ETV Bharat / state

ಗೌರಿ -ಗಣೇಶ ಹಬ್ಬ ಹೇಗೆ ಆಚರಿಸಬೇಕು; ಅರ್ಚಕರ ಸಂದರ್ಶನ - Priest Interview - PRIEST INTERVIEW

ಗೌರಿ-ಗಣೇಶ ಹಬ್ಬದಲ್ಲಿ ಯಾವ ರೀತಿ ಪೂಜೆ ಸಲ್ಲಿಸಬೇಕು ಎಂಬ ಬಗ್ಗೆ ಪ್ರಹ್ಲಾದ್‌ ರಾವ್‌ ಎಂಬ ಅರ್ಚಕರು ಮಾಹಿತಿ ನೀಡಿದ್ದಾರೆ.

PRIEST INTERVIEW
ಅರ್ಚಕ ಪ್ರಹ್ಲಾದ್‌ ರಾವ್‌ ಮಾಹಿತಿ (ETV Bharat)
author img

By ETV Bharat Karnataka Team

Published : Sep 5, 2024, 9:18 PM IST

ಅರ್ಚಕ ಪ್ರಹ್ಲಾದ್‌ ರಾವ್‌ ಮಾಹಿತಿ (ETV Bharat)

ಮೈಸೂರು: ಸಂಭ್ರಮದ ಗೌರಿ - ಗಣೇಶ ಹಬ್ಬವನ್ನು ಯಾವ ರೀತಿ ಆಚರಿಕಬೇಕು, ಈ ಬಾರಿ ಗೌರಿ-ಗಣೇಶನನ್ನು ಯಾವ ಮುಹೂರ್ತದಲ್ಲಿ ಕೂರಿಸಿದರೇ ಒಳ್ಳೆಯದು ಹಾಗೂ ವಿಘ್ನ ವಿನಾಶಕ ಗಣೇಶನನ್ನು ಪೂಜೆ ಮಾಡಿದರೆ ಯಾವ ರೀತಿ ಒಳಿತಾಗುತ್ತದೆ ಎಂಬ ಬಗ್ಗೆ ಈಟಿವಿ ಭಾರತಕ್ಕೆ ಅರಮನೆಯ ಗಜಪಡೆ ಪೂಜೆ ಮಾಡುವ ಅರ್ಚಕ ಪ್ರಹ್ಲಾದ್‌ ರಾವ್‌ ಮಾಹಿತಿ ನೀಡಿದ್ದಾರೆ.

ಈ ಬಾರಿ ಗೌರಿ ಹಬ್ಬ ಶುಕ್ರವಾರ ಬಂದಿದೆ. ಶುಕ್ರವಾರ ಎಂದರೆ ಲಕ್ಷ್ಮೀದೇವಿಯ ವಾರ. ಗಣೇಶನ ಹಬ್ಬ ಶನಿವಾರ ಬಂದಿದೆ. ಈ ದಿನ ಶುಭ ಅಮೃತ ಲಗ್ನದಲ್ಲಿ ಗಣೇಶನನ್ನ ಕೂರಿಸಬಹುದು. ವಿಶೇಷವಾಗಿ ಶುಕ್ರವಾರ ಬೆಳಗ್ಗೆ 5.10 ರಿಂದ 5.30 ಅಥವಾ 6.40 ರಿಂದ 9.40ರವರೆಗೆ ಶುಭ ಬ್ರಹ್ಮೀ ಮುಹೂರ್ತದಲ್ಲಿ ಮನೆ-ಮನೆಗಳಲ್ಲಿ ಗೌರಿಯನ್ನು ಸ್ಥಾಪಿಸಬಹುದು. ಆ ಬಳಿಕ ಪೂಜೆ ಸಲ್ಲಿಸಬೇಕು. ನಂತರ ಶನಿವಾರ ಬೆಳಗ್ಗೆ 7.35 ರಿಂದ 8.57ರ ಶುಭ ಅಮೃತ ಲಗ್ನದಲ್ಲಿ ಅಥವಾ 10.50 ರಿಂದ 12.30ರ ಶುಭ ಮುಹೂರ್ತದಲ್ಲಿ ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಇಟ್ಟು ಪೂಜೆ ಸಲ್ಲಿಸಬಹುದು. ಯಾವುದೇ ಶುಭ ಕಾರ್ಯಗಳಲ್ಲೂ ಮೊದಲು ಗಣೇಶನಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಗಣಪತಿಯ 32 ಅವತಾರಗಳಿದ್ದು 32 ಹೆಸರುಗಳಲ್ಲಿಯೂ ಜನ ಪೂಜೆ ಮಾಡುತ್ತಾರೆ. ಕೇಳಿದ್ದೆಲ್ಲವನ್ನೂ ಕೊಡುವ, ಯಾವುದೇ ಕೆಲಸಕ್ಕೂ ವಿಘ್ನವಾಗದ ರೀತಿಯಲ್ಲಿ ಎಲ್ಲ ಕೆಲಸಗಳನ್ನು ಮಾಡಿಸುವುದು ವಿನಾಯಕ ಎಂದು ಅರ್ಚಕ ಪ್ರಹ್ಲಾದ್‌ ರಾವ್‌ ಗೌರಿ-ಗಣೇಶ ಹಬ್ಬದಲ್ಲಿ ಯಾವ ರೀತಿ ಪೂಜೆ ಸಲ್ಲಿಸಬೇಕು ಎಂಬ ಬಗ್ಗೆಯೂ ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಂಗಳೂರು: ಗಣೇಶನ ಮಣ್ಣಿನ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ - Ganesha idols demand increased

ETV Bharat Logo

Copyright © 2024 Ushodaya Enterprises Pvt. Ltd., All Rights Reserved.