ETV Bharat / state

ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿಂದ ಒಂದೇ ದಿನ 600 ಅರ್ಜಿಗಳ ವಿಚಾರಣೆ! - High Court Judge Nagaprasanna

ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ನಿಗದಿಪಡಿಸಿದ್ದ ಎಲ್ಲ ಅರ್ಜಿಗಳನ್ನು ಒಂದೇ ದಿನ ವಿಚಾರಣೆ ನಡೆಸಿದ್ದಾರೆ. ಈ ಹಿಂದೆ ಒಂದೇ ದಿನದ ಕಲಾಪದದಲ್ಲಿ 801 ಅರ್ಜಿಗಳನ್ನು ಅವರು ವಿಚಾರಣೆ ನಡೆಸಿದ್ದರು.

ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ
ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ (ETV Bharat)
author img

By ETV Bharat Karnataka Team

Published : Jun 18, 2024, 10:11 PM IST

ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಮಂಗಳವಾರ ಒಂದೇ ದಿನದ ಕಲಾಪದಲ್ಲಿ ಒಟ್ಟು 600 ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ. ಬೆಂಗಳೂರು ಪ್ರಧಾನ ಪೀಠದಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಕೋರ್ಟ್‌ಹಾಲ್‌ನ ಕಾಸ್‌ಲಿಸ್ಟ್‌ನಲ್ಲಿ (ವ್ಯಾಜ್ಯಗಳ ಪಟ್ಟಿ) 600 ಅರ್ಜಿಗಳನ್ನು ವಿಚಾರಣೆಗೆ ನಿಗದಿಪಪಡಿಸಲಾಗಿತ್ತು. ಅಷ್ಟೂ ಅರ್ಜಿಗಳ ವಿಚಾರಣೆಯನ್ನು ಸಂಜೆ 4 ಗಂಟೆಗೆ ಪೂರ್ಣಗೊಳಿಸಿ ಕಲಾಪ ಪೂರ್ಣಗೊಳಿಸಿದರು.

ನಿಗದಿಪಡಿಸಿದ್ದ ಎಲ್ಲ ಅರ್ಜಿಗಳ ವಿಚಾರಣೆ: ನಿಗದಿಯಾಗಿದ್ದ 600 ಅರ್ಜಿಗಳ ಪೈಕಿ 180 ಅರ್ಜಿಗಳ ಸಂಬಂಧ ಮಧ್ಯಂತರ ಆದೇಶ ಮಾಡಿದ್ದಾರೆ. 87 ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ವಿಲೇವಾರಿ ಮಾಡಿದ್ದಾರೆ. ಇನ್ನುಳಿದ ಅರ್ಜಿಗಳನ್ನು ಮುಂದೂಡಿದ್ದಾರೆ.

ನ್ಯಾಯಮೂರ್ತಿ ನಾಗಪ್ರಸನ್ನ ಅವರು ಇದೇ 2024ರ ಮಾ. 22ರಂದು ಒಂದೇ ದಿನದ ಕಲಾಪದಲ್ಲಿ 801 ಅರ್ಜಿಗಳನ್ನು ವಿಚಾರಣೆ ನಡೆಸಿದ್ದರು. ಅವುಗಳ ಪೈಕಿ 36 ಅರ್ಜಿಗಳ ಸಂಬಂಧ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದ್ದರು. ಉಳಿದಂತೆ ಸುಮಾರು 572 ಅರ್ಜಿಗಳನ್ನು ವಿಚಾರಣೆ ನಡೆಸಿ ಇತ್ಯರ್ಥಪಡಿಸಿದ್ದರು. ಇತ್ಯರ್ಥವಾದ ಪ್ರಕರಣಗಳಲ್ಲಿ 544 ಅರ್ಜಿಗಳು ಬೆಂಗಳೂರು ಜಲಮಂಡಳಿಗೆ ಸಂಬಂಧಿಸಿದ್ದಾಗಿದ್ದವು.

ಕಳೆದ ವರ್ಷ ಒಂದೇ ದಿನ 522 ಪ್ರಕರಣಗಳ ಅರ್ಜಿ ವಿಚಾರಣೆ: ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಕಳೆದ ವರ್ಷ 2023ರ ಜೂನ್ 12 ರಂದು ಒಂದೇ ದಿನ 522 ಪ್ರಕರಣಗಳನ್ನು ವಿಚಾರಣೆ ನಡೆಸಿತ್ತು.

ಹೈಕೋರ್ಟ್ ನ್ಯಾಯಪೀಠಗಳು ದಿನಕ್ಕೆ 200 ಅಥವಾ ಗರಿಷ್ಠ ಎಂದರೆ 300 ಪ್ರಕರಣಗಳನ್ನು ವಿಷಯ ಪಟ್ಟಿಗೆ (ಕಾಸ್ ಲಿಸ್ಟ್)ಗೆ ಹಾಕಿಸಿ ಅವುಗಳ ವಿಚಾರಣೆ ನಡೆಸುವುದು ಸಾಮಾನ್ಯ ಮತ್ತು ಬಹುತೇಕ ಪ್ರಕರಣ ವಿಚಾರಣೆ ನಡೆಸಿ ಉಳಿದ ಪ್ರಕರಣಗಳಿಗೆ ಸಮಯದ ಅಭಾವ ಉಂಟಾದರೆ ಅವುಗಳನ್ನು ಮುಂದೂಡಲಾಗುತ್ತಿತ್ತು. ಆದರೆ ಮೊದಲ ಬಾರಿ ನ್ಯಾಯಮೂರ್ತಿ ನಾಗಪ್ರಸನ್ನ ಅವರು 522 ಪ್ರಕರಣಗಳನ್ನು ವಿಚಾರಣೆಗೆ ನಿಗದಿಪಡಿಸಿ, ಬಹುತೇಕ ಅಷ್ಟೂ ಪ್ರಕರಣಗಳ ವಿಚಾರಣೆ ನಡೆಸಿದ್ದರು. ಇದಕ್ಕೂ ಮೊದಲು ಕೆಲವು ತಿಂಗಳ ಹಿಂದೆ ಇವರೇ 480ಕ್ಕೂ ಅಧಿಕ ಪ್ರಕರಣಗಳನ್ನು ಒಂದೇ ದಿನ ವಿಚಾರಣೆ ನಡೆಸಿದ್ದರು.

ಇದನ್ನೂ ಓದಿ: 85 ವರ್ಷದ ವೃದ್ದೆಗೆ ವಾರ್ಷಿಕ 14 ಲಕ್ಷ ಜೀವನಾಂಶ ನೀಡುವಂತೆ ಮಗ, ಮೊಮ್ಮಗಳಿಗೆ ಸೂಚಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.