ETV Bharat / state

ಜಿಂಕೆ ಬೇಟೆ ಪ್ರಕರಣ: 16 ವರ್ಷ ಕಳೆದರೂ ಪೂರ್ಣಗೊಳ್ಳದ ವಿಚಾರಣೆ, ಹೈಕೋರ್ಟ್ ಗರಂ - Deer Poaching Case - DEER POACHING CASE

ಜಿಂಕೆ ಬೇಟೆ ಪ್ರಕರಣದ ವಿಚಾರಣೆ 16 ವರ್ಷವಾದರೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಗುರುವಾರ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Sep 6, 2024, 8:10 AM IST

ಬೆಂಗಳೂರು: ಬಂಡೀಪುರ ಅರಣ್ಯದಲ್ಲಿ ಕೇರಳದ ಮೂವರು ಆರೋಪಿಗಳು ಭಾಗಿಯಾಗಿದ್ದ ಜಿಂಕೆ ಬೇಟೆ ಪ್ರಕರಣದ ವಿಚಾರಣೆ 16 ವರ್ಷವಾದರೂ ಪೂರ್ಣಗೊಳಿಸದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಮುಂದಿನ ಮೂರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು.

ಕೇರಳದ ಅಬ್ದುಲ್ ರೆಹಮಾನ್, ಮೊಹಮ್ಮದ್ ಕುಟ್ಟಿ, ಅಬ್ದುಲ್ ಮಜೀದ್ ಎಂಬವರು ಗುಂಡ್ಲುಪೇಟೆಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್​ಸಿ ನ್ಯಾಯಾಲಯದಲ್ಲಿನ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ತಿರಸ್ಕರಿಸಿತು. ಇದೇ ವೇಳೆ, ವಿಚಾರಣಾ ನ್ಯಾಯಾಲಯ ಮುಂದಿನ ಮೂರು ತಿಂಗಳಲ್ಲಿ ಪ್ರಕರಣ ವಿಚಾರಣೆ ಪೂರ್ಣಗೊಳಿಸಿ ಸೂಕ್ತ ಆದೇಶ ನೀಡಬೇಕು. ಅರ್ಜಿದಾರರು ವಿಚಾರಣೆಗೆ ಸಹಕರಿಸಬೇಕು ಎಂದು ಪೀಠ ತಿಳಿಸಿದೆ.

ಪ್ರಕರಣ 2008ರಲ್ಲಿ ನಡೆದಿದೆ. ನಾವೀಗ 2024ರಲ್ಲಿದ್ದೇವೆ. ಪ್ರಕರಣ ಇನ್ನೂ ವಿಚಾರಣಾ ಹಂತದಲ್ಲಿದೆ. ಅರ್ಜಿದಾರರು ವಿಚಾರಣೆಗೆ ಹಾಜರಾಗುತ್ತಿಲ್ಲ. ಅರ್ಜಿದಾರರು ವಿಚಾರಣೆಯಿಂದ ನುಣುಚಿಕೊಳ್ಳುತ್ತಿರುವುದರಿಂದ ಯಾವುದೇ ರಕ್ಷಣೆ ನೀಡಲಾಗದು ಎಂದು ಪೀಠ ತಿಳಿಸಿದೆ. ಅಲ್ಲದೆ, ಎರಡು ಕಡೆ ಪ್ರಕರಣ ದಾಖಲಾಗಿದೆ. ತೆಗೆದುಕೊಂಡು ಹೋದ ಮಾಂಸದ ತಿಂದಿದ್ದಾರಾ? ಜಿಂಕೆಯ ಮಾಂಸವೇ ಏಕೆ ಬೇಕಿತ್ತು? ಪ್ರಕರಣ ಯಾವ ಹಂತದಲ್ಲಿದೆ? ಎಂದು ಕೋರ್ಟ್ ಪ್ರಶ್ನಿಸಿತು.

ಜೊತೆಗೆ, 16 ವರ್ಷ ಸಮಯ ಏಕೆ ತೆಗೆದುಕೊಂಡಿದ್ದೀರಿ? ಇಷ್ಟು ದೀರ್ಘಾವಧಿ ಏಕೆ? ಒಂದು ತಿಂಗಳಲ್ಲೇ ಇತ್ಯರ್ಥ ಮಾಡಲು ಅಧೀನ ನ್ಯಾಯಾಲಯಕ್ಕೆ ಆದೇಶಿಸಲಾಗುವುದು. ಅರಣ್ಯ ಅಪರಾಧವನ್ನು ಇತ್ಯರ್ಥ ಮಾಡಲು 16 ವರ್ಷ ಏಕೆ ತೆಗೆದುಕೊಂಡಿರಿ? ಇದರಿಂದಾಗಿ ಆರೋಪಿಗಳು ಎದೆಯುಬ್ಬಿಸಿ ಓಡಾಡುತ್ತಾರೆ. ಯಾರನ್ನಾದರೂ ಶಿಕ್ಷೆಗೆ ಗುರಿಯಾಗುವಂತೆ ಮಾಡಬೇಕಾದರೆ, ಬೇಗ ಮಾಡಿ. 16 ವರ್ಷ ಒಂದು ಪ್ರಕರಣ ತಳ್ಳುತ್ತಾ ಕೂತರೆ ಹೇಗೆ? 2008ರಲ್ಲಿ ಜಿಂಕೆ ಕೊಂದಿರುವುದಕ್ಕೆ ಅರಣ್ಯ ಕಾಯಿದೆ ಅಡಿ ಪ್ರಕರಣ ದಾಖಲಿಸಿ 2024ರಲ್ಲಿ ಅದರ ವಿಚಾರಣೆ ಎಂದರೆ ಹೇಗೆ? ಅರ್ಜಿದಾರರು ನ್ಯಾಯಾಲಯದ ಮುಂದೆ ಬಂದಿಲ್ಲ ಎಂದು ಎಷ್ಟು ವರ್ಷ ಕಾಯ್ತೀರಿ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, "ಅರ್ಜಿದಾರರ ವಿರುದ್ಧ ಘೋಷಿತ ಅಪರಾಧಿ (ಪ್ರೊಕ್ಲಮೇಶನ್) ಎಂದು ಹೊರಡಿಸಲಾಗಿದೆ. ನ್ಯಾಯಾಲಯ ರಕ್ಷಣೆ ಒದಗಿಸಿದರೆ ವಿಚಾರಣೆಗೆ ಹಾಜರಾಗಲಾಗಲು ಸಿದ್ಧರಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಇದನ್ನೂ ಓದಿ: ರೇವ್ ಪಾರ್ಟಿ: ಫಾರ್ಮ್ ಹೌಸ್ ಮಾಲೀಕನ ವಿರುದ್ಧದ ಪ್ರಕರಣ ರದ್ದು - Rave Party Case

ಸರ್ಕಾರಿ ವಕೀಲರು, 2008ರಲ್ಲಿ ಅರ್ಜಿದಾರರು ಬಂಡೀಪುರ ಅರಣ್ಯದಲ್ಲಿ ಜಿಂಕೆ ಬೇಟೆಯಾಡಿ ಅದರ ಕಾಲು ಕೈ ಮಾತ್ರ ಇಲ್ಲೇ ಬಿಟ್ಟು, ಮಾಂಸ ಮಾತ್ರ ಕೊಂಡೊಯ್ದಿದ್ದಾರೆ. ಅಲ್ಲಿ ಕೇರಳದ ಸುಲ್ತಾನ್ ಬತ್ತೇರಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಅವರ ಮಾಹಿತಿ ಆಧರಿಸಿ ಆರೋಪಿಗಳನ್ನು ಘಟನೆ ನಡೆದ ಸ್ಥಳಕ್ಕೆ ಕರೆದೊಯ್ದಾಗ ಜಿಂಕೆಯ ಕಾಲು ಸಿಕ್ಕಿವೆ. ಆರೋಪ ನಿಗದಿಗೊಳಿಸಿ, ಸಾಕ್ಷಿ ದಾಖಲು ಹಂತದಲ್ಲಿ ಪ್ರಕರಣವಿದೆ. ಅವರು ನ್ಯಾಯಾಲಯದ ಮುಂದೆ ಹಾಜರಾಗುತ್ತಿರಲಿಲ್ಲ. ಪ್ರತೀ ಬಾರಿ ಸಮಯ ತೆಗೆದುಕೊಂಡಿದ್ದಾರೆ ಎಂದರು.

ಪ್ರಕರಣದ ಹಿನ್ನೆಲೆ: ಅರ್ಜಿದಾರರು 2008ರ ನವೆಂಬರ್ 30ರಂದು ಬಂಡೀಪುರದ ಅರಣ್ಯದಲ್ಲಿ ಜಿಂಕೆ ಕೊಂದು, ಕಾಲು ಕತ್ತರಿಸಿ ಬಿಸಾಡಿ ಆನಂತರ ಅದರ ದೇಹವನ್ನು ಸುಲ್ತಾನ್ ಬತ್ತೇರಿಗೆ ಕೊಂಡೊಯ್ದಿದ್ದರು. ಕರ್ನಾಟಕದ ವ್ಯಾಪ್ತಿಯಲ್ಲಿ ಜಿಂಕೆ ಕೊಂದ ಆರೋಪದ ಮೇಲೆ ಅರ್ಜಿದಾರರ ವಿರುದ್ಧ ಗುಂಡ್ಲುಪೇಟೆಯ ಮದ್ದೂರು ವಿಭಾಗದ ವಲಯ ಅರಣ್ಯಾಧಿಕಾರಿಯು ವನ್ಯಜೀವಿ ರಕ್ಷಣಾ ಕಾಯಿದೆಯ ವಿವಿಧ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಿದ್ದರು.

ಮೊದಲಿಗೆ ಕೇರಳದ ಸುಲ್ತಾನ್ ಬತ್ತೇರಿ ಪೊಲೀಸರು 35 ಕೆಜಿ ಮಾಂಸ, ಚರ್ಮವನ್ನು ವಶಪಡಿಸಿಕೊಂಡಿದ್ದರು. ಆ ನಂತರ ಪರವಾನಗಿ ಇಲ್ಲದ ಗನ್ ವಶಪಡಿಸಿಕೊಳ್ಳಲಾಗಿತ್ತು. ಹೀಗಾಗಿ, ವನ್ಯಜೀವಿ ರಕ್ಷಣಾ ಕಾಯಿದೆ ಅಡಿ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸುಲ್ತಾನ್ ಬತ್ತೇರಿಯಲ್ಲಿ ಪ್ರತ್ಯೇಕವಾಗಿ ಅರ್ಜಿದಾರರ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಅಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಾಮುಂಡೇಶ್ವರಿ ದೇವಾಲಯದ ಸ್ಥಿರ, ಚರ ಆಸ್ತಿ ಹಸ್ತಾಂತರಿಸದಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - Chamundeshwari Temple

ETV Bharat Logo

Copyright © 2025 Ushodaya Enterprises Pvt. Ltd., All Rights Reserved.