ETV Bharat / state

ಚಾಮರಾಜನಗರದಲ್ಲಿ ಪತಿ ಅಬಕಾರಿ ಡಿಸಿ - ಪತ್ನಿ ಎಸ್ಪಿ - Husband Excise DC and Wife SP

author img

By ETV Bharat Karnataka Team

Published : Jul 3, 2024, 9:11 PM IST

Updated : Jul 3, 2024, 9:21 PM IST

ಚಾಮರಾಜನಗರದಲ್ಲಿ ಪತಿ ನಾಗಶಯನ ಅಬಕಾರಿ ಡಿಸಿ ಆಗಿದ್ದರೆ, ಇದೀಗ ಅವರ ಪತ್ನಿ ಡಾ.ಬಿ.ಟಿ. ಕವಿತಾ ಇದೇ ಜಿಲ್ಲೆಯಲ್ಲಿ ಎಸ್ಪಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಮತ್ತೊಂದೆಡೆ, ಸೀಮಾ ಲಾಟ್ಕರ್ ಅವರು ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ. ಇವರು ಮೈಸೂರಿನ ಇತಿಹಾಸದಲ್ಲಿ ಪ್ರಪ್ರಥಮ ಮಹಿಳಾ ಪೊಲೀಸ್ ಕಮಿಷನರ್ ಆಗಿದ್ದಾರೆ.

Mysuru Woman Police Commissioner  Mysuru  Chamarajanagar
ಚಾಮರಾಜನಗರದಲ್ಲಿ ಪತಿ ಅಬಕಾರಿ ಡಿಸಿ- ಪತ್ನಿ ಎಸ್ಪಿ, (ETV Bharat)

ಚಾಮರಾಜನಗರ: ಚಾಮರಾಜನಗರ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ.ಬಿ.ಟಿ. ಕವಿತಾ ಅಧಿಕಾರ ಸ್ವೀಕರಿಸಿದರು. ವಿಶೇಷವೆಂದರೆ, ಇವರ ಪತಿ ಚಾಮರಾಜನಗರ ಅಬಕಾರಿ ಇಲಾಖೆ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Mysuru Woman Police Commissioner  Mysuru  Chamarajanagar
ಚಾಮರಾಜನಗರ ನೂತನ ಎಸ್ಪಿ (ETV Bharat)

ಚಾಮರಾಜನಗರದಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪದ್ಮಿನಿ ಸಾಹು ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಕವಿತಾ ಅವರು ಈ ಹಿಂದೆ, ನಾಗರಿಕ ಹಕ್ಕು ನಿರ್ದೇಶನಾಲಯದ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕವಿತಾ ಅವರು 2016ರ ಕರ್ನಾಟಕ ಕೇಡರ್​​​ನ ಅಧಿಕಾರಿಯಾಗಿದ್ದಾರೆ‌. ಬುಧವಾರ ಮಧ್ಯಾಹ್ನ ಚಾಮರಾಜನಗರ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ‌.

ಚಾಮರಾಜನಗರ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಡಾ.ಬಿ.ಟಿ. ಕವಿತಾ (ETV Bharat)

ಪತಿ ನಾಗಶಯನ ಅಬಕಾರಿ ಇಲಾಖೆ ಉಪ ಆಯುಕ್ತರಾಗಿದ್ದರೆ, ಪತ್ನಿ ಈಗ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾರೆ. ಪತ್ನಿ ಅಧಿಕಾರ ಸ್ವೀಕಾರದಂದು ಪತಿಯೂ ಹಾಜರಾಗಿ ಶುಭ ಕೋರಿದ್ದಾರೆ.

ಚಾಮರಾಜನಗರದಲ್ಲಿ ಪತಿ ಅಬಕಾರಿ ಡಿಸಿ- ಪತ್ನಿ ಎಸ್ಪಿ (ETV Bharat)

ಜನಸ್ನೇಹಿ ಪೊಲೀಸ್- ಸುರಕ್ಷಿತ ಚಾಮರಾಜನಗರ: ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ''ಚಾಮರಾಜನಗರ ಜಿಲ್ಲೆಯು ಎರಡು ರಾಜ್ಯಗಳ ಗಡಿ ಹಂಚಿಕೊಂಡಿದೆ. ಚಾಮರಾಜನಗರವನ್ನು ಸುರಕ್ಷಿತ ಜಿಲ್ಲೆ ಮತ್ತು ಜನಸ್ನೇಹಿ ಪೊಲೀಸ್ ಮಾಡಲು ಮೊದಲ ಆದ್ಯತೆ ನೀಡಲಾಗುವುದು. ಅಪಘಾತ, ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲಾಗತ್ತದೆ ಎಂದು ನೂತನ ಎಸ್ಪಿ ಡಾ.ಬಿ.ಟಿ. ಕವಿತಾ ಅಭಯ ನೀಡಿದರು. ಪತಿಯೂ ಜಿಲ್ಲೆಯಲ್ಲಿ ಅಧಿಕಾರಿ ಆಗಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ''ಇಬ್ಬರು ಸರ್ಕಾರಿ ನೌಕರರಾಗಿದ್ದು, ಮೊದಲು ಕರ್ತವ್ಯಕ್ಕೆ ಆದ್ಯತೆ ಬಳಿಕ ವೈಯಕ್ತಿಕ ವಿಚಾರ'' ಎಂದರು.

ಸೀಮಾ ಲಾಟ್ಕರ್ ಅವರು ಮೈಸೂರು ನಗರ ಪೊಲೀಸ್ ಆಯುಕ್ತ ವರ್ಗಾವಣೆ (ETV Bharat)

ಮೈಸೂರಿನ ಇತಿಹಾಸದಲ್ಲಿಯೇ ಪ್ರಪ್ರಥಮ ಮಹಿಳಾ ಪೊಲೀಸ್ ಕಮಿಷನರ್: ಮೈಸೂರಿನ ಇತಿಹಾಸದಲ್ಲಿ ನಗರ ಪೊಲೀಸ್ ಆಯುಕ್ತರಾಗಿ ಮಹಿಳಾ ನೇಮಕಗೊಂಡಿರುವುದು ಇದೇ ಮೊದಲು. ಹೌದು, ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಸೀಮಾ ಲಾಟ್ಕರ್ ಅವರು ವರ್ಗಾವಣೆಗೊಂಡಿದ್ದಾರೆ.

ಮೈಸೂರು ಜಿಲ್ಲಾ ವರಿಷ್ಠಾಧಿಕಾರಿಯಾಗಿ ಪ್ರಥಮ ಮಹಿಳಾ ಅಧಿಕಾರಿಯಾಗಿ ಉತ್ತಮ ಆಡಳಿತ ನಡೆಸಿ ಸೈ ಎನ್ನಿಸಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣದ ವಿಚಾರಣಾಧಿಕಾರಿ ಕಾರ್ಯ ನಿರ್ವಹಿಸಿ, ಇದೀಗ ಮೈಸೂರು ನಗರ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ. ಮೈಸೂರು ಜಿಲ್ಲಾ ವರಿಷ್ಠಾಧಿಕಾರಿಯಾಗಿ ವಿಷ್ಣುವರ್ಧನ್ ಅವರು ವರ್ಗಾವಣೆಗೊಂಡಿದ್ದಾರೆ. ಇವರು ಮೈಸೂರಿನ ಕೆ‌.ಆರ್.ಎಸಿಪಿಯಾಗಿ, ನಂತರ ಮೈಸೂರು ನಗರ ಡಿಸಿಪಿಯಾಗಿ ಬಳಿಕ ಜಿಲ್ಲೆಗಳಲ್ಲಿ ಎಸ್​ಪಿಯಾಗಿ ಕೆಲಸ ಮಾಡಿ, ಮತ್ತೆ ಮೈಸೂರಿಗೆ ಬಂದಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಮೈಸೂರಿನ ಬಗ್ಗೆ ಸಮಗ್ರ ಮಾಹಿತಿ ಇರುವುದರಿಂದ ಆಡಳಿತ ಯಂತ್ರ ಸುಲಭವಾಗಿ ನಡೆಯಲಿದೆ.

ಇದನ್ನೂ ಓದಿ: ಪರಿಸರದ ಕುರಿತ ಸಂಶೋಧನೆಗಳು ಹಾಗೂ ಸಂಶೋಧನಾ ಕೇಂದ್ರಗಳ ಸ್ಥಾಪನೆ ಅಗತ್ಯ : ಸಿಎಂ ಸಿದ್ದರಾಮಯ್ಯ - ​​CM Siddaramaiah

Last Updated : Jul 3, 2024, 9:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.