ETV Bharat / state

ಎಸ್ಸಿ/ಎಸ್ಟಿ‌ ರೈತರಿಗೆ ತೋಟಗಾರಿಕೆ ಇಲಾಖೆ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ - ತೋಟಗಾರಿಕೆ ಇಲಾಖೆ ಸಹಾಯಧನ

ಪರಿಶಿಷ್ಟ ಜಾತಿ ಮತ್ತು ಪಂಗಡ ರೈತರಿಂದ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ತೋಟಕಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನ.

ತೋಟಗಾರಿಕೆ ಇಲಾಖೆ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

author img

By ETV Bharat Karnataka Team

Published : Jan 25, 2024, 3:30 PM IST

ಬೆಳಗಾವಿ: ಬೆಳಗಾವಿ ತೋಟಗಾರಿಕೆ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಂದ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ಅವರು, 2023-24ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳಾದ ಬಾಳೆ, ದ್ರಾಕ್ಷಿ, ದಾಳಿಂಬೆ, ಮಾವು, ಅಂಜೂರ, ಡ್ರಾಗನ್ ಹಣ್ಣು, ಗೇರು, ಸ್ಟ್ರಾಬೇರಿ, ಜಾಮುನು, ಪೇರಲ, ಬೆಣ್ಣೆ ಹಣ್ಣು, ಹೈಬ್ರಿಡ್ ತರಕಾರಿ ಹಾಗೂ ವಿವಿಧ ಹೂವು ಬೆಳೆಗಳನ್ನು ಬೆಳೆಯಲು ಬೆಳೆಗಳ ಅನುಗುಣವಾಗಿ ರೂ.10 ಸಾವಿರ ದಿಂದ 30 ಸಾವಿರ ವರೆಗೆ ಪ್ರತಿ ಹೆಕ್ಟೇರ್​ಗೆ ಸಹಾಯಧನವನ್ನು ನೀಡಲಾಗುತ್ತದೆ.

ನೀರಾವರಿ ವ್ಯವಸ್ಥೆಗಾಗಿ ಸಮುದಾಯ ಕೃಷಿ ಹೊಂಡಕ್ಕೆ 4 ಲಕ್ಷ ರೂ. ಹಾಗೂ ವೈಯಕ್ತಿಕ ಕೃಷಿಹೊಂಡಕ್ಕೆ 75 ಸಾವಿರ ರೂ. ಸಹಾಯಧನ ನೀಡಲಾಗುವುದು. ಮತ್ತು ಸಂರಕ್ಷಿತ ಬೇಸಾಯ ಪದ್ಧತಿ ಅಳವಡಿಸಿಕೊಂಡು ಪಾಲಿಮನೆ ನಿರ್ಮಿಸಲು ಪ್ರತಿ 10 ಗುಂಟೆಗೆ 4.70 ಲಕ್ಷ ರೂ. ಹಾಗೂ ಪ್ಲಾಸ್ಟಿಕ್ ಹೊದಿಕೆಗಾಗಿ 16 ಸಾವಿರ ರೂ. ಪ್ರತಿ ಹೆಕ್ಟೇರ್​​ಗೆ ಸಹಾಯಧನವನ್ನು ನೀಡಲಾಗುವುದು ಎಂದರು. ಅಷ್ಟೇ ಅಲ್ಲದೆ ಕೋಯ್ಲೋತ್ತರ ನಿರ್ವಹಣೆಗಾಗಿ ಪ್ಯಾಕ್‌ಹೌಸ್ ನಿರ್ಮಿಸಿಕೊಳ್ಳಲು ಗರಿಷ್ಠ 2.00 ಲಕ್ಷ, ಪ್ರಾಥಮಿಕ ಸಂಸ್ಕರಣಾ ಘಟಕ ನಿರ್ಮಿಸಲು ಗರಿಷ್ಠ 10 ಲಕ್ಷ ರೂ., ಕೋಲ್ಡ್ ಸ್ಟೋರೆಜ್ ಘಟಕ ನಿರ್ಮಿಸಲು ಗರಿಷ್ಠ 2,800 ರೂ. ಪ್ರತಿ ಟನ್‌ನಂತೆ 5 ಸಾವಿರ ಟನ್ ವರೆಗೆ ಸಹಾಯಧನ ನೀಡಲಾಗುವುದು.

ಹಣ್ಣು ಮಾಗಿಸುವ ಘಟಕಕ್ಕೆ ಪ್ರತಿ ಟನ್‌ಗೆ 35 ಸಾವಿರ ರೂ. ಗರಿಷ್ಠ 300 ಟನ್ ಸಾಮರ್ಥ್ಯದ ವರೆಗೆ ಪ್ರತಿ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು. ಹಾಗೂ ತರಕಾರಿ ಮತ್ತು ಹಣ್ಣು ಮಾರಾಟ ಮಾಡಲು ತಳ್ಳುವ ಗಾಡಿಗೆ ರೂ. 15 ಸಾವಿರ ರೂ. ಸಹಾಯಧನವನ್ನು ಮಾರ್ಗಸೂಚಿಯನ್ವಯ ಗರಿಷ್ಠ ವೆಚ್ಚವನ್ನು ಪರಿಗಣಿಸಿ ನೀಡಲಾಗುವುದು ಎಂದು ಉಪನಿರ್ದೇಶಕ ಮಹಾಂತೇಶ ಮುರಗೋಡ ತಿಳಿಸಿದರು.

ತೋಟಗಾರಿಕಾ ಇಲಾಖೆಯಿಂದ ಎಸ್ಸಿ, ಎಸ್ಟಿ ರೈತರಿಗೆ ವಿವಿಧ ಯೋಜನೆಗಳಿದ್ದು, ಸಾಕಷ್ಟು ಅನುದಾನ ಲಭ್ಯವಿದೆ. ಆದರೆ ಅರ್ಜಿಗಳು ಮಾತ್ರ ಕಡಿಮೆ ಸಂಖ್ಯೆಯಲ್ಲಿ ಬರುತ್ತಿವೆ. ಇದರಿಂದ ಜಿಲ್ಲೆಗೆ ಬಂದಿರುವ ಅನುದಾನ ವಾಪಸ್ಸು ಹೋಗುವ ಸಾಧ್ಯತೆಯಿದ್ದು, ಅರ್ಹ ಫಲಾನುಭವಿಗಳು ಕೂಡಲೇ ಆಯಾ ತಾಲ್ಲೂಕಾ ತೋಟಗಾರಿಕಾ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸುವಂತೆ ಮಹಾಂತೇಶ ಮುರಗೋಡ ಕೋರಿದರು.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಲು ಪ.ಜಾತಿ/ಪ.ಪಂಗಡ ವರ್ಗದ ರೈತರಿಗೆ ಗರಿಷ್ಠ 5 ಹೇಕ್ಟರ್ ವರೆಗೆ ಸಹಾಯಧನ ನೀಡಬಹುದಾಗಿದ್ದು ಮೊದಲ 2 ಹೇಕ್ಟರ್ ಪ್ರದೇಶದವರೆಗೆ ಶೇ. 90ರಂತೆ ಹಾಗೂ ಉಳಿದ 3 ಹೇಕ್ಟರ್ ಪ್ರದೇಶಕ್ಕೆ ಶೇ.45ರಷ್ಟು ಸಹಾಯಧನ ಲಭ್ಯವಿರುತ್ತದೆ. ಕಡಿಮೆ ಅಂತರದ ಬೆಳೆಗಳಾದ ತರಕಾರಿ, ಹೂ ಬೆಳೆಗಳಿಗೆ ಗರಿಷ್ಠ 2 ಹೇಕ್ಟರ್ ಪ್ರದೇಶದವರೆಗೆ ಮಾತ್ರ ಶೇ.90 ಸಹಾಯಧನ ನೀಡಲಾಗುವುದು.

ಆಸಕ್ತ ಪ.ಜಾತಿ/ಪ.ಪಂಗಡ ವರ್ಗದ ರೈತರು ತಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದು ಅರ್ಹತಾ ಮಾನದಂಡದ ಪ್ರಕಾರ ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕೋರಿದರು.

ಇದನ್ನೂ ಓದಿ: ನೀರೆತ್ತುವ ಯೋಜನೆಗೆ ಸಿಎಂ ಚಾಲನೆ ನೀಡುವಾಗ ಕೈಕೊಟ್ಟ ಬಟನ್: ಚೆಸ್ಕಾಂ ಎಂಡಿ ಅಮಾನತು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.