ETV Bharat / state

ಪೊಲೀಸರು ವಶಕ್ಕೆ ಪಡೆದ ವಸ್ತುಗಳ ಬಿಡುಗಡೆಗೆ ಮಾರ್ಗಸೂಚಿ ಹೊರಡಿಸಿದ ಹೈಕೋರ್ಟ್ - HIGH COURT GUIDELINES

ಪೊಲೀಸರು ವಶಪಡಿಸಿಕೊಂಡ ವಸ್ತುಗಳ ಬಿಡುಗಡೆ ಕುರಿತಂತೆ ಹೈಕೋರ್ಟ್ ಮಾರ್ಗಸೂಚಿ ಹೊರಡಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Oct 15, 2024, 6:31 PM IST

ಬೆಂಗಳೂರು: ಕಳ್ಳತನ ಪ್ರಕರಣಗಳಲ್ಲಿ ಪೊಲೀಸರು ವಶಕ್ಕೆ ಪಡೆದ ವಸ್ತುಗಳನ್ನು ಮಾಲೀಕರಿಗೆ ಬಿಡುಗಡೆ ಮಾಡಲು ವಿಚಾರಣಾ ನ್ಯಾಯಾಲಯ ಅನುಸರಿಸಬೇಕಾದ ಹಲವು ಮಾರ್ಗಸೂಚಿಗಳನ್ನು ಹೈಕೋರ್ಟ್ ಹೊರಡಿಸಿದೆ. ಈ ಸಂಬಂಧ ಸರ್ಕಾರ ನಿಯಮಗಳನ್ನು ರೂಪಿಸುವವರೆಗೂ ಈ ಮಾರ್ಗಸೂಚಿಗಳು ಅನ್ವಯವಾಗಲಿದೆ ಎಂದು ತಿಳಿಸಿದೆ.

ಅಂಗಡಿಯೊಂದರಲ್ಲಿ ನಡೆದ ಕಳ್ಳತನದಲ್ಲಿ ಕದ್ದ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ವಶಪಡಿಸಿಕೊಂಡಿರುವ ಪೊಲೀಸರಿಂದ ಬಿಡುಗಡೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ವಿಶಾಲ್ ಖಟ್ವಾನಿ ಎಂಬವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ನ್ಯಾಯಪೀಠ ಈ ಮಾರ್ಗಸೂಚಿಗಳನ್ನು ಹೊರಡಿಸಿದೆ.

ವಶಪಡಿಸಿಕೊಂಡ ಉಪಕರಣಗಳ ಮೌಲ್ಯವನ್ನು ತನಿಖಾಧಿಕಾರಿಗಳು ಎಫ್‌ಐಆರ್​ನಲ್ಲಿ ತೋರಿಸಿಲ್ಲ. ವಿಚಾರಣಾ ನ್ಯಾಯಾಲಯದಲ್ಲಿಯೂ ವಿವರಿಸಿಲ್ಲ. ಆದರೂ, ಎಲ್ಲ ವಸ್ತುಗಳನ್ನು ಬಿಡುಗಡೆಗೆ ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಅಮಾನತಿನಲ್ಲಿಟ್ಟು, ಅರ್ಜಿದಾರರಿಂದ 40 ಲಕ್ಷ ರೂ.ಗಳ ಬಾಂಡ್ ಪಡೆದು ಎಲ್ಲ ವಸ್ತುಗಳನ್ನು ಬಿಡುಗಡೆ ಮಾಡಲು ಹೈಕೋರ್ಟ್ ಆದೇಶಿಸಿದೆ.

ಅಲ್ಲದೆ, ವಿದ್ಯುನ್ಮಾನ ಉಪಕರಣಗಳು, ಡಿಜಿಟಲ್ ಸಾಧನಗಳು, ವೈದ್ಯಕೀಯ ಮಾದರಿಗಳು, ಆಹಾರ ಪದಾರ್ಥಗಳು, ಪೆಟ್ರೋಲಿಯಂ ಉತ್ಪನ್ನಗಳು, ಶೀಘ್ರದಲ್ಲಿ ಹಾಳಾಗುವಂತಹ ವಸ್ತುಗಳು, ಚಿನ್ನ ಮತ್ತು ಬೆಳ್ಳಿಯಂತಹ ಬೆಲೆ ಬಾಳುವಂತಹ ವಸ್ತುಗಳುನ್ನು ವಶಪಡಿಸಿಕೊಂಡು ಅದನ್ನು ಬಿಡುಗಡೆ ಮಾಡುವ ಸಂಬಂಧ ರಾಜ್ಯ ಸರ್ಕಾರ ಅಗತ್ಯವಾದ ನಿಯಮಗಳನ್ನು ರೂಪಿಸಬೇಕು ಎಂದು ಪೀಠ ಸೂಚನೆ ನೀಡಿದೆ.

ಹೈಕೋರ್ಟ್ ಮಾರ್ಗಸೂಚಿಗಳು:

  • ತನಿಖಾಧಿಕಾರಿಗಳು ವಶಪಡಿಸಿಕೊಂಡ ವಸ್ತುಗಳ ಬಿಡುಗಡೆಗೆ ನ್ಯಾಯಾಲಯ ಸೂಚನೆ ನೀಡಿದ ಸಂದರ್ಭದಲ್ಲಿ ಬಿಡುಗಡೆ ಮಾಡುವ ಪ್ರತಿಯೊಂದು ವಸ್ತು ಇರುವ ಸಂಬಂಧ ಖಚಿತಪಡಿಸಿಕೊಳ್ಳಬೇಕು.
  • ಮಹಜರ್ ಮಾಡಿ ವಶಪಡಿಸಿಕೊಂಡಿರುವ ಎಲ್ಲ ವಸ್ತುಗಳು ಬಿಡುಗಡೆ ವೇಳೆ ಹೊಂದಾಣಿಕೆಯಾಗಬೇಕು. ಮಹಜರ್ ಸಂದರ್ಭದಲ್ಲಿ ದಾಖಲೆಗಳಲ್ಲಿ ಕ್ರಮ ಸಂಖ್ಯೆಗಳನ್ನು ನೀಡಬೇಕು. ಆ ವಸ್ತುಗಳ ತಯಾರಿಕೆ ಮಾಡಿದವರ ಹೆಸರು ಅವುಗಳ ವಿಶಿಷ್ಟ ಗುರುತುಗಳು, ವಿಶಿಷ್ಟ ಸಂಖ್ಯೆಗಳನ್ನು ಸೇರಿಸಿರಬೇಕು. ವಿಚಾರಣೆ ಸಂದರ್ಭದಲ್ಲಿ ಎಲ್ಲ ವಸ್ತುಗಳನ್ನು ಸ್ಪಷ್ಟವಾಗಿ ಗುರುತಿಸಬೇಕು.
  • ಮಹಜರ್‌ನಲ್ಲಿ ವಶಪಡಿಸಿಕೊಂಡ ಆಸ್ತಿಯ ಅಂದಾಜು ಮೌಲ್ಯ(ನೊಂದಾಯಿತ ಮೌಲ್ಯಮಾಪಕರಿಂದ ಪಡೆದ ಮೌಲ್ಯಮಾಪನದ ಅಂದಾಜು)ವನ್ನು ಉಲ್ಲೇಖಿಸಬೇಕು. ಈ ಅಂಶ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ತಿಳಿಸಬೇಕು. ಈ ಎಲ್ಲ ವಸ್ತುಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರು ವೈಯಕ್ತಿಕವಾಗಿ ಪರಿಶೀಲಿಸಬೇಕು. ಅದರ ಅಂದಾಜು ಮೊತ್ತ ಹೊಲಿಕೆಯಾಗುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕು.
  • ವಶಪಡಿಸಿಕೊಳ್ಳುವುದು ಮತ್ತು ಬಿಡುಗಡೆ ಮಾಡುವ ಸಂದರ್ಭದಲ್ಲಿ ಛಾಯಾಚಿತ್ರಗಳನ್ನು ತೆಗೆದುಕೊಂಡು ಮಾಲೀಕರ ಸಹಿಯನ್ನು ಪಡೆದು ಈ ಸಂಬಂಧ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.
  • ವಶಪಡಿಸಿಕೊಂಡ ಆಸ್ತಿಗಳ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವುದು ಮತ್ತು ಆ ವಸ್ತುಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಂಗ್ರಹಿಸಬೇಕು ಜೊತೆಗೆ ಅದರ ಮೌಲ್ಯಕ್ಕೆ ಸಂಬಂಧಿಸಿದಂತೆ ಬಾಂಡ್/ಬ್ಯಾಂಕ್ ಗ್ಯಾರೆಂಟಿಗಳನ್ನು ಪಡೆದುಕೊಳ್ಳಬೇಕು.
  • ತನಿಖಾಧಿಕಾರಿಗಳು ಸೂಕ್ತ ಕಾರಣಗಳನ್ನು ನೀಡದೆ ವಶಪಡಿಸಿಕೊಂಡ ವಸ್ತುಗಳನ್ನು ಯಾವುದೇ ಕಾರಣಕ್ಕೂ ಉಳಿಸಿಕೊಳ್ಳಬಾರದು.
  • ವಶಪಡಿಸಿಕೊಂಡಿರುವ ವಸ್ತುಗಳನ್ನು ಸಂರಕ್ಷಿತವಾಗಿಡುವುದಕ್ಕೆ ಪೊಲೀಸರ ಬಳಿ ಅಗತ್ಯ ಸೌಲಭ್ಯವಿರುವ ಸಂಬಂಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸ್ಪಷ್ಟಪಡಿಸಿಕೊಳ್ಳಬೇಕು. ಆರೋಪ ಪಟ್ಟಿ ಸಲ್ಲಿಸಿದ ಸಂದರ್ಭದಲ್ಲಿ ಆ ವಸ್ತುಗಳ ಸ್ಥಿತಿಗತಿಗೆ ಸಂಬಂಧಿಸಿದಂತೆ ನ್ಯಾಯಾಲಯ ವಿವರಣೆ ಪಡೆದುಕೊಳ್ಳಬೇಕು.
  • ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಂದರ್ಭದಲ್ಲಿ ಎಲ್ಲ ಹಂತಗಳಲ್ಲಿ ಸರಿಯಾದ ರೀತಿಯಲ್ಲಿ ಸೀಲ್‌ಗಳನ್ನು ಹಾಕಿ ಭದ್ರಪಡಿಸಲಾಗಿದಿಯೇ ಎಂಬುದನ್ನು ಸ್ಪಷ್ಟ ಪಡಿಸಿಕೊಳ್ಳಬೇಕಾಗುತ್ತದೆ.
  • ಮಾದಕ ವಸ್ತುಗಳನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಮೋಹನ್ ಲಾಲ್ ವಿರುದ್ಧದ ಕೇಂದ್ರ ಸರ್ಕಾರ ಪ್ರಕರಣದ ನೀಡಿರುವ ಆದೇಶದಲ್ಲಿನ ನಿಯಮಗಳನ್ನು ಅನುಸರಿಸಿ ವಿಲೇವಾರಿ ಮಾಡಬೇಕು.
  • ವಶಪಡಿಸಿಕೊಂಡ ವಾಹನಗಳನ್ನು ವಿಲೇವಾರಿ ಮಾಡಲು ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಕರ್ನಾಟಕ ಮೋಟಾರು ವಾಹನ(ತಿದ್ದುಪಡಿ)ನಿಯಮಗಳು 2018ರ ನಿಯಮ 323 ಜಿ ಯಲ್ಲಿ ತಿಳಿಸಿರುವ ಕಾರ್ಯವಿಧಾನವನ್ನು ಅನುಸರಣೆ ಮಾಡಬೇಕು.
  • ವಿದ್ಯುನ್ಮಾನ ಮತ್ತು ಡಿಜಿಟಲ್ ವಸ್ತುಗಳನ್ನು ಸಂರಕ್ಷಣೆ ಮಾಡಲು ಅಗತ್ಯ ವಾತಾವರಣ ಇರುವ ಬಗ್ಗೆ ಸ್ಪಷ್ಟ ಪಡಿಸಿಕೊಳ್ಳಬೇಕು. ಮತ್ತು ಅವುಗಳಲ್ಲಿನ ದತ್ತಾಂಶ ಹಾಳಾಗದಂತೆ ನೋಡಿಕೊಳ್ಳಬೇಕು.
  • ಚಿನ್ನ, ಬೆಳ್ಳಿಯಂತಹ ಬೆಲೆ ಬಾಳುವ ಚಿನ್ನಾಭರಣಗಳು ಬೆರಳಚ್ಚು, ಗುರುತು ಸೇರಿದಂತೆ ಪರೀಕ್ಷೆ ಉದ್ದೇಶಕ್ಕಾಗಿ ತನಿಖಾಧಿಕಾರಿಗಳಿಗೆ ಅಗತ್ಯ ಇಲ್ಲದಿದ್ದಲ್ಲಿ ಅವುಗಳ ಛಾಯಾಚಿತ್ರಗಳು ಅಥವಾ ವಿಡಿಯೋಗ್ರಾಫ್‌ಗಳನ್ನು ತೆಗೆದುಕೊಂಡು, ವಸ್ತುಗಳು ಅರ್ಜಿದಾರರಿಗೆ ಹಿಂದಿರುಗಿಸಲು ಆದೇಶಿಸಬಹುದು.
  • ಸ್ಪೋಟಕಗಳು, ಕಲಬೆರೆಕೆ ಪೆಟ್ರೋಲಿಯಂ ಉತ್ಪನ್ನಗಳು, ಗ್ಯಾಸ್ ಸಿಲಿಂಡರ್‌ಗಳು ಇನ್ನಿತರೆ ವಸ್ತುಗಳ ಸುರಕ್ಷತೆ ಮತ್ತು ಅವುಗಳಿಂದ ಉಂಟಾಗಬಹುದಾದ ಸಂಭಾವನೀಯ ಅಪಘಾತಗಳ ಕುರಿತಂತೆ ಸೂಕ್ತ ಆದೇಶಗಳನ್ನು ಹೊರಡಿಸಬೇಕು.
  • ಶೀಘ್ರದಲ್ಲಿ ಹಾಳಾಗುವ ವಸ್ತುಗಳಿಗೆ ಸಂಬಂಧಿಸಿದಂತೆ ವಿಳಂಬ ಮಾಡದೆ ಹರಾಜು ಹಾಕುವುದು ಮತ್ತು ಹರಾಜಿನ ಮೊತ್ತ ಕ್ರಿಮಿನಲ್ ಅರ್ಜಿ ವಿಚಾರಣೆಗೆ ಒಳಪಟ್ಟು ಖಾತೆಯಲ್ಲಿ ಇಡುವಂತೆ ನಿರ್ದೇಶಿಸಿ ಆದೇಶ ಹೊರಡಿಸಬೇಕು.
  • ಅಗತ್ಯ ವಸ್ತುಗಳ ಕಾಯಿದೆ ಸೇರಿದಂತೆ ಇತರೆ ಕಾಯಿದೆಗಳ ಅಡಿಯಲ್ಲಿ ವಶಪಡಿಸಿಕೊಳ್ಳಲಾದ ವಸ್ತುಗಳಿಗೆ ಸಂಬಂಧಿಸಿದಂತೆ ಕಾಯಿದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಆದಷ್ಟು ಶೀಘ್ರದಲ್ಲಿ ಆದೇಶಗಳನ್ನು ಹೊರಡಿಸಬೇಕು.
  • ವಶಪಡಿಸಿಕೊಂಡ ನಗದು ಮತ್ತು ಹಣದ ನೋಟುಗಳನ್ನು ಛಾಯಾಚಿತ್ರ /ವಿಡಿಯೋಗ್ರಫಿ ಮತ್ತು ಅವುಗಳ ಕ್ರಮ ಸಂಖ್ಯೆಯನ್ನು ಮಹಜರಿನಲ್ಲಿ ಬರೆಯಬೇಕು. ತಕ್ಷಣ ಆರ್‌ಬಿಐ ಬ್ಯಾಂಕ್‌ಗೆ ಜಮೆ ಮಾಡಲು ಕ್ರಮ ಕೈಗೊಳ್ಳಬೇಕು. ಅಂತಿಮವಾಗಿ ಪ್ರಕರಣದಲ್ಲಿ ಮಾಲೀಕರಾದವರಿಗೆ ಹಿಂದಿರುಗಿಸಲು ಆದೇಶ ನೀಡಬೇಕು ಎಂಬ ಷರತ್ತುಗಳನ್ನು ವಿಧಿಸಿದೆ.

ಇದನ್ನೂ ಓದಿ: ಬಿಗ್ ಬಾಸ್​ಗೆ ಬಿಗ್​ ಶಾಕ್​​: ಪೊಲೀಸರಿಂದ ನೋಟಿಸ್​​ ಜಾರಿ; ರಾಮನಗರ ಎಸ್ಪಿ ಹೇಳಿದ್ದಿಷ್ಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.