ETV Bharat / state

ರೈತರಿಂದ ಟೊಮೆಟೊ ಖರೀದಿಸಿ ಹಣ ಪಾವತಿಸದ ವ್ಯಾಪಾರಿ; ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಣೆ - HIGH COURT REFUSES TO STAY CASE

ರೈತರ ಬದುಕಿನ ಜೊತೆ ಆಟವಾಡುವುದಕ್ಕೆ ಅವಕಾಶ ನೀಡುವುದಿಲ್ಲ. ರೈತರಿಗೆ ಅನ್ಯಾಯವಾಗುವಂತಹ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

Karnataka High Court
ಕರ್ನಾಟಕ ಹೈಕೋರ್ಟ್​ (ETV Bharat)
author img

By ETV Bharat Karnataka Team

Published : Dec 10, 2024, 7:49 AM IST

ಬೆಂಗಳೂರು: ಕೊರೋನಾ ಸಂದರ್ಭದಲ್ಲಿ ಟೊಮೆಟೊ ಖರೀದಿಸಿ ಹಣ ಪಾವತಿ ಮಾಡದ ವ್ಯಾಪಾರಿಯೊಬ್ಬರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ರೈತರ ಬದುಕಿನ ಜೊತೆ ಆಟವಾಡುವುದಕ್ಕೆ ಅವಕಾಶ ನೀಡುವುದಿಲ್ಲ. ರೈತರಿಗೆ ಅನ್ಯಾಯವಾಗುವಂತಹ ಅರ್ಜಿಯನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತು.

ಕೋವಿಡ್‌ ಸಂದರ್ಭದಲ್ಲಿ ಟೊಮೆಟೊ ಖರೀದಿಸಿ ರೈತರಿಗೆ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಕೋಲಾರದ ಮೆಹಬೂಬ್‌ ಪಾಷಾ ಮತ್ತು ಮುಬಾರಕ್‌ ಪಾಷಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯಪಟ್ಟಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ತರಕಾರಿ ಮಾರಾಟಗಾರರಾಗಿದ್ದು, ಕೋವಿಡ್‌ ಸಂದರ್ಭದಲ್ಲಿ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ಟೊಮೆಟೊ ಕೊಳೆತದ್ದರಿಂದ ಅವು ಮಾರಾಟವಾಗಿಲ್ಲ. ಮಧ್ಯವರ್ತಿಗಳು ಸಹ ರೈತರನ್ನು ದಾರಿ ತಪ್ಪಿಸಿದ್ದಾರೆ. ನಮ್ಮ ವಿರುದ್ಧ ನಕಲಿ ದೂರು ದಾಖಲಿಸಲಾಗಿದೆ. ಅದನ್ನು ರದ್ದುಪಡಿಸಬೇಕು ಎಂದು ಕೋರಿದರು.

ಇದಕ್ಕೆ ಪೀಠ, ಟೊಮೆಟೊ ತೆಗೆದುಕೊಂಡು ರೈತರಿಗೆ ದುಡ್ಡು ಕೊಡಲಿಲ್ಲ ಎಂದರೆ ಹೇಗೆ? ಬಡ ರೈತರಿಗೆ ನೀವು ಹೇಗೆ ವಂಚಿಸುತ್ತೀರಿ? ಕೋವಿಡ್‌ ಸಂದರ್ಭವಾಗಲಿ, ಯಾವುದೇ ಸಂದರ್ಭವಾಗಲಿ, ಟೊಮೆಟೊ ತೆಗೆದುಕೊಂಡಿದ್ದೀರಲ್ಲವೇ? ರೈತರಿಂದ ಟೊಮೆಟೊ ಖರೀದಿಸಿ, ಅದು ಮಾರಾಟವಾಗಲಿಲ್ಲ ಎಂದು ನೀವು ರೈತರನ್ನು ವಾಪಸ್‌ ತೆಗೆದುಕೊಳ್ಳಿ ಎಂದು ಹೇಳಲಾಗುತ್ತದೆಯೇ? ಏನು ಇದರ ಅರ್ಥ? ಟೊಮೆಟೊ ಬದಲು ಬೇರೆ ಕೊಡಿ ಎಂದು ಹೇಳಲು ಇದು ವಿನಿಮಯವೇ? ಅರ್ಜಿದಾರರಿಗೆ ಟೊಮೆಟೊ ಮಾರಾಟ ಮಾಡಿರುವವರು ರೈತರಲ್ಲಾ ಎಂದಿಟ್ಟುಕೊಳ್ಳೋಣ. ಅರ್ಜಿದಾರರಿಗೆ ಟೊಮೆಟೊ ಮಾರಾಟ ಮಾಡಿರುವವರು ಅದನ್ನು ಎಲ್ಲಿ ಖರೀದಿಸಿರುತ್ತಾರೆ? ಅಂತಿಮವಾಗಿ ರೈತರ ಹೊಟ್ಟೆಗೆ ಏಟು ಬೀಳುತ್ತದೆ ಎಂದು ಪೀಠ ಹೇಳಿದೆ.

ರೈತರಿಗೆ ಅನ್ಯಾಯವಾಗುವ ಅರ್ಜಿಯನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ. 50 ಸಾವಿರ, ಒಂದು ಲಕ್ಷ, ಗರಿಷ್ಠ 2.92 ಲಕ್ಷ ರೂಪಾಯಿ ಪಾವತಿಸಬೇಕಿದೆ. ಟೊಮೆಟೊ ತೆಗೆದುಕೊಂಡು ದುಡ್ಡು ಕೊಡುವುದಿಲ್ಲ ಎಂದರೆ ಹೇಗೆ? ರೈತನ ಗತಿ ಏನಾಗಬೇಕು? ಇದಕ್ಕೆ ತಡೆ ನೀಡುವುದಿಲ್ಲ. ಅಧೀನ ನ್ಯಾಯಾಲಯಕ್ಕೆ ವಿಚಾರಣೆಗೆ ಅನುಮತಿಸಲಾಗುವುದು. ಏಕೆಂದರೆ ನೀವು ರೈತರ ಬದುಕಿನ ಜೊತೆ ಆಟವಾಡುತ್ತಿದ್ದೀರಿ. ಇದರಿಂದ ಅಂತಿಮವಾಗಿ ರೈತರಿಗೆ ಹಣ ಸಿಗುವುದಿಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಮಧ್ಯವರ್ತಿಗಳ ಮೂಲಕ ಟೊಮೆಟೊ ಖರೀದಿಸುತ್ತೀರಿ. ಅವರ ಮೂಲಕ ರೈತರಿಗೆ ಹಣ ಸಂದಾಯವಾಗುತ್ತದೆ. ಒಟ್ಟಾರೆ ರೈತನಿಗೆ ಸಿಗುವ ಹಣವೇ ಕಡಿಮೆ. ಅದಾಗ್ಯೂ, ರೈತರಿಗೆ ಹಣ ನೀಡುವುದಿಲ್ಲ ಎಂದರೆ ಹೇಗೆ? ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಎಷ್ಟು ಹಣ ಪಾವತಿಸಲಾಗಿದೆ ಮತ್ತು ಎಷ್ಟು ಬಾಕಿ ಇದೆ ಎಂದು ವಿವರಿಸಲಾಗಿದೆ. ರೈತರು ಎಲ್ಲಿಗೆ ಹೋಗಬೇಕು? ದೊಡ್ಡದೊಡ್ಡವರು ಕೋಟ್ಯಂತರ ರೂಪಾಯಿ ರಿಕವರಿ ಹಣ ವಸೂಲಿಗೆ ಅರ್ಜಿ ಹಾಕುತ್ತಾರಲ್ಲ. ಅದರಲ್ಲಿ ಬೇಕಾದರೆ ತಡೆ ನೀಡುತ್ತೇನೆ. ಇಂಥ ಪ್ರಕರಣದಲ್ಲಿ ತಡೆ ನೀಡುವುದಿಲ್ಲ. ರೈತರಿಗೆ ಬೇರೆ ದಾರಿ ಏನಿದೆ? ಈ ಅರ್ಜಿಯಲ್ಲಿ ತಡೆ ನೀಡುವುದಿರಲಿ, ಇದಕ್ಕೆ ಆದ್ಯತೆಯನ್ನೇ ನೀಡುವುದಿಲ್ಲ ಎಂದು ತಿಳಿಸಿ ಪೀಠ ಅರ್ಜಿ ವಿಚಾರಣೆ ಮುಂದೂಡಿತು.

ಇದನ್ನೂ ಓದಿ: ಅಪ್ರಾಪ್ತೆಯ ಅಪಹರಿಸಿ ಅತ್ಯಾಚಾರ; ಅಪರಾಧಿಗೆ ದಂಡಸಹಿತ 20 ವರ್ಷ ಕಠಿಣ ಜೈಲು ಶಿಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.