ETV Bharat / state

ಮಾಜಿ ಎಂಎಲ್​ಸಿ ಹೆಚ್.ಎಂ.ರಮೇಶ್‌ ಗೌಡ ವಿರುದ್ಧದ ಎಫ್ಐಆರ್​ಗೆ ಕಾರಣ ನೀಡಿ: ಹೈಕೋರ್ಟ್

ವಿಧಾನಪರಿಷತ್‌ ಮಾಜಿ ಸದಸ್ಯ ಹೆಚ್.ಎಂ.ರಮೇಶ್‌ ಗೌಡ ವಿರುದ್ಧ ಎಫ್ಐಆರ್ ದಾಖಲಿಸಲು ಕಾರಣ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.

high court
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Oct 23, 2024, 8:20 PM IST

ಬೆಂಗಳೂರು: ಉದ್ಯಮಿ ಹಾಗೂ ಜೆಡಿಎಸ್‌ ಮಾಜಿ ಮುಖಂಡ ವಿಜಯ್ ಟಾಟಾಗೆ ಬೆದರಿಕೆಯೊಡ್ಡಿದ ಆರೋಪ ಸಂಬಂಧ ವಿಧಾನಪರಿಷತ್‌ ಮಾಜಿ ಸದಸ್ಯ ಹೆಚ್.ಎಂ. ರಮೇಶ್‌ ಗೌಡ ವಿರುದ್ಧ ಮೊದಲಿಗೆ ಸಂಜ್ಞೆರಹಿತ ಅಪರಾಧ ವರದಿ (ಎನ್‌ಸಿಆರ್‌) ದಾಖಲಿಸಿ ಹಿಂಬರಹ ನೀಡಿದ ಬಳಿಕ, ಯಾಕೆ ಎಫ್‌ಐಆರ್‌ ದಾಖಲಿಸಲಾಗಿದೆ ಎಂಬುದಕ್ಕೆ ಬೆಂಗಳೂರಿನ ಅಮೃತಹಳ್ಳಿ ಠಾಣಾಧಿಕಾರಿ ವಿವರಣೆ ನೀಡಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.

ಅಮೃತಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿ ಜೆಡಿಎಸ್‌ ಮುಖಂಡ ಹಾಗೂ ವಿಧಾನಪರಿಷತ್‌ ಮಾಜಿ ಸದಸ್ಯ ಹೆಚ್.ಎಂ. ರಮೇಶ್‌ ಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ನಡೆಸಿತು.

ದುರುದ್ದೇಶಪೂರಿತ ಕ್ರಮ ಕೈಗೊಳ್ಳಬಾರದು: ''ಅಮೃತಹಳ್ಳಿ ಠಾಣಾಧಿಕಾರಿಯು ಕುಮಾರಸ್ವಾಮಿ ಅವರು 50 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ಮೊದಲಿಗೆ ಎನ್‌ಸಿಆರ್‌ ದಾಖಲಿಸಿ, ಆನಂತರ ಎಫ್‌ಐಆರ್‌ ಮಾಡಿರುವುದು ಏಕೆ ಎಂಬುದಕ್ಕೆ ಮುಂದಿನ ವಿಚಾರಣೆ ವೇಳೆಗೆ ವಿವರಣೆ ಸಲ್ಲಿಸಬೇಕು. ಇಲ್ಲಿ ಠಾಣಾಧಿಕಾರಿಯು ತಪ್ಪಾಗಿ ನಡೆದುಕೊಂಡಿರುವಂತಿದೆ. ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧ ಯಾವುದೇ ದುರುದ್ದೇಶಪೂರಿತ ಕ್ರಮ ಕೈಗೊಳ್ಳಬಾರದು'' ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿ, ವಿಚಾರಣೆಯನ್ನು ಅಕ್ಟೋಬರ್‌ 29ಕ್ಕೆ ಮುಂದೂಡಿತು.

ರಾಜ್ಯ ಸರ್ಕಾರ ವಿವರಣೆ ನೀಡಲಿ: ವಿಚಾರಣೆ ವೇಳೆ ಅರ್ಜಿದಾರ ರಮೇಶ್‌ಗೌಡ ಪ್ರತಿನಿಧಿಸಿದ್ದ ಹಿರಿಯ ವಕೀಲರು, ''ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರ ಮನೆಗೆ ಊಟಕ್ಕೆ ಹೋದಾಗ ದೂರುದಾರ ವಿಜಯ್‌ ಟಾಟಾ ಅವರನ್ನು ಉಪಚುನಾವಣೆಗೆ 50 ಕೋಟಿ ರೂಪಾಯಿ ಹಣ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. 23 ದಿನಗಳ ವಿಳಂಬದ ಬಳಿಕ ವಿಜಯ್‌ ಅವರು ಕುಮಾರಸ್ವಾಮಿ ಮತ್ತು ರಮೇಶ್‌ ಗೌಡ ವಿರುದ್ಧ ದೂರು ನೀಡಿದ್ದಾರೆ. ಮೊದಲಿಗೆ ಸಂಜ್ಞೆಯೇತರ ಅಪರಾಧ ವರದಿ (ಎನ್‌ಸಿಆರ್‌) ಎಂದು ಪೊಲೀಸರು ಹಿಂಬರಹ ನೀಡಿದ್ದಾರೆ. ಆನಂತರ ಸುಲಿಗೆ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಈ ನಡುವೆ ಏನಾಗಿದೆ ಎಂದು ರಾಜ್ಯ ಸರ್ಕಾರ ವಿವರಣೆ ನೀಡಬೇಕಿದೆ'' ಎಂದರು.

''ಅಲ್ಲದೆ, ನಮಗೂ ಬೆದರಿಕೆ ಹಾಕಲಾಗಿದೆ ಎಂದು ರಮೇಶ್‌ ಗೌಡ ಅವರು ನೀಡಿರುವ ದೂರನ್ನು ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಮೊದಲಿಗೆ ಹಿಂಬರಹ ನೀಡಿ ಆನಂತರ ಎಫ್‌ಐಆರ್‌ ದಾಖಲಿಸಿರುವುದರ ಬಗ್ಗೆ ಅಮೃತಹಳ್ಳಿ ಠಾಣಾಧಿಕಾರಿ ವಿವರಣೆ ನೀಡಬೇಕು. ಅಲ್ಲದೆ, ಪ್ರಕರಣ ರದ್ದುಗೊಳಿಸಬೇಕು'' ಎಂದು ಕೋರಿದರು.

ಅದಕ್ಕೆ ಪೀಠವು, ''ರಾಜ್ಯ ಸರ್ಕಾರವನ್ನು ಕುರಿತು ಒಂದೇ ದೂರಿನ ಮೇಲೆ ಹಿಂಬರಹ, ಆನಂತರ ಎಫ್‌ಐಆರ್‌ ದಾಖಲಿಸಿರುವುದು ಹೇಗೆ? ಇಲ್ಲಿ ಏನು ನಡೆಯುತ್ತಿದೆ? ಇದೇ ಸಮಸ್ಯೆ. ನಾವು ಇಲ್ಲಿ ಮಧ್ಯಪ್ರವೇಶ ಮಾಡಬೇಕೆ ಅಥವಾ ಬೇಡವೇ?'' ಎಂದು ಪ್ರಶ್ನಿಸಿತು.

ಅದಕ್ಕೆ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ. ಎನ್‌. ಜಗದೀಶ್‌, ''ಹಿಂಬರಹ ನೀಡಿರುವುದು ಸರಿಯಲ್ಲ ಎನಿಸುತ್ತದೆ. ಆದರೆ, ಬೇರೊಂದು ದೂರನ್ನು ಆಧರಿಸಿ ಸುಲಿಗೆ ಪ್ರಕರಣ ದಾಖಲಿಸಿರಬಹುದು'' ಎಂದು ತಿಳಿಸಿದರು.

ಇದನ್ನೂ ಓದಿ: ಅ.26ರಂದು ಬೆಂಗಳೂರಿನಲ್ಲಿ ಕಂಬಳ ನಡೆಸುತ್ತಿಲ್ಲ: ಹೈಕೋರ್ಟ್‌ಗೆ ಕಂಬಳ ಸಮಿತಿ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.