ETV Bharat / state

13 ವರ್ಷದ ಹಿಂದೆ ಮುದ್ರಾಂಕ ಶುಲ್ಕ ಪಾವತಿ ಮಾಡದ ಹಿನ್ನೆಲೆ ನಿವೇಶನ ವಶ : ಹೈಕೋರ್ಟ್ ಸೂಚನೆ - confiscate land - CONFISCATE LAND

ನಿವೇಶನ ಮಾರಾಟಕ್ಕೆ ಸಂಬಂಧಿಸಿದಂತೆ ಮುದ್ರಾಂಕ ಶುಲ್ಕ ಪಾವತಿ ಮಾಡದ ಹಿನ್ನೆಲೆ ಜಮೀನಿನ ದಾಖಲೆ ವಶಕ್ಕೆ ತೆಗೆದುಕೊಳ್ಳುವಂತೆ ಹೈಕೋರ್ಟ್​ ಸರ್ಕಾರಕ್ಕೆ ಸೂಚಿಸಿದೆ.

High court
ಹೈಕೋರ್ಟ್ (ETV Bharat)
author img

By ETV Bharat Karnataka Team

Published : May 17, 2024, 10:50 PM IST

ಬೆಂಗಳೂರು : ಕೋಲಾರದಲ್ಲಿ 13 ವರ್ಷಗಳ ಹಿಂದೆ ಎರಡು ನಿವೇಶನಗಳ ಮಾರಾಟ ವಿಚಾರದಲ್ಲಿ ಮುದ್ರಾಂಕ ಶುಲ್ಕ ಪಾವತಿಸದ ಹಿನ್ನೆಲೆ ಆ ಜಮೀನಿನ ದಾಖಲೆಯನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಮೆಹಬೂಬ್ ಮುನಾವರ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಆಲಿಸಿದ ನ್ಯಾಯಮೂರ್ತಿಗಳಾದ ಎಸ್. ಜಿ ಪಂಡಿತ್ ಮತ್ತು ನ್ಯಾಯಮೂರ್ತಿ ಸಿ. ಎಂ ಪೂಣಚ್ಚ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ. ನಿವೇಶನ ಮಾರಾಟದ ಕ್ರಯಪತ್ರದ ದಾಖಲೆಯನ್ನು ಕೇವಲ 2 ರೂಪಾಯಿ ಮೌಲ್ಯದ ಕಾಗದದಲ್ಲಿ ಮುದ್ರಿಸಲಾಗಿದೆ. ಅದಕ್ಕೆ ಮುದ್ರಾಂಕ ಶುಲ್ಕ ಪಾವತಿಸಿಲ್ಲ ಎಂಬ ಸಂಗತಿ ಕಂಡು ಬಂದಿದೆ ಎಂದು ಪೀಠ ತಿಳಿಸಿದೆ.

ಕರಾರು ಒಪ್ಪಂದಕ್ಕೆ ಮುದ್ರಾಂಕ ಶುಲ್ಕ ಪಾವತಿಸಿಲ್ಲ. ಹಾಗಾಗಿ ಆ ದಾಖಲೆಯನ್ನು ವಶಕ್ಕೆ ಪಡೆದುಕೊಳ್ಳಬೇಕು. ಒಪ್ಪಂದವನ್ನು ಪರಿಶೀಲಿಸಿ ಅದಕ್ಕೆ ಎಷ್ಟು ಶುಲ್ಕ ಪಾವತಿಸಬೇಕು ಮತ್ತು ಅದಕ್ಕೆ ಎಷ್ಟು ದಂಡ ಶುಲ್ಕ ಪಾವತಿಸಬೇಕು ಎಂಬುದನ್ನು ಜಿಲ್ಲಾಧಿಕಾರಿ ನಿರ್ಧರಿಸಬೇಕು ಎಂದು ಪೀಠ ಹೇಳಿದೆ. ಅಲ್ಲದೇ, ನ್ಯಾಯಾಲಯ ಗುಪ್ತಾ ಅವರು ನೀಡಿದ್ದ 50 ಸಾವಿರ ರೂ. ಹಣವನ್ನು ಒಪ್ಪಂದ ಮಾಡಿಕೊಂಡ ದಿನದಿಂದ ಶೇ.12ರ ಬಡ್ಡಿ ದರ ಸೇರಿಸಿ ಪಾವತಿ ಮಾಡಬೇಕು ಎಂದು ಆದೇಶಿಸಿತು.

ಪ್ರಕರಣದ ಹಿನ್ನೆಲೆ : ಬೆಂಗಳೂರಿನ ಮೆಹಬೂಬ್ ಮುನಾವರ್ 2010 ರ ಅ. 18 ರಂದು ಕೋಲಾರದವರೇ ಆದ ಅಶ್ವತ್ಥ್​ ನಾರಾಯಣ ಗುಪ್ತ ಎಂಬುವರಿಗೆ ಕೋಲಾರದಲ್ಲಿನ ಎರಡು ನಿವೇಶನಗಳನ್ನು ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. ಆ ನಿವೇಶನಗಳನ್ನು 36.5 ಲಕ್ಷ ರೂ.ಗಳಿಗೆ ಖರೀದಿಸಲು ಉದ್ದೇಶಿಸಿ ಒಪ್ಪಂದ ಮಾಡಿಕೊಂಡು 50 ಸಾವಿರ ಮುಂಗಡ ಹಣ ನೀಡಿದ್ದರು.

ಉಳಿದ ಹಣ ಮೂರು ತಿಂಗಳ ನಂತರ ಪಾವತಿಸಲು ಇಬ್ಬರೂ ಸಹ ಒಪ್ಪಂದದಲ್ಲಿ ಒಪ್ಪಿಕೊಂಡಿದ್ದರು. ಆನಂತರ ಗುಪ್ತಾ ಅವರ ಪರವಾಗಿ ಮುನಾವರ್ ಕ್ರಯಪತ್ರ ಮಾಡಿಕೊಡುವುದಾಗಿ ಹೇಳಿದ್ದರು. ಆದರೆ ಒಪ್ಪಂದದಂತೆ ಮುನಾವರ್ ಕ್ರಯಪತ್ರ ಮಾಡಿಕೊಡಲು ನಿರಾಕರಿಸಿದರು.

ಹಾಗಾಗಿ ಗುಪ್ತಾ 2012ರಲ್ಲಿ ಕೋಲಾರ ನ್ಯಾಯಾಲಯದ ಮೊರೆ ಹೋಗಿ ತಮ್ಮ ಪರ ಆದೇಶ ನೀಡುವಂತೆ ಕೋರಿದ್ದರು. 2015ರ ನ. 3 ರಂದು ನ್ಯಾಯಾಲಯ ಗುಪ್ತಾ ಪರ ಆದೇಶ ನೀಡಿತ್ತು. ಆದರೆ ಗುಪ್ತಾ 2013ರಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಅವರ ಮಕ್ಕಳು ವ್ಯಾಜ್ಯ ಮುಂದುವರಿಸಿದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕರಾರು ಒಪ್ಪಂದಕ್ಕೆ 9,125 ರೂ. ಮುದ್ರಾಂಕ ಶುಲ್ಕ ಪಾವತಿಸಬೇಕಿತ್ತು. ಆದರೆ ಪಾವತಿಸಿಲ್ಲ. ಹಾಗಾಗಿ ಕರಾರು ಒಪ್ಪಂದ ವಶಪಡಿಸಿಕೊಳ್ಳಲು ಆದೇಶ ನೀಡಬೇಕು ಎಂದು ಕೋರಿದ್ದರು.

ಇದನ್ನೂ ಓದಿ : ಆರೋಪಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್ - High Court

ETV Bharat Logo

Copyright © 2025 Ushodaya Enterprises Pvt. Ltd., All Rights Reserved.