ETV Bharat / state

ಕಾಡಾನೆ ಸೆರೆಗೆ ಬಳಸುವ ವಿಶೇಷ ಹಗ್ಗ ತಯಾರಿಸುವುದು ಹೇಗೆ? - special jute rope - SPECIAL JUTE ROPE

ಸಾಕಾನೆಗಳಿಂದ ಕಾಡಾನೆಗಳನ್ನು ಸೆರೆಹಿಡಿದ ಬಳಿಕ ಕಾಡಾನೆಗಳನ್ನು ಕರೆತರಲು ಬಳಸುವ ವಿಶೇಷ ಸೆಣಬಿನ ಹಗ್ಗವನ್ನು ಮೈಸೂರು ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ಮಾವುತರು ಹೆಣೆಯುತ್ತಿದ್ದು, ಆ ಬಗ್ಗೆ ವಿಶೇಷ ವಿಡಿಯೋ ಇಲ್ಲಿದೆ.

making jute rope
ಸೆಣಬಿನ ಹಗ್ಗ ತಯಾರಿಸುತ್ತಿರುವ ಸಿಬ್ಬಂದಿ (ETV Bharat)
author img

By ETV Bharat Karnataka Team

Published : Sep 11, 2024, 8:12 PM IST

ಕಾಡಾನೆ ಸೆರೆಗೆ ಬಳಸುವ ವಿಶೇಷ ಹಗ್ಗ ತಯಾರಿಸುವುದು ಹೇಗೆ? (ETV Bharat)

ಮೈಸೂರು: ಸಾಕಾನೆ ನೆರವಿನಿಂದ ಪುಂಡ ಕಾಡಾನೆಗಳನ್ನು ಸೆರೆ ಹಿಡಿದ ಸಂದರ್ಭದಲ್ಲಿ ಅವುಗಳನ್ನು ಕರೆತರಲು ಉಪಯೋಗಿಸುವ ವಿಶೇಷ ಹಗ್ಗ ತಯಾರಿಸುವುದೇ ವಿಶೇಷ. ಈ ರೀತಿಯ ವಿಶೇಷ ಸೆಣಬಿನ ಹಗ್ಗವನ್ನು ಹೇಗೆ ತಯಾರಿಸುತ್ತಾರೆ ಎಂಬ ವರದಿ ಇಲ್ಲಿದೆ.

ಕರ್ನಾಟಕದ ಗಜಪಡೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲೂ ಪುಂಡಾಟ ಮಾಡುವ ಕಾಡಾನೆ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತವೆ. ಇಂತಹ ಪುಂಡಾನೆಗಳನ್ನು ಸಾಕಾನೆಗಳು ಸೆರೆಹಿಡಿದಾಗ ಅವುಗಳನ್ನು ಎಳೆದುಕೊಂಡು ಬರಲು ವಿಶೇಷವಾಗಿ ಸಣಬಿನ ಹಗ್ಗವನ್ನು ಬಳಸಲಾಗುತ್ತದೆ. ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿರುವ 14 ಆನೆಗಳೊಂದಿಗೆ ಆಗಮಿಸಿರುವ ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಸಿಬ್ಬಂದಿ ಗಜಪಡೆ ತಾಲೀಮಿನ ನಂತರ ವಿರಾಮದ ಸಂದರ್ಭದಲ್ಲಿ ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ಕಾಡಾನೆ ಸೆರೆಗೆ ಬಳಸುವ ದೊಡ್ಡ ಸೆಣಬಿನ ಹಗ್ಗವನ್ನು ತಯಾರಿಸುತ್ತಿದ್ದಾರೆ.

ದಸರಾ ಮುಗಿದ ನಂತರ ಕಾಡಿಗೆ ಹೋದ ಸಾಕಾನೆಗಳನ್ನು ಕಾಡಾನೆ ಕಾರ್ಯಚರಣೆಯಲ್ಲಿ ಬಳಸುವಾಗ ಈ ಹಗ್ಗವನ್ನು ಉಪಯೋಗಿಸುತ್ತಾರೆ. ಸಸ್ಯದಲ್ಲಿ ಸಿಗುವ ನಾರಿನ ರೂಪದಲ್ಲಿರುವ ಸೆಣಬನ್ನು ನೀರಿಗೆ ಹಾಕಿ ಸ್ವಚ್ಛಗೊಳಿಸಿ, ಗಟ್ಟಿಯಾದ ನಾರನ್ನು ತಯಾರಿಸುತ್ತಾರೆ. ಇದು ತುಂಬಾ ಗಟ್ಟಿಯಾಗಿರುತ್ತದೆ. ಈ ಗಟ್ಟಿಯಾದ ಸೆಣಬಿನ ನಾರಿನಿಂದ ಹಗ್ಗ ತಯಾರಿಸುತ್ತಾರೆ. ಒಂದು ಹಗ್ಗ ಜತೆಗೆ ಇನ್ನೂ ಎರಡು ಹಗ್ಗಗಳನ್ನು ಸೇರಿ ಮೂರು ರೋರ್​ಗಳಾಗಿ ಹೆಣೆದು ಗಟ್ಟಿಮುಟ್ಟಾದ ಸೆಣಬಿನ ಹಗ್ಗ ತಯಾರಿಸುತ್ತಾರೆ.

ಇದನ್ನೂ ಓದಿ: VIDEO: ಶ್ರೀರಂಗಪಟ್ಟಣ ದಸರಾದಲ್ಲಿ 3ನೇ ಬಾರಿಗೆ ಅಂಬಾರಿ ಹೊರಲು ಸಜ್ಜಾಗುತ್ತಿರುವ ಮಹೇಂದ್ರ - Mahendra elephant

ETV Bharat Logo

Copyright © 2025 Ushodaya Enterprises Pvt. Ltd., All Rights Reserved.