ETV Bharat / state

ಪ್ರಜ್ವಲ್ ರೇವಣ್ಣ ಬಂಧನ: ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದೇನು? - G Parameshwar - G PARAMESHWAR

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣರನ್ನು ಎಸ್‌ಐಟಿ ಅರೆಸ್ಟ್ ಮಾಡಿದ್ದು, ಮುಂದಿನ ಕ್ರಮಗಳು ಪ್ರೊಸೀಜರ್ ಪ್ರಕಾರವೇ ನಡೆಯಲಿವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.

Prajwal Revanna  sexual assault case  G Parameshwara  Bengaluru
ಗೃಹ ಸಚಿವ ಜಿ.ಪರಮೇಶ್ವರ್ (ETV Bharat)
author img

By ETV Bharat Karnataka Team

Published : May 31, 2024, 11:02 AM IST

Updated : May 31, 2024, 1:05 PM IST

ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ (ETV Bharat)

ಬೆಂಗಳೂರು: ''ವಿದೇಶದಿಂದ ವಾಪಸ್​ ಆದ ಪ್ರಜ್ವಲ್ ರೇವಣ್ಣರನ್ನು ಎಸ್ಐಟಿ ಬಂಧಿಸಿದೆ. ನಿಯಮಾವಳಿಯಂತೆ ವೈದ್ಯಕೀಯ ಪರೀಕ್ಷೆ ಹಾಗು ಮುಂದಿನ ಕ್ರಮಗಳು ನಡೆಯಲಿವೆ'' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಸದಾಶಿವನಗರ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾದಾಗ ಆರೋಪಿತ ಪ್ರಜ್ವಲ್ ನಮ್ಮ ದೇಶದಲ್ಲೇ ಇದ್ದಿದ್ದರೆ, ನಮ್ಮ ತಂಡವನ್ನು ಕಳುಹಿಸಬಹುದಿತ್ತು. ಆದರೆ, ಅವರು ವಿದೇಶದಲ್ಲಿದ್ದ ಕಾರಣ ಬಂಧನ ತಡವಾಯಿತು. ಈಗ ಎಸ್ಐಟಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ಅಧಿಕಾರಗಳ ಜೊತೆ ಮುಂದಿನ ಕ್ರಮದ ಕುರಿತು ಚರ್ಚಿಸುತ್ತೇವೆ'' ಎಂದರು.

''ಆರೋಪಿ ಪ್ರಜ್ವಲ್ ರೇವಣ್ಣಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಎಲ್ಲವೂ ಪ್ರೊಸೀಜರ್ ಪ್ರಕಾರವೇ ನಡೆಯುತ್ತದೆ. ಸಂತ್ರಸ್ತ ಮಹಿಳೆಯರಿಗೆ ಬಂದು ದೂರು ನೀಡಲು ಮನವಿ ಮಾಡಿದ್ದೇವೆ. ಕಾನೂನು ರೀತಿ ತನಿಖೆ ಮುಂದುವರೆಯಲಿದೆ'' ಎಂದು ತಿಳಿಸಿದರು.

''ನಿನ್ನೆ ಶಿವಮೊಗ್ಗಕ್ಕೆ ಹೋಗಿದ್ದೆ. ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದೇನೆ. ಬಿಜೆಪಿ ಸಹಜವಾಗಿಯೇ ಸಚಿವ ನಾಗೇಂದ್ರ ರಾಜೀನಾಮೆಗೆ ಬೇಡಿಕೆ ಇಟ್ಟಿದೆ. ಆದರೆ, ಸರ್ಕಾರದಲ್ಲಿ ನಮಗೆ ಜವಾಬ್ದಾರಿ ಇದೆ. ಜನತೆಗೆ ನಾವು ಉತ್ತರ ಕೊಡಬೇಕಾಗಿದೆ. ಹಾಗಾಗಿ ಆ ದೃಷ್ಟಿಯಲ್ಲಿ ತನಿಖೆ ನಡೆಯುತ್ತಿದೆ. ಸಚಿವರು ಮೌಖಿಕ ಆದೇಶ ನೀಡಿದ್ದರು ಎಂದು ಡೆತ್ ನೋಟ್​ನಲ್ಲಿ ಇರುವುದನ್ನು ಪರಿಶೀಲನೆ ಮಾಡಬೇಕು. ಸಚಿವರು ಎಂದರೆ ಯಾರು? ಎಲ್ಲವನ್ನೂ ಪರಿಶೀಲಿಸಿ ತನಿಖೆ ಮಾಡಿ ನಂತರ ಕ್ರಮ ವಹಿಸಲಾಗುತ್ತಿದೆ'' ಎಂದು ಹೇಳಿದರು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್: ಎಸ್‌ಐಟಿ ಪ್ರಯತ್ನ ಹೇಗಿತ್ತು? ಇಲ್ಲಿಯವರೆಗಿನ ಬೆಳವಣಿಗೆಗಳು - Prajwal Revanna Case

Last Updated : May 31, 2024, 1:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.