ETV Bharat / state

ಕೈ ಬೀಸಿ ಕರೆಯುತ್ತಿದೆ ಜನಾಕರ್ಷಣೆಯ 'ತಾಣ' ಪುತ್ತೂರು ನೆಲಪ್ಪಾಲ್‌ನ 'ಉದ್ಯಾನ' - Puttur Nelappal Park

author img

By ETV Bharat Karnataka Team

Published : Jun 26, 2024, 9:50 PM IST

ಪುತ್ತೂರು ನಗರದಲ್ಲಿರುವ ನೆಲಪ್ಪಾಲ್ ಉದ್ಯಾನ ಅತ್ಯಂತ ಸುಂದರ, ವ್ಯವಸ್ಥಿತ ಜಿಮ್ ಪಾರ್ಕ್​ ಎಂಬ ಕೀರ್ತಿ ಸಂಪಾದಿಸಿದೆ.

Nelappal Park
ನೆಲಪ್ಪಾಲ್‌ ಉದ್ಯಾನ (ETV Bharat)

ಜೀವಂಧರ ಜೈನ್ ಪ್ರತಿಕ್ರಿಯೆ (ETV Bharat)

ಪುತ್ತೂರು(ದಕ್ಷಿಣ ಕನ್ನಡ): ನಗರಸಭಾ ವ್ಯಾಪ್ತಿಯ ನೆಹರೂ ನಗರ ಸಮೀಪದ ನೆಲಪ್ಪಾಲು ಪರಿಸರದಲ್ಲಿ ಮೂರು ವರ್ಷಗಳ ಹಿಂದೆ ನಿರ್ಮಾಣಗೊಂಡ ಹೈಟೆಕ್ 'ನೆಲಪ್ಪಾಲ್ ಉದ್ಯಾನ' ಇಂದು ವಿಶೇಷ ಜನಾಕರ್ಷಣೆಯ ತಾಣವಾಗಿ ಗಮನ ಸೆಳೆಯುತ್ತಿದೆ. ಹಲವು ವಿಶೇಷತೆಗಳನ್ನು ಹೊಂದಿರುವ ಈ ಪಾರ್ಕ್​ಗೆ ದಿನಂಪ್ರತಿ ಮಕ್ಕಳ ಸಹಿತ 50ಕ್ಕೂ ಮಿಕ್ಕಿ ಹೆಚ್ಚಿನ ಮಂದಿ ಭೇಟಿ ನೀಡಿ ಖುಷಿಪಡುತ್ತಾರೆ.

2020-21ನೇ ಸಾಲಿನಲ್ಲಿ ಪುತ್ತೂರು ನಗರಸಭೆಯಿಂದ ಈ ಪಾರ್ಕ್ ನಿರ್ಮಾಣಗೊಂಡಿದೆ. ನಗರಸಭೆಯ ರೂ. 75 ಲಕ್ಷ ಹಾಗೂ ನಗರೋತ್ಥಾನದ ರೂ. 75 ಲಕ್ಷ ಸೇರಿ ಒಟ್ಟು ರೂ. 1.50 ಕೋಟಿ ವೆಚ್ಚದಲ್ಲಿ ಸುಂದರ ಪರಿಸರದಲ್ಲಿ ಇದನ್ನು ನಿರ್ಮಿಸಲಾಗಿದ್ದು, ಮಂಗಳೂರು ಬಳಿಕ ಗ್ರಾಮಾಂತರದ ಪುತ್ತೂರಿನಂತಹ ನಗರದಲ್ಲಿ ವಿಶೇಷಣಗಳ ಹೆಗ್ಗಳಿಕೆಯನ್ನು ಪಡೆದಿದೆ. ತಾಲೂಕು ಕೇಂದ್ರಗಳಲ್ಲಿರುವ ಅತ್ಯಂತ ಸುಂದರ, ವ್ಯವಸ್ಥಿತ ಜಿಮ್ ಪಾರ್ಕ್ ಎಂಬ ಕೀರ್ತಿಯನ್ನು ನಗರದ ನೆಲಪ್ಪಾಲ್ ಉದ್ಯಾನ ಸಂಪಾದಿಸಿದೆ.

ನೆಲಪ್ಪಾಲ್ ಪ್ರದೇಶ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಾ ಶ್ರೀಮಂತ ವಸತಿ ಬಡಾವಣೆಯಾಗಿ ಪರಿವರ್ತನೆಗೊಳ್ಳುತ್ತಿದೆ. ಈ ಪರಿಸರದ ಅವಶ್ಯಕತೆಗಾಗಿ ನಗರಸಭೆ ಸ್ಮಾರ್ಟ್ ಪಾರ್ಕ್ ನಿರ್ಮಿಸಿದೆ. ಪ್ರಕೃತಿ ಸೌಂದರ್ಯದ ಜತೆಯಲ್ಲೇ ಮಕ್ಕಳು ಮತ್ತು ಹಿರಿಯರಿಗೂ ದೇಹಾಭ್ಯಾಸ ಮಾಡಬಹುದಾದ ಜಿಮ್ ಸೌಕರ್ಯಗಳನ್ನೂ ಹೊಂದಿದೆ. ಸಾಂಸ್ಕೃತಿಕ ವೈವಿಧ್ಯ ಹಾಗೂ ಇತರ ಸಣ್ಣ ಕಾರ್ಯಕ್ರಮಗಳಿಗೆ ಅನುಕೂಲವಾದ ಬಯಲು ರಂಗಮಂದಿರವೂ ಇದೆ.

5 ಬಾರಿ ಪುರಸಭೆ ಮತ್ತು ನಗರಸಭೆ ಸದಸ್ಯರಾಗಿ, ನಗರಸಭೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಯ ಜನಪ್ರತಿನಿಧಿ ಜೀವಂಧರ ಜೈನ್ ಅವರು ನಗರಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ತಮ್ಮ ವಾರ್ಡ್​ಗೆ ಈ ಅಪೂರ್ವ ಉದ್ಯಾನ ನಿರ್ಮಿಸಿಕೊಟ್ಟಿದ್ದಾರೆ.

''40 ಸೆಂಟ್ಸ್ ಸ್ಥಳದಲ್ಲಿ ನಿರ್ಮಾಣಗೊಂಡ ಉದ್ಯಾನವಿದು. ನೆಲಪ್ಪಾಲ್, ನೆಹರೂನಗರ, ಪಡ್ಡಾಯೂರು ಮಾತ್ರವಲ್ಲದೆ ನಗರದ ಇತರ ಭಾಗದಿಂದಲೂ ಜನ ಬರುತ್ತಾರೆ. ಪಾರ್ಕ್​ಗೆ ಹೊಂದಿಕೊಂಡೇ ಮಕ್ಕಳ ಆಟ ಮತ್ತು ಸರ್ವರ ದೇಹಾಭ್ಯಾಸಕ್ಕೆ ಹೊಂದಿಕೆಯಾಗುವ ಅಂಕಣ ಮತ್ತು ಸುಂದರ ಬಯಲು ರಂಗ ಮಂದಿರ ನಿರ್ಮಿಸಲಾಗಿದೆ. ಪ್ರತೀ ದಿನ ಸಂಜೆ ನೂರಾರು ಮಕ್ಕಳು, ಪೋಷಕರು ಇಲ್ಲಿ ಸಮಯ ಕಳೆಯುತ್ತಾರೆ. ವ್ಯಾಯಾಮ ಮಾಡುತ್ತಾರೆ'' ಎಂದು ಉದ್ಯಾನದ ನಿರ್ವಹಣಾ ಕೆಲಸ ಮಾಡುವ ಕುಮಾರ್ ಹೇಳುತ್ತಾರೆ.

ಉದ್ಯಾನದ ಸನಿಹ ಒಂದು ಭಾಗದಲ್ಲಿ ಆಂಜನೇಯ ದೇವಸ್ಥಾನ, ಇನ್ನೊಂದು ಭಾಗದಲ್ಲಿ ನಾಗ ಸಾನಿಧ್ಯವಿದೆ. ಮತ್ತೊಂದು ಭಾಗದಲ್ಲಿ ರಕ್ತೇಶ್ವರಿ ಸಪರಿವಾರ ದೈವಗಳ ಸಾನಿಧ್ಯವಿದೆ. ಸುತ್ತಲೂ ನೂರಾರು ಮನೆಗಳ ವಸತಿ ಪ್ರದೇಶ. ಭವಿಷ್ಯದಲ್ಲಿ ನೂರಕ್ಕೂ ಅಧಿಕ ಮನೆಗಳು ನಿರ್ಮಾಣವಾಗುವ ಬಡಾವಣೆಗಳಿವೆ. ಇವೆಲ್ಲದರ ಮಧ್ಯೆ ನೆಲಪ್ಪಾಲ್ ಉದ್ಯಾನ ಕಂಗೊಳಿಸುತ್ತಿದೆ.

ಸುಂದರ ದ್ವಾರ, ಸುತ್ತಲೂ ಬೇಲಿ, ಮಧ್ಯದಲ್ಲಿ ಆಕರ್ಷಕ ಕಾರಂಜಿ, ಗಮನ ಸೆಳೆಯುವ ಬುದ್ಧನ ವಿಗ್ರಹ, ಹಸಿರಾಗಿ ಬೆಳೆದ ಹುಲ್ಲಿನ ಹಾಸು, ರಾತ್ರಿ ಮೆರುಗು ನೀಡುವ ವಿದ್ಯುತ್ ಬೆಳಕು, ಸೋಲಾರ್ ದೀಪಗಳ ಮೆರುಗು, ವೈವಿಧ್ಯಮಯ ಜಿಮ್ ಮತ್ತು ಆಟಿಕೆಗಳು, ಸಾಂಸ್ಕೃತಿಕ ಸಂಜೆ ನಡೆಸಬಹುದಾದ ಪುಟ್ಟ ಬಯಲು ರಂಗಮಂದಿರ ಮತ್ತು ಗ್ಯಾಲರಿಗಳು ಎಲ್ಲವೂ ಇಲ್ಲಿ ವಿಶೇಷವಾಗಿವೆ.

''ನಗರಸಭೆಯಲ್ಲಿ ಅಭಿವೃದ್ಧಿ ವಿಷಯಗಳಲ್ಲಿ ಶೇಕಡಾವಾರು ಅನುದಾನ ವಿಂಗಡಣೆ ಸರ್ಕಾರದ ನಿಯಮಾವಳಿ ಪ್ರಕಾರ ಕಡ್ಡಾಯ. ಅದರಂತೆ ಪಾರ್ಕ್ ಅಭಿವೃದ್ಧಿಗೆ ಮೀಸಲಿಟ್ಟ ನಿಧಿಯಲ್ಲಿ ನೆಲಪ್ಪಾಲ್ ಉದ್ಯಾನ ನಿರ್ಮಿಸಲಾಗಿದೆ. ಪ್ರಸ್ತುತ ಹನುಮಾನ್ ಫ್ರೆಂಡ್ಸ್​ನವರು ನಿರ್ವಹಣೆ ಮಾಡುತ್ತಿದ್ದು, ಭವಿಷ್ಯದಲ್ಲಿ ನಗರಸಭೆಯಿಂದಲೇ ನಿರ್ವಹಣೆ ಆಗುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ನಗರಸಭೆಗೆ ಮನವಿ ಮಾಡಿದ್ದೇವೆ'' ಎಂದು ನಗರಸಭೆ ನಿಕಟಪೂರ್ವ ಅಧ್ಯಕ್ಷರಾದ ಜೀವಂಧರ ಜೈನ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯ ಪರಿಸರ ಪ್ರೇಮಿಯಿಂದ ಮನೆಯಲ್ಲಿಯೇ ಮಿನಿ ಉದ್ಯಾನವನ - mini garden

ETV Bharat Logo

Copyright © 2024 Ushodaya Enterprises Pvt. Ltd., All Rights Reserved.