ETV Bharat / state

ಬೆಂಗಳೂರಿನಲ್ಲಿ 'ನನ್ನ ನಗರ-ನನ್ನ ಆರೋಗ್ಯ-ನಮ್ಮ ಚಳವಳಿ' ಉತ್ಸವಕ್ಕೆ ಚಾಲನೆ - I Am One Health Festival - I AM ONE HEALTH FESTIVAL

ಬೆಂಗಳೂರಿನಲ್ಲಿ ಎಕೋ ನೆಟ್​ವರ್ಕ್​ ಐ ಆ್ಯಮ್ ಒನ್ ಹೆಲ್ತ್​ ಉತ್ಸವ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಡೆಂಗ್ಯೂ ಮತ್ತು ಇತರ ಆರೋಗ್ಯ ಸಂಬಂಧಿತ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

I AM ONE HEALTH FESTIVAL
ಬೆಂಗಳೂರಿನಲ್ಲಿ 'ನನ್ನ ನಗರ-ನನ್ನ ಆರೋಗ್ಯ-ನಮ್ಮ ಚಳುವಳಿ' ಉತ್ಸವಕ್ಕೆ ಚಾಲನೆ (ETV Bharat)
author img

By ETV Bharat Karnataka Team

Published : Jul 5, 2024, 3:13 PM IST

ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಅಂಡ್ ಟೆಕ್ನಾಲಜಿಕಲ್ ಮ್ಯೂಸಿಯಂ ಎಜುಕೇಶನ್ ಆಫೀಸರ್ ವಿಶ್ವನಾಥ್ (ETV Bharat)

ಬೆಂಗಳೂರು: ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಲಸ್ಟರ್ ಮತ್ತು ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಆ್ಯಂಡ್ ಟೆಕ್ನಾಲಜಿಕಲ್ ಮ್ಯೂಸಿಯಂ ಸಹಯೋಗದಲ್ಲಿ ಎಕೋ ನೆಟ್‍ವರ್ಕ್ 'ಐ ಆ್ಯಮ್ ಒನ್ ಹೆಲ್ತ್' ಉತ್ಸವ ಆಯೋಜಿಸಲಾಗಿದ್ದು, ಈ ವಿಶಿಷ್ಟ ಸಂವಾದಾತ್ಮಕ ಕಾರ್ಯಕ್ರಮದ ಉದ್ಘಾಟನೆ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಆ್ಯಂಡ್ ಟೆಕ್ನಾಲಜಿಕಲ್ ಮ್ಯೂಸಿಯಂ ಆವರಣದಲ್ಲಿ ಶುಕ್ರವಾರ ನಡೆಯಿತು.

ಎಕೋ ನೆಟ್ವರ್ಕ್ ಪ್ರೊ. ಶನ್ನೋನ್ (ETV Bharat)

ಕಾರ್ಯಕ್ರಮದಲ್ಲಿ ಬೆಂಗಳೂರಿನ 12ಕ್ಕೂ ಹೆಚ್ಚು ಪ್ರಮುಖ ಸಂಸ್ಥೆಗಳ ತಜ್ಞರು ಪಾಲ್ಗೊಂಡರು. ಡೆಂಗ್ಯೂ ಮತ್ತು ಇತರ ಆರೋಗ್ಯ ಸಂಬಂಧಿತ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ತಾಂತ್ರಿಕ, ಶೈಕ್ಷಣಿಕ, ಸಂವಾದಾತ್ಮಕ ಮತ್ತು ಸಹಯೋಗದ ಚಟುವಟಿಕೆಗಳ ಮೂಲಕ, ಉತ್ಸವ ನಮ್ಮ ನಗರದಲ್ಲಿನ ಅದ್ಭುತವಾದ ಆವಿಷ್ಕಾರಗಳನ್ನು ಸಹ ಎತ್ತಿ ತೋರಿಸುತ್ತಿದೆ. ಒಟ್ಟಾರೆಯಾಗಿ ಡೆಂಗ್ಯೂನಂತಹ ಸಾರ್ವಜನಿಕ ಆರೋಗ್ಯ ಸವಾಲುಗಳಿಗೆ ಸಾಮೂಹಿಕ ಪ್ರತಿಕ್ರಿಯೆಯನ್ನು ಈ ಕಾರ್ಯಕ್ರಮ ಪ್ರೇರೇಪಿಸುತ್ತಿದೆ.

I AM ONE HEALTH FESTIVAL
ಐ ಆ್ಯಮ್ ಒನ್ ಹೆಲ್ತ್ ಉತ್ಸವ (ETV Bharat)

ನಗರದಲ್ಲಿ ಡೆಂಗ್ಯೂ ಪ್ರಕರಣಗಳ ನಿರಂತರ ಏರಿಕೆಯ ವಿರುದ್ಧ ಹೋರಾಡಲು ಸಾಮೂಹಿಕ ಜಾಗೃತಿ ಮತ್ತು ಕ್ರಿಯಾ ಅಭಿಯಾನದಲ್ಲಿ ನಾಗರಿಕರು ಮತ್ತು ವಿಜ್ಞಾನಿಗಳನ್ನು ತೊಡಗಿಸಿಕೊಳ್ಳಲು ನಿರ್ಮಿಸಲಾದ ವಿಶೇಷ ನಾಗರಿಕ ಕ್ರಿಯಾ ಕಾರ್ಯಕ್ರಮದ ಅನಾವರಣಕ್ಕೂ ಉತ್ಸವ ಸಾಕ್ಷಿಯಾಯಿತು. 'ಈಟಿವಿ ಭಾರತ'ದ ಜೊತೆ ಕೂಡ ಮಾತನಾಡಿದ ಹಲವು ತಜ್ಞರು, ಡೆಂಗ್ಯೂ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಹಾಗೂ ಶಾಶ್ವತ ಪರಿಹಾರಗಳ ಬಗ್ಗೆ ತಿಳಿಸಿದರು.

I AM ONE HEALTH FESTIVAL
ಐ ಆ್ಯಮ್ ಒನ್ ಹೆಲ್ತ್ ಉತ್ಸವ (ETV Bharat)

ಉತ್ಸವದಲ್ಲಿ ಹಲವು ಸಂಸ್ಥೆಯ ತಜ್ಞರು ಆಟಗಳು, ಕಥೆಗಳು, ಸಂವಾದಾತ್ಮಕ ಸಂಭಾಷಣೆಗಳ ಮೂಲಕ ಪ್ರೇಕ್ಷಕರೊಂದಿಗೆ ಸಂವಹನ ನಡೆಸುತ್ತಿದ್ದಾರೆ. ಸ್ಥಳೀಯ ಶಾಲೆಗಳಿಂದ ವಿದ್ಯಾರ್ಥಿಗಳು ಬಂದು ತಜ್ಞರೊಂದಿಗೆ ಸಂವಹನ ನಡೆಸುತ್ತಿದ್ದಾರೆ. ನಗರದಲ್ಲಿ ಡೆಂಗ್ಯೂ ಮತ್ತು ಇತರ ರೋಗಗಳ ಹರಡುವಿಕೆ ತಡೆಯುವ ಮಾರ್ಗಗಳನ್ನು ಕಲಿಸಿ ಕೊಡುತ್ತಿದ್ದಾರೆ.

I AM ONE HEALTH FESTIVAL
ಐ ಆ್ಯಮ್ ಒನ್ ಹೆಲ್ತ್ ಉತ್ಸವ (ETV Bharat)

ಕಾರ್ಯಕ್ರಮದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಆ್ಯಂಡ್ ದಿ ಎನ್ವಿರಾನ್‍ಮೆಂಟ್, ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್, ಆರ್ಟ್ಪಾರ್ಕ್, ಟಾಟಾ ಇನ್‍ಸ್ಟಿಟ್ಯೂಟ್ ಫಾರ್ ಜೆನೆಟಿಕ್ಸ್ ಅಂಡ್ ಸೊಸೈಟಿ, ಬೆಂಗಳೂರು ಸಸ್ಟೈನಬಿಲಿಟಿ ಫಾರಂ, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡೆಮಿಯಾಲಜಿ ಮತ್ತು ಡಿಸೀಸ್ ಇನ್ಫಮ್ರ್ಯಾಟಿಕ್ಸ್, ಸಾಹಸ್ ಎನ್‍ಜಿಒ, ಮಾಲಿಕ್ಯುಲರ್ ಸೊಲ್ಯೂಷನ್ಸ್ ಕೇರ್ ಹೆಲ್ತ್ ಎಲ್‍ಎಲ್‍ಪಿ, ಸೈನ್ಸ್ ಗ್ಯಾಲರಿ ಬೆಂಗಳೂರು, ಎಕೋ ನೆಟ್‍ವರ್ಕ್ ಮುಂತಾದ ಸಂಸ್ಥೆಗಳು ಭಾಗವಹಿಸಿವೆ.

ಇದನ್ನೂ ಓದಿ: ಡೆಂಗ್ಯೂ ಜೊತೆಗೆ ಝೀಕಾ ವೈರಸ್ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸಿ: ದಿನೇಶ್ ಗುಂಡೂರಾವ್ - Dinesh Gundu Rao

ETV Bharat Logo

Copyright © 2024 Ushodaya Enterprises Pvt. Ltd., All Rights Reserved.