ETV Bharat / state

ಬಾಗಲಕೋಟೆ: ಐದು ಇಲಾಖೆಗಳ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಿಐಡಿ ತನಿಖೆಗೆ - CID PROBE - CID PROBE

ಐದು ಇಲಾಖೆಗಳ 6.08 ಕೋಟಿ ರೂ. ಹಣವನ್ನು 33 ವಿವಿಧ ಖಾತೆಗಳಿಗೆ ವರ್ಗಾವಣೆಯಾಗಿರುವ ಹಿನ್ನೆಲೆ ಸಮಗ್ರ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಬಾಗಲಕೋಟೆ ಎಸ್​ಪಿ ತಿಳಿಸಿದ್ದಾರೆ.

ಸಿಐಡಿ
ಸಿಐಡಿ (ETV Bharat)
author img

By ETV Bharat Karnataka Team

Published : Aug 23, 2024, 10:19 AM IST

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ (ETV Bharat)

ಬಾಗಲಕೋಟೆ: ಸರ್ಕಾರಿ ಇಲಾಖೆಗಳ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಸಿಐಡಿಗೆ ವಹಿಸುವ ಮೂಲಕ ಬಾಗಲಕೋಟೆ ಪೊಲೀಸ್ ತನಿಖೆ ಚುರುಕುಗೊಳಿಸಿ ತಪ್ಪಿಸ್ಥರಿಗೆ ಬಿಸಿ‌ ಮುಟ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

"ಬಾಗಲಕೋಟೆಯ ಪ್ರವಾಸೋದ್ಯಮ, ಅಲ್ಪಸಂಖ್ಯಾತ, ಕಾರ್ಮಿಕರ, ಕೈಮಗ್ಗ-ಜವಳಿ, ಹಿಂದುಳಿದ ವರ್ಗಗಳ ಇಲಾಖೆಗಳ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಬಾಗಲಕೋಟೆಯ ಐಡಿಬಿಐ ಬ್ಯಾಂಕಿನ‌ಲ್ಲಿ ಈ ಐದು ಇಲಾಖೆಗಳ 6.08 ಕೋಟಿ ರೂ. ಹಣವನ್ನು 33 ವಿವಿಧ ಖಾತೆಗಳಿಗೆ ಬ್ಯಾಂಕಿನ‌ ಸಿಬ್ಬಂದಿ ವರ್ಗಾವಣೆ ಮಾಡಿದ್ದರು. ಇಲ್ಲಿಯವರೆಗೆ 9 ಜನ ಬ್ಯಾಂಕ್ ಸಿಬ್ಬಂದಿ ಸೇರಿ 19 ಜನರನ್ನು ಬಂಧನ ಮಾಡಿ, ವಿಚಾರಣೆ ನಡೆಸಲಾಗಿದೆ. 3 ಕೋಟಿ ರೂ.ಗೂ ಅಧಿಕ ಅವ್ಯವಹಾರ ಹಿನ್ನೆಲೆ ಪ್ರಕರಣದ ಸಮಗ್ರ ತನಿಖೆಗಾಗಿ ಸಿಐಡಿಗೆ ವಹಿಸಲಾಗಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.

"ಸರ್ಕಾರದ ಇಲಾಖೆಯ ಹಣವನ್ನು ಅಕ್ರಮವಾಗಿ ಬೇರೆ ಖಾತೆಗಳಿಗೆ ಹಂಚಿಕೆ ಮಾಡಿರುವುದು ಬೆಳಕಿಗೆ ಬಂದ ನಂತರ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ ಆಗಿತ್ತು. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೋ, ಇಲ್ಲವೋ ಎಂಬ ಬಗ್ಗೆ ಸೂಕ್ತ ಮಾಹಿತಿ ತಿಳಿದು ಬಂದಿಲ್ಲ. ಈಗ ಸಿಐಡಿಗೆ ವಹಿಸಿರುವುದರಿಂದ‌ ಅಧಿಕಾರಿಗಳಿಗೆ ಭಯ ಪ್ರಾರಂಭವಾಗಿದೆ. ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಸಿಐಡಿಗೆ ನೀಡಲಾಗಿದೆ" ಎಂದು‌ ಎಸ್​ಪಿ‌ ತಿಳಿಸಿದರು.

ಇದನ್ನೂ ಓದಿ: ಭೋವಿ ಅಭಿವೃದ್ಧಿ ನಿಗಮ ಅಕ್ರಮ ಪ್ರಕರಣ; ತಡರಾತ್ರಿ ಸಿಐಡಿ ಅಧಿಕಾರಿಗಳಿಂದ ಶೋಧ - CID Raid

ETV Bharat Logo

Copyright © 2024 Ushodaya Enterprises Pvt. Ltd., All Rights Reserved.