabinet meeting
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : 3 hours ago

ಬೆಳಗಾವಿ: ಕರ್ನಾಟಕ ಫ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ) ವಿಧೇಯಕ-2024ರ ಮೇಲೆ ಯಾವುದೇ ತೀರ್ಮಾನಕ್ಕೆ ಬಾರದ ಸಚಿವ ಸಂಪುಟ ಸಭೆಯು ಮತ್ತೆ ವಿಷಯವನ್ನು ಮುಂದೂಡಿದೆ.

ಬೆಳಗಾವಿ ಸುವರ್ಣಸೌಧದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ. ಮೂರು ನಾಲ್ಕು ಸಲ ಸಂಪುಟ ಸಭೆಯ ಚರ್ಚೆಗೆ ಬಂದು ಈ ಮಸೂದೆ ಅನುಮೋದನೆಯಿಲ್ಲದೆ ಮುಂದೂಡಿಕೆಯಾಗಿತ್ತು. ಇದೀಗ ಮತ್ತೆ ಮಸೂದೆಯನ್ನು ಮುಂದೂಡಲಾಗಿದೆ. ಇನ್ನಷ್ಟು ಚರ್ಚೆ ಅವಶ್ಯಕತೆ ಇರುವುದರಿಂದ ಮಸೂದೆಯನ್ನು ಮುಂದೂಡಲಾಗಿದೆ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಜೊತೆ ಸಮಾಲೋಚನೆ ನಡೆಸಿದ ಬಳಿಕ ಕೆಲ ತಿದ್ದುಪಡಿಯೊಂದಿಗೆ ಮಸೂದೆಗೆ ಅನುಮೋದನೆ ನೀಡಲು ತೀರ್ಮಾನಿಸಲಾಗಿದೆ.

ಸಂಪುಟದ ಇತರ ತೀರ್ಮಾನಗಳು:

  • 2023-24ನೇ ಸಾಲಿನಲ್ಲಿ 12 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು 54.66 ಕೋಟಿ ರೂ.ಗಳ ಅಂದಾಜು (ಕೇಂದ್ರದ ಅನುದಾನ) ಒದಗಿಸಲು ಆಡಳಿತಾತ್ಮಕ ಅನುಮೋದನೆ.
  • 2022-23ನೇ ಸಾಲಿನಲ್ಲಿ ರಾಜ್ಯದ ಎಸ್ಸಿ 14 ವಿದ್ಯಾರ್ಥಿನಿಲಯಗಳಿಗೆ 72.00 ಕೋಟಿ ರೂ. (ಕೇಂದ್ರ ಪಾಲು 58.00 ಕೋಟಿ ರೂ., ರಾಜ್ಯದ ಪಾಲು 14.00 ಕೋಟಿ ರೂ.) ಅಂದಾಜು ಮೊತ್ತದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ.
  • ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಅಧ್ಯಕ್ಷರು ಮತ್ತು ಸದಸ್ಯರುಗಳ ನಾಮ ನಿರ್ದೇಶನ ಮತ್ತು ನೇಮಕಾತಿಯ ಷರತ್ತು ಮತ್ತು ನಿಬಂಧನೆಗಳು ಮತ್ತು ಸದಸ್ಯ ಕಾರ್ಯದರ್ಶಿಯ ನೇಮಕಾತಿ) ನಿಯಮಗಳು-2024ಕ್ಕೆ ಅನುಮೋದನೆ.
  • ಕರ್ನಾಟಕ ಜಲಸಾರಿಗೆ ಅಭಿವೃದ್ಧಿ ನೀತಿ‌ 2024ಕ್ಕೆ ಅನುಮೋದನೆ.
  • ಸಾಗರಮಾಲಾ ಯೋಜನೆಯಡಿ ರಾಜ್ಯದಲ್ಲಿ ಕೈಗೊಳ್ಳುವ ವಿವಿಧ ಯೋಜನೆಗಳ ಒಟ್ಟು 471.20 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ಮೊತ್ತಕ್ಕೆ ಅನುಮೋದನೆ.
  • ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕು, ಹುಲಿಯೂರು ದುರ್ಗ ಹೋಬಳಿ, ಶೃಂಗಸಾಗರ ಗ್ರಾಮದ ಸ.ನಂ.73ರಲ್ಲಿ 5 ಎಕರೆ ಜಮೀನನ್ನು ಶ್ರೀ ರಾಜೇಂದ್ರ ಪ್ರಸಾದ್‌ ವಿದ್ಯಾಸಂಸ್ಥೆ(ರಿ), ಹೊನ್ನಮಾಚನಹಳ್ಳಿ ಇವರಿಗೆ ಗುತ್ತಿಗೆ ಅವಧಿ‌ ವಿಸ್ತರಿಸಲು ಒಪ್ಪಿಗೆ.
  • ಮೈಸೂರು ಶುಗರ್ ಕಂಪನಿಯು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಗೆ ಪಾವತಿಸಬೇಕಾಗಿರುವ ವಿದ್ಯುತ್ ಬಿಲ್​​ನ ಅಸಲು ಮೊತ್ತವನ್ನು ಪಾವತಿಸುವುದಕ್ಕಾಗಿ 37.74 ಕೋಟಿ ರೂ.ಗಳ ಮೊತ್ತವನ್ನು ಆರ್ಥಿಕ ಇಲಾಖೆಯಿಂದ ಬಿಡುಗಡೆಗೊಳಿಸಲು ಹಾಗೂ ವಿದ್ಯುತ್ ಬಿಲ್​ ಮೇಲಿನ ಬಡ್ಡಿ ಮೊತ್ತ 15.71 ಕೋಟಿ ರೂ‌.ಗಳ ಮನ್ನಾಗೆ ಸಮ್ಮತಿ.
  • ಎಸ್.ಎಸ್.ಕೆ. ಶ್ರೀ ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚ ಸಮಿತಿ, ಹುಬ್ಬಳ್ಳಿ-ಧಾರವಾಡ ಇವರಿಗೆ ಗುತ್ತಿಗೆ ಆಧಾರದ ಮೇಲೆ ಹಂಚಿಕೆಯಾಗಿರುವ 3608.92 ಚ.ಮೀ. ನಾಗರಿಕ ಸೌಲಭ್ಯ ನಿವೇಶನದ ಮೊತ್ತಕ್ಕೆ ರಿಯಾಯಿತಿ ನೀಡಲು ಒಪ್ಪಿಗೆ.
  • ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ - ಖಾಸಗಿ - ಸಹಭಾಗಿತ್ವದಡಿ (PPP) ಘನತ್ಯಾಜ್ಯ ಸಂಸ್ಕರಣಾ ಹಾಗೂ ವಿಲೇವಾರಿ ಘಟಕದ ಅಭಿವೃದ್ಧಿ ಮತು ಕಾರ್ಯಾಚರಣೆಯನ್ನು 10.36 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಮತ್ತು ನಗರಸಭೆಗೆ ಸೇರಿದ ಬಳಗಾನೂರು ರಸ್ತೆಗೆ ರಿಯಾಯಿತಿದಾರರಿಗೆ (ಕೆಟಿಪಿಪಿ ಕಾಯ್ದೆಯಡಿ ಆಯ್ಕೆಯಾಗುವ) ಗುತ್ತಿಗೆ ಆಧಾರದ ಮೇಲೆ 9 ಎಕರೆ 34 ಗುಂಟೆ ಜಾಗವನ್ನು ಒದಗಿಸಲು ಸಮ್ಮತಿ.
  • ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಹಾಳಾಗಿರುವ ಒಳಚರಂಡಿ ಕೊಳವೆ ಮಾರ್ಗ ಬದಲಾವಣೆ, ಕೊಲ್ಲಿ ವೃತ್ತದಲ್ಲಿರುವ ತೇವ ಬಾವಿಯನ್ನು ಎತ್ತರಿಸುವುದು. ಯಂತ್ರ ರೇಚಕಗಳನ್ನು ಅಳವಡಿಸುವುದು ಮತ್ತು ಹಾಲಿ ಇರುವ 6.0 ಎಂ.ಎಲ್.ಡಿ ಸಾಮರ್ಥ್ಯದ WSP Extended Aerator 3 ನೀರು ಸಂಸ್ಕರಣಾ ಘಟಕದಲ್ಲಿ ತೃತೀಯ ಹಂತದ ಸಂಸ್ಕರಣಾ ಘಟಕವನ್ನು ನಿರ್ಮಿಸುವ ಕಾಮಗಾರಿಗಳ 16.49 ರೂ. ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.

ಇದನ್ನೂ ಓದಿ: ಮುಡಾ ಬದಲಿಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾದ ಸರ್ಕಾರ: ಮಸೂದೆ ಮಂಡನೆಗೆ ಸಂಪುಟ ಸಭೆ ಅಸ್ತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.