ETV Bharat / state

ನಮ್ಮ ಪಕ್ಷದ್ದು ಸರಿಮಾಡಿಕೊಳ್ತೇವೆ, ಮೊದಲು ಅವರದ್ದು ನೋಡಿಕೊಳ್ಳಲಿ: ಪ್ರತಿಪಕ್ಷಗಳಿಗೆ ಪರಮೇಶ್ವರ್ ಟಾಂಗ್‌ - G Parameshwar

ಸರ್ಕಾರದ ಸ್ಥಿರತೆಯ ಬಗ್ಗೆ ಆರ್.ಅಶೋಕ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮೊದಲು ಅವರ ಜಗಳ ಸರಿಮಾಡಿಕೊಳ್ಳಲಿ. ನಮ್ಮ ಪಕ್ಷದ್ದನ್ನು ನಾವು ಸರಿಮಾಡಿಕೊಳ್ಳುತ್ತೇವೆ ಎಂದರು.

ಗೃಹ ಸಚಿವ ಜಿ.ಪರಮೇಶ್ವರ್
ಗೃಹ ಸಚಿವ ಜಿ.ಪರಮೇಶ್ವರ್ (ETV Bharat)
author img

By ETV Bharat Karnataka Team

Published : Sep 9, 2024, 11:36 AM IST

ಬೆಂಗಳೂರು: ಅವರಲ್ಲಿನ ಜಗಳವನ್ನು ಮೊದಲು ಸರಿ ಮಾಡಿಕೊಳ್ಳಲಿ, ನಮ್ಮ ಪಕ್ಷದ್ದನ್ನು ನಾವು ಸರಿಮಾಡಿಕೊಳ್ಳುತ್ತೇವೆ ಎಂದು ಪ್ರತಿಪಕ್ಷ ನಾಯಕರಿಗೆ ಗೃಹ ಸಚಿವ ಜಿ.ಪರಮೇಶ್ವರ್ ಟಾಂಗ್ ಕೊಟ್ಟರು.

'ನಮ್ಮ ಪಕ್ಷದ ವಿಚಾರ ಅವರಿಗೇಕೆ?': ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಸರ್ಕಾರದ ಸ್ಥಿರತೆ ಬಗ್ಗೆ ಆರ್.ಅಶೋಕ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮ ಪಕ್ಷದ ವಿಚಾರ ಅವರಿಗೇಕೆ?. ಅವರಲ್ಲಿನ ಜಗಳವನ್ನು ಮೊದಲು ಸರಿಮಾಡಿಕೊಳ್ಳಲಿ. ನಮ್ಮ ಪಕ್ಷದ್ದನ್ನು ನಾವು ಸರಿಪಡಿಸಿಕೊಳ್ತೇವೆ ಎಂದು ತಿರುಗೇಟು ಕೊಟ್ಟರು.

'ಸಿಎಂ ಹುದ್ದೆಯ ಕುರಿತು ಈಗಲೇ ಚರ್ಚೆ ಅಗತ್ಯವಿಲ್ಲ': ಮುಂದೊಮ್ಮೆ‌ ನಾನು ಸಿಎಂ ಆಗ್ತೇನೆ ಎಂಬ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ‌ಗೆ, ಇವತ್ತಿಗೆ ಆ ಪ್ರಶ್ನೆ ಬರಲ್ಲ, ಸಿಎಂ ಇದ್ದಾರೆ. ಕೋರ್ಟ್‌‌ನಲ್ಲಿ ಕೇಸ್ ಇದೆ ನಿಜ. ಏನಾಗುತ್ತೆ ಅಂತ ಕೋರ್ಟ್ ತೀರ್ಪಿನಿಂದ ಗೊತ್ತಾಗುತ್ತದೆ. ಸಿಎಂ ಹುದ್ದೆಗಾಗಿ ಈಗಲೇ ಚರ್ಚೆ ಮಾಡುವ ಅಗತ್ಯವಿಲ್ಲ. ನಾನು ಎಂ.ಬಿ.ಪಾಟೀಲ್ ಮೆನೆಗೆ ಹೋಗಿದ್ದು ಸಕಲೇಶಪುರ ಪ್ರೋಗ್ರಾಂ ಸಲುವಾಗಿ. ಇದಕ್ಕೆಲ್ಲಾ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸಿಎಂ ಕೇಸ್‌ನಿಂದ ಆಡಳಿತದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

'ಸರ್ಕಾರದ ಕೆಲಸಗಳು ನಡೆಯುತ್ತಿವೆ': ನಾವೆಲ್ಲಾ ನಮ್ಮ ನಮ್ಮ ಇಲಾಖೆಯ ಕೆಲಸ ಮಾಡುತ್ತಿದ್ದೇವೆ. ಯಾರೂ ಸುಮ್ಮನೆ ಕೂತಿಲ್ಲ. ಸಿಎಂ ಸ್ವಾಭಾವಿಕವಾಗಿ ಇಂದು ಯಾವ ಕೆಲಸಗಳನ್ನೂ ಹಾಕಿಕೊಂಡಿಲ್ಲ. ಇವತ್ತು ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಕಳೆದ ಬಾರಿ ಕೂಡ ಯಾವ ಕಾರ್ಯಕ್ರಮಕ್ಕೂ ಅನುಮತಿ ಕೊಟ್ಟಿರಲಿಲ್ಲ. ಸರ್ಕಾರದಲ್ಲಿ ಯಾವ ಕೆಲಸ ನಿಂತಿದೆ? ಯಾವ ಅಧಿಕಾರಿ ಆಫೀಸಿಗೆ ಹೋಗಿಲ್ಲ ಹೇಳಿ?. ಎಲ್ಲ ಕೆಲಸಗಳೂ ನಡೆಯುತ್ತಿವೆ ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ: ಎನ್​ಡಿಎ ನಾಯಕರ ಪ್ರಾಸಿಕ್ಯೂಷನ್ ಬಗ್ಗೆ ರಾಜ್ಯಪಾಲರಿಗೆ ಲೋಕಾಯುಕ್ತರಿಂದ ಸ್ಪಷ್ಟನೆ: ಪರಮೇಶ್ವರ್ - G Parameshwar

ದರ್ಶನ್ ಪ್ರಕರಣ: ದರ್ಶನ್‌ ಮತ್ತು ತಂಡದ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾಗುತ್ತಿರುವ ವಿಚಾರವಾಗಿ ಮಾತನಾಡುತ್ತಾ, ಇದು ಕಾನೂನು ಪ್ರಕಾರ ತೀರ್ಮಾನ ಆಗುತ್ತೆ. 17 ಮಂದಿ ಜಾಮೀನು ಕೇಳಿಕೊಂಡಿದ್ದಾರೆ. ಕೋರ್ಟ್‌ನಲ್ಲಿ ಏನು ತೀರ್ಮಾನ ಆಗುತ್ತೋ ಕಾದು ನೋಡೋಣ ಎಂದರು.

ಎತ್ತಿನಹೊಳೆ ಯೋಜನೆ: ಕೇಂದ್ರ ಅರಣ್ಯ ಪರಿಸರ ತಾಪಮಾನ ಮಂಡಳಿಯಿಂದ ಎತ್ತಿನಹೊಳೆ ಕಾರ್ಯಸಾಧ್ಯತಾ ವರದಿ ಕೇಳಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಈಗಾಗಲೇ ಯೋಜನೆಯ ಕೆಲಸ ಪ್ರಾರಂಭವಾಗಿದೆ. ಬಯಲುಸೀಮೆಗೆ ನೀರು ಬರುವ ಕೆಲಸ ಕಾರ್ಯಗಳು ನಡೆಯುತ್ತಿವೆ. ಅರಣ್ಯ ನಾಶ ಮಾಡದೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅದಕ್ಕೆ ಸಂಬಂಧಪಟ್ಟ ಇಲಾಖೆ ಉತ್ತರ ಕೊಡುತ್ತದೆ ಎಂದು ತಿಳಿಸಿದರು.

ಅಧೀಕ್ಷಕ ಆತ್ಮಹತ್ಯೆ ಯತ್ನ ಪ್ರಕರಣ: ಕಲಬುರಗಿಯಲ್ಲಿ ಅಧೀಕ್ಷಕ ಆತ್ಮಹತ್ಯೆ ಯತ್ನ ವಿಚಾರಕ್ಕೆ, ಯಾವ ಹಂತದಲ್ಲಿ, ಯಾರು ಹಣ ಕೇಳ್ತಿದ್ದಾರೆ?. ಡೆತ್ ನೋಟಲ್ಲಿ ಏನು ಬರೆದಿದ್ದಾರೆ?. ಯಾರು ಭಾಗಿಯಾಗಿದ್ದಾರೆ?. ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಇದನ್ನೂ ಓದಿ: ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾದರೆ ಅದನ್ನು ಹೈಕಮಾಂಡ್​ ನಿಭಾಯಿಸುತ್ತೆ: ಜಿ ಪರಮೇಶ್ವರ್​ - Home Minister G Parameshwar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.