ಬೆಂಗಳೂರು: ಅನುಮಾನದ ಮೇರೆಗೆ ಪತ್ನಿಯನ್ನು ಕೊಲೆ ಮಾಡಿದ್ದ ಕ್ಯಾಬ್ ಚಾಲಕನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಕಿರಣ್ (31) ಬಂಧಿತ. ನವ್ಯಾಶ್ರೀ (28) ಹತ್ಯೆಯಾದ ಮಹಿಳೆ.
ಭದ್ರಾವತಿ ಮೂಲದವರಾದ ಕಿರಣ್ ಮತ್ತು ನವ್ಯಾಶ್ರೀ 3 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್ನಲ್ಲಿ ವಾಸವಾಗಿದ್ದರು. ಕಿರಣ್ ಕ್ಯಾಬ್ ಚಾಲಕನಾಗಿದ್ದ. ನೃತ್ಯ ಶಿಕ್ಷಕಿಯಾಗಿದ್ದ ನವ್ಯಾಶ್ರೀ ಆಗಾಗ ನೈಟ್ ಕ್ಲಬ್ಗಳಿಗೆ ಹೋಗಿ ಬರುತ್ತಿದ್ದರು. ಸ್ನೇಹಿತರೊಂದಿಗೆ ಸಲುಗೆ ಬೆಳೆಸಿಕೊಂಡಿರುವುದನ್ನ ಗಮನಿಸಿದ್ದ ಕಿರಣ್, ಪತ್ನಿಯ ಮೇಲೆ ಅನುಮಾನಪಟ್ಟಿದ್ದ. ಇದೇ ವಿಚಾರಕ್ಕಾಗಿ ಆಗಾಗ ಇಬ್ಬರು ಜಗಳವಾಡಿದ್ದರು. ಇದರಿಂದಾಗಿ ಕಿರಣ್ ಮನೆ ಬಿಟ್ಟು ಹೋಗಿದ್ದ. ಬಳಿಕ ಆ.27ರ ರಾತ್ರಿ ನಕಲಿ ಕೀ ಬಳಸಿ ಮನೆಯೊಳಗೆ ಬಂದು ಕಿರಣ್ ಅವಿತುಕೊಂಡಿದ್ದ. ನಂತರ ರಾತ್ರಿ 11ರ ವೇಳೆ ಸ್ನೇಹಿತೆಯೊಂದಿಗೆ ಮನೆಗೆ ಪತ್ನಿ ಬಂದಿದ್ದರು. ಆ ಬಳಿಕ ಪತ್ನಿಯು ತನ್ನ ಪರಿಚಿತ ವ್ಯಕ್ತಿಯ ಜೊತೆ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿದ್ದಳು. ಇದನ್ನು ನೋಡಿದ ಕಿರಣ್, ಪತ್ನಿ ಜೊತೆ ಜಗಳ ತೆಗೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ಬಗ್ಗೆ ಹೆಚ್ಚಿನ ವಿವರಣೆ ನೀಡಿರುವ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್, ಹತ್ಯೆಯಾದ ನವ್ಯಶ್ರೀ ಮತ್ತು ಆರೋಪಿ ಕಿರಣ್ ಲವ್ ಮ್ಯಾರೇಜ್ ಆಗಿದ್ದರು. ಕೆಲ ದಿನಗಳಿಂದ ಇಬ್ಬರಿಗೂ ಜಗಳ ಆಗಿತ್ತು. ಇದೇ ವಿಚಾರಕ್ಕಾಗಿ ಕಿರಣ್ ಮನೆ ಬಿಟ್ಟು ಹೊರಗಡೆ ಹೋಗಿದ್ದ. ಆ.27ರ ರಾತ್ರಿ 10 ಗಂಟೆ ವೇಳೆ ನಕಲಿ ಕೀ ಬಳಸಿ ಮನೆಯೊಳಗೆ ಬಂದಿದ್ದ. ಪತ್ನಿ ಬರುವವರೆಗೆ ದೇವರ ಮನೆಯಲ್ಲಿ ಅವಿತು ಕುಳಿತಿದ್ದ. ರಾತ್ರಿ 11 ಗಂಟೆ ವೇಳೆಗೆ ತನ್ನ ಸ್ನೇಹಿತೆ ಐಶ್ವರ್ಯ ಜೊತೆ ಪತ್ನಿ ಮನೆಗೆ ಬಂದಿದ್ದಳು. ಸ್ನೇಹಿತೆ ಮಲಗಿದ ನಂತರ ಹಾಲ್ಗೆ ಬಂದ ಪತ್ನಿ ತನ್ನ ಪರಿಚಿತನೊಂದಿಗೆ ವಿಡಿಯೋ ಕಾಲ್ ಮಾಡಿದ್ದಳು. ಇದನ್ನು ನೋಡಿದ ಪತಿ ಕಿರಣ್, ಪತ್ನಿಯೊಂದಿಗೆ ಜಗಳ ತೆಗೆದಿದ್ದ. ಆಗ ಸುರಕ್ಷತೆಗಾಗಿ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಮಲಗುವ ಕೊಠಡಿಗೆ ಪತ್ನಿ ಹೋಗಿದ್ದಳು. ಅಲ್ಲಿಗೂ ಕಿರಣ್ ಬಂದು ಜಗಳ ಮುಂದುವರೆಸಿದ್ದ. ಈ ವೇಳೆ ಅಲ್ಲಿಯೇ ಇದ್ದ ಐರನ್ ರಾಡ್ನಿಂದ ನವ್ಯಾಶ್ರಿಗೆ ಪತ್ನಿ ಹೊಡೆದು, ಬಳಿಕ ಅಲ್ಲೇ ಇದ್ದ ಚಾಕುವಿಂದ ಕತ್ತು ಕೊಯ್ದಿದ್ದಾನೆ. ಗಾಬರಿಗೊಂಡ ಕಿರಣ್ ನೆಲ ಸ್ವಚ್ವ ಮಾಡುವ ಆಯಿಲ್ ಕುಡಿದು ಆಸ್ಪತ್ರೆಗೆ ಸೇರಿದ್ದ. ಆ.28ರ ಬೆಳಗ್ಗೆ ಮೃತ ಸ್ನೇಹಿತೆ ಐಶ್ವರ್ಯ ಎದ್ದಾಗ ನವಾಶ್ರೀ ಹತ್ಯೆಯಾಗಿರುವುದನ್ನ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕಿರಣ್ನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯವೆಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ತಿಳಿಸಿದರು. ನವ್ಯಶ್ರೀ ಸ್ನೇಹಿತೆ ಐಶ್ಚರ್ಯ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕಬ್ಬಿಣದ ಪ್ಲೇಟ್ ಕಳ್ಳತನ ಮಾಡಿದ್ದ ಆರೋಪಿಯನ್ನ ಬಂಧಿಸಿದ ಉಪ್ಪಿನಂಗಡಿ ಪೊಲೀಸರು - Theft case accused arrested