ETV Bharat / state

ನಿವೃತ್ತ ನೌಕರನ ಪಿಂಚಣಿ ಸೌಲಭ್ಯ ತಡೆ ಹಿಡಿದಿದ್ದ ಹೆಸ್ಕಾಂಗೆ 1 ಲಕ್ಷ ದಂಡ ವಿಧಿಸಿದ ಹೈಕೋರ್ಟ್

ಹೆಸ್ಕಾಂನ ನಿವೃತ್ತ ಎಂಜಿನಿಯರ್​ ಮಕಾಂದಾರ್​ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. ದಂಡ ಸಹಿತ ನಿವೃತ್ತಿ ನಂತರ ಸಿಗುವ ಎಲ್ಲ ರೀತಿಯ ಸೌಲಭ್ಯಗಳನ್ನು ಶೇ.6 ರಷ್ಟು ಬಡ್ಡಿಯೊಂದಿಗೆ ಬಿಡುಗಡೆ ಮಾಡಬೇಕು ಎಂದು ಸೂಚಿಸಿದೆ.

High Court
ಹೈಕೋರ್ಟ್
author img

By ETV Bharat Karnataka Team

Published : Mar 16, 2024, 9:20 PM IST

ಬೆಂಗಳೂರು: ಯಾವುದೇ ಇಲಾಖೆವಾರು ತನಿಖೆ ಕೈಗೊಳ್ಳದೇ ನಿವೃತ್ತಿಯ ನಂತರದ ಸೌಲಭ್ಯಗಳನ್ನು ತಡೆ ಹಿಡಿದಿರುವ ಹುಬ್ಬಳ್ಳಿ ವಿದ್ಯುತ್​ ಸರಬರಾಜು ಕಂಪೆನಿ(ಹೆಸ್ಕಾಂ) ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಒಂದು ಲಕ್ಷ ರೂ ದಂಡ ವಿಧಿಸಿದೆ. ಹೆಸ್ಕಾಂನ ನಿವೃತ್ತ ಎಂಜಿನಿಯರ್​ ಮಕಾಂದಾರ್​ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ ದಂಡದ ಮೊತ್ತವನ್ನು ಅರ್ಜಿದಾರರಿಗೆ ಪಾವತಿ ಮಾಡಲು ಹೆಸ್ಕಾಂಗೆ ಸೂಚನೆ ನೀಡಿದೆ. ಅಲ್ಲದೇ ನಿವೃತ್ತಿ ನಂತರ ಲಭ್ಯವಾಗಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ಶೇ.6 ರಷ್ಟು ಬಡ್ಡಿಯೊಂದಿಗೆ ಬಿಡುಗಡೆ ಮಾಡಬೇಕು ಎಂದು ಪೀಠ ಸೂಚನೆ ನೀಡಿದೆ.

ಜತೆಗೆ, ಅರ್ಜಿದಾರರ ಹೆಸ್ಕಾಂ ಸಂಸ್ಥೆಗೆ ನೇಮಕಗೊಂಡಿದ್ದಾರೆ, ಪ್ರವರ್ತಕರಗಳನ್ನು ಹಿಂದಿರುಗಿಸದ ಆರೋಪ ಕುರಿತ ಯಾವುದೇ ಇಲಾಖಾವಾರು ತನಿಖೆ ಕೈಗೊಳ್ಳದೇ ದಂಡವನ್ನು ವಸೂಲಿ ಮಾಡಲಾಗಿದೆ. ಆದರೂ ನಿವೃತ್ತರಾದ ಬಳಿಕ ನಿವೃತ್ತಿ ಸೌಲಭ್ಯಗಳನ್ನು ತಡೆ ಹಿಡಿಯಲಾಗಿದೆ. ಉದ್ಯೋಗದಾತ ಸಂಸ್ಥೆಯು ಉದ್ಯೋಗಿಗಳ ಹಕ್ಕುಗಳ ಮೇಲೆ ನಡೆಸುವ ದಾಳಿಗೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಈ ರೀತಿಯಲ್ಲಿ ನಿವೃತ್ತ ಸೌಲಭ್ಯಗಳನ್ನು ತಡೆ ಹಿಡಿಯುವುದು ನೈಸರ್ಗಿಕ ನ್ಯಾಯದ ಉಲ್ಲಂಘನೆಯಾಗಿದೆ ಎಂದು ಪೀಠ ತಿಳಿಸಿದೆ.

ಜತೆಗೆ, ಅರ್ಜಿದಾರರ ವಿರುದ್ಧ ಯಾವುದೇ ರೀತಿಯ ಇಲಾಖೆವಾರು ವಿಚಾರಣೆ ನಡೆಸದೇ ಪಿಂಚಣಿ ಸೌಲಭ್ಯಗಳನ್ನು ತಡೆ ಹಿಡಿದಿರುವುದು ಸರಿಯಾದ ಕ್ರಮವಲ್ಲ ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ಹೆಸ್ಕಾಂನಲ್ಲಿ ಎಂಜಿನಿಯರ್​ ಆಗಿದ್ದ ಅರ್ಜಿದಾರರು ದುರಸ್ತಿಗೊಳಗಾದ ವಿದ್ಯುತ್​ ಪ್ರವರ್ತಕ(ಟ್ರಾನ್ಸ್​ ಫಾರ್ಮರ್​)ಗಳನ್ನು ಸಂಗ್ರಹಿಸಿ ಹಿಂದಿರುಗಿಸದಿರುವ ಆರೋಪ ಸಂಬಂಧ 86 ಲಕ್ಷ ರೂ.ನಿಮ್ಮಿಂದ ವಸೂಲಿ ಮಾಡಬೇಕಾಗಿದೆ ಎಂದು ತಿಳಿಸಿತು.

ಹೆಸ್ಕಾಂಗೆ ಹಲವು ಬಾರಿ ಮನವಿ ಸಲ್ಲಿಸಿದ ಬಳಿಕ ಶೇ.25 ರಷ್ಟು ಪಿಂಚಣಿ ಮತ್ತು ಶೇ.50 ರಷ್ಟು ಗ್ರಾಚ್ಯುಟಿಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ನಿವೃತ್ತಿ ವೇತನ ಪಿಂಚಣಿಯನ್ನು ತಡೆ ಹಿಡಿಯಲಾಗಿದೆ ಎಂದು ಹೆಸ್ಕಾಂ ತಿಳಿಸಿತು. ಹೈಕೋರ್ಟ್​ದಲ್ಲಿ ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು ತಮ್ಮ ವಿರುದ್ಧ ಯಾವುದೇ ರೀತಿಯ ಇಲಾಖೆವಾರು ತನಿಖೆ ಕೈಗೊಳ್ಳದೇ ದಂಡ ವಿಧಿಸಿದ್ದು, ವಸೂಲಿಗೆ ಮುಂದಾಗಿದ್ದಾರೆ ಎಂದು ವಾದಿಸಿದ್ದರು.

ಇದನ್ನೂ ಓದಿ:ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ಸೇವಾ ನಿಯಮದ ದೂರು ವಿಚಾರಣೆ ಮಾಡುವ ಅಧಿಕಾರವಿಲ್ಲ: ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.