ಬೆಂಗಳೂರು: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಶೋಧಕರು ಮನುಷ್ಯನ ಮೆದುಳನ್ನು ಮಾದರಿಯಾಗಿಟ್ಟುಕೊಂಡು ಅನಲಾಗ್ ಕಂಪ್ಯೂಟಿಂಗ್ ಪ್ಲಾಟ್‌ಫಾರ್ಮ್ ಅಭಿವೃದ್ಧಿಪಡಿಸಿದ್ದಾರೆ. 16,500 ಸ್ಥಿಗತಿಗಳಲ್ಲಿ ಡೇಟಾವನ್ನು ಸಂಗ್ರಹಿಸಲು ಮತ್ತು ಪ್ರಕ್ರಿಯೆಗೆ ಒಳಪಡಲು ಈ ಅನಲಾಗ್ ಕಂಪ್ಯೂಟಿಂಗ್ ಪ್ಲಾಟ್‌ಫಾರ್ಮ್ ಸಮರ್ಥವಾಗಿದೆ. ಈ ಸಂಶೋಧನೆ ಅಂಶಗಳು ನೇಚರ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಈ ಪ್ರಗತಿಯು ಸಾಂಪ್ರದಾಯಿಕ ಡಿಜಿಟಲ್ ಕಂಪ್ಯೂಟರ್‌ಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಹಾರ್ಡ್‌ವೇರ್ ಕೊರತೆಯಿಂದಾಗಿ ಈ ಹೊಸ ಬೆಳವಣಿಯನ್ನು ಭಾರೀ ಡೇಟಾ ಕೇಂದ್ರಗಳಿಗೆ ಅಳವಡಿಸಲು ಸಾಧ್ಯವಿಲ್ಲದಾಗಿದೆ. ಆದರೆ, ಹೆಚ್ಚು ಪರಿಣಾಮಕಾರಿಯಾದ ಸಿಲಿಕಾನ್ ಚಿಪ್‌ಗಳ ತಯಾರಿ ಮತ್ತು ಬಳಕೆಯಲ್ಲಿ ಈ ಪ್ಲಾಟ್‌ಫಾರ್ಮ್ ಪ್ರಮುಖ ಪಾತ್ರ ವಹಿಸಲಿದೆ.
ಪರಿಹರಿಸಲಾಗದ ಸವಾಲುಗಳಿಗೆ ಪರಿಹಾರ: ನ್ಯೂರೋಮಾರ್ಫಿಕ್ ಕಂಪ್ಯೂಟಿಂಗ್ ಒಂದು ದಶಕದಿಂದ ಪರಿಹರಿಸಲಾಗದ ಸವಾಲುಗಳಿಗೆ ಪರಿಹಾರ ನೀಡಲಿದೆ. ಈ ಆವಿಷ್ಕಾರದೊಂದಿಗೆ ನಾವು ಬಹುತೇಕ ಪರಿಪೂರ್ಣ ವ್ಯವಸ್ಥೆಯನ್ನು ರಚಿಸಿದ್ದೇವೆ. ಇದು ಅಪರೂಪದ ಸಾಧನೆಯಾಗಿದೆ ಎಂದು ಸಂಶೋಧನಾ ತಂಡದ ನೇತೃತ್ವ ವಹಿಸಿದ್ದ ಐಐಎಸ್‌ಸಿ ನ್ಯಾನೋ ಸೈನ್ಸ್ ಮತ್ತು ಎಂಜಿನಿಯರಿಂಗ್ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಶ್ರೀತೋಷ್ ಗೋಸ್ವಾಮಿ ಹೇಳಿದ್ದಾರೆ.
ಇದನ್ನು ಓದಿ:NEET: ಎರಡನೇ ಸುತ್ತಿನ ಕೌನ್ಸೆಲಿಂಗ್ ವೇಳೆ 8 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಮಾನ್ಯತೆ - NEET UG 2024
ಹೆಚ್ಚಿನ ಅಲ್ಗಾರಿದಮ್‌ಗಳಿರುವ ಕಾರ್ಯಾಚರಣೆಯು ಸಾಕಷ್ಟು ಮೂಲಭೂತವಾಗಿದೆ. ಮ್ಯಾಟ್ರಿಕ್ಸ್ ಗುಣಾಕಾರ ಹೈಸ್ಕೂಲ್ ಗಣಿತದಲ್ಲಿ ಕಲಿಸುವ ಪರಿಕಲ್ಪನೆಯಾಗಿದೆ. ಡಿಜಿಟಲ್ ಕಂಪ್ಯೂಟರ್‌ಗಳು ಬಹಳಷ್ಟು ಶಕ್ತಿಯನ್ನು ಬಳಸುತ್ತವೆ. ಆದರೆ, ನಮ್ಮ ತಂಡ ಅಭಿವೃದ್ಧಿಪಡಿಸಿರುವ ವೇದಿಕೆಯು ಸಮಯ ಮತ್ತು ಶಕ್ತಿ ಎರಡನ್ನೂ ತೀವ್ರವಾಗಿ ಕಡಿತಗೊಳಿಸುತ್ತದೆ. ಲೆಕ್ಕಾಚಾರಗಳನ್ನು ಹೆಚ್ಚು ವೇಗವಾಗಿ ಮತ್ತು ಸುಲಭವಾಗಿ ಬಗೆಹರಿಸುತ್ತದೆ ಎಂದಿದ್ದಾರೆ.
ಪಿಲ್ಲರ್ಸ್ ಆಫ್ ಕ್ರಿಯೇಷನ್: ತಂಡವು ಈ ವೈಜ್ಞಾನಿಕ ಆವಿಷ್ಕಾರವನ್ನು ತಾಂತ್ರಿಕ ಸಾಧನೆಯಾಗಿ ಪರಿವರ್ತಿಸಿದೆ. ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ನ ಮೂಲತಃ ಸೂಪರ್‌ಕಂಪ್ಯೂಟರ್‌ನಿಂದ ರಚಿಸಲಾದ ಡೇಟಾ ತಗೆದುಕೊಂಡು ಸಾಧಾರಣ ಕಂಪ್ಯೂಟರ್ ಅನ್ನು ಬಳಸಿ ಸಾಂಪ್ರದಾಯಿಕ "ಪಿಲ್ಲರ್ಸ್ ಆಫ್ ಕ್ರಿಯೇಷನ್" ಚಿತ್ರವನ್ನು ಮರುಸೃಷ್ಟಿಸಲಾಯಿತು. ಇದು ಕಂಪ್ಯೂಟಿಂಗ್ ನಲ್ಲಿನ ವಿನೂತನ ಸಾಧನೆಯಾಗಿ ಹೊರಹೊಮ್ಮಿತುಎಂದು ಶ್ರೀತೋಷ್ ಗೋಸ್ವಾಮಿ ಹೇಳಿದ್ದಾರೆ.
ಇದನ್ನು ಓದಿ:ಮಹಿಳಾ ಹಾಸ್ಟೆಲ್‌ನಲ್ಲಿ ರೆಫ್ರಿಜರೇಟರ್ ಸ್ಫೋಟವಾಗಿ ಇಬ್ಬರು ಸಾವು: ಕಟ್ಟಡದ ಮಾಲೀಕ ಬಂಧನ - fire accident