ETV Bharat / state

ಯಶ್ ದಯಾಳ್ ಎಂಬ ಆರ್​​ಸಿಬಿ ಪಾಲಿನ ಹೀರೋ: ಟೀಂ ಗೆಲ್ಲಿಸಿ ಟೀಕಾಕಾರರಿಗೆ ಬೌಲರ್​ ತಿರುಗೇಟು - Yash Dayal - YASH DAYAL

ಸಿಎಸ್​ಕೆ ಮಣಿಸಿ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟ ಆರ್​ಸಿಬಿ ಗೆಲುವಿಗೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಅದರಲ್ಲೂ ಕೊನೆಯ ಓವರ್​ ಎಸೆದ ಯಶ್​ ದಯಾಳ್​ ಅಭಿಮಾನಿಗಳ ಹಿರೋ ಆಗಿನ ಹೊರಹೊಮ್ಮಿದ್ದಾರೆ.

yash dayal
ಯಶ್ ದಯಾಳ್ (Pic: IANS)
author img

By ETV Bharat Karnataka Team

Published : May 19, 2024, 1:59 PM IST

ಬೆಂಗಳೂರು: ಐಪಿಎಲ್ 2024ರ 68ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಹಂತ ತಲುಪಿದೆ. ಮೇ 22ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ಎದುರಾಳಿಯಾಗಿ ರಾಜಸ್ಥಾನ್ ರಾಯಲ್ಸ್ ಅಥವಾ ಸನ್​ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

ಈ ಬಾರಿಯ ಐಪಿಎಲ್'ನಲ್ಲಿ ಸತತ ಆರು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಪಾತಾಳಕ್ಕಿಳಿದಿದ್ದ ಆರ್​ಸಿಬಿ ನಂತರ ಫೀನಿಕ್ಸ್​​ನಂತೆ ಮೈಕೊಡವಿ ನಿಂತು, ಸತತ ಆರು ಗೆಲುವಿನೊಂದಿಗೆ ಪ್ಲೇ ಆಫ್ ತಲುಪಿರುವುದು ಈಗ ಇತಿಹಾಸ. ಆರ್​ಸಿಬಿ ಎಂಬ ತಂಡವೇ ಹಾಗೆ, ಕಪ್ ಗೆಲ್ಲದಿದ್ದರೇನಂತೆ.. ಅದು ಊಹಿಸಲಾಗದ ದಾಖಲೆಗಳನ್ನು ನಿರ್ಮಿಸಿಯೇ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದೆ.

ಆರ್​ಸಿಬಿಯ ಈ ಯಶಸ್ಸಿನ ಹಿಂದೆ ಪ್ರತಿ ಆಟಗಾರರ ಶ್ರಮವಿದೆ. ಆದರೆ ನಿನ್ನೆಯ ಪಂದ್ಯದಲ್ಲಿ ಹೆಚ್ಚು ಗಮನ ಸೆಳೆದ ಆಟಗಾರ ಯಶ್ ದಯಾಳ್. ಪ್ಲೇ ಆಫ್ ಪ್ರವೇಶಿಸಲು ಕೊನೆಯ ಓವರ್​ನಲ್ಲಿ ಸಿಎಸ್​ಕೆ ತಂಡಕ್ಕೆ 17 ರನ್​ಗಳ ಅವಶ್ಯಕತೆಯಿತ್ತು. ಆಗ ಕ್ರೀಸ್​​ನಲ್ಲಿದ್ದದ್ದು ಮಹೇಂದ್ರ ಸಿಂಗ್ ಧೋನಿ ಎಂಬ ದೈತ್ಯ ಫಿನಿಷರ್ ಹಾಗೂ 2023ರ ಐಪಿಎಲ್ ಫೈನಲ್ ಪಂದ್ಯದ ಹೀರೋ ರವೀಂದ್ರ ಜಡೇಜಾ. ಯಶ್​ ಎಸೆದ ಮೊದಲ ಎಸೆತದಲ್ಲಿ ​ಮಹೇಂದ್ರ ಸಿಂಗ್ ಧೋನಿ ಭರ್ಜರಿ ಸಿಕ್ಸರ್ ಸಿಡಿಸಿದರು.

ನಂತರ ಸಿಎಸ್​ಕೆ ತಂಡದ ಗುರಿ 5 ಎಸೆತಗಳಲ್ಲಿ 11 ರನ್​ಗಳಿಗೆ ಇಳಿಯಿತು. ಆದರೆ 2ನೇ ಎಸೆತದಲ್ಲಿ ಧೋನಿಯ ವಿಕೆಟ್ ಪಡೆದ ಯಶ್​ ದಯಾಳ್ ನಂತರದ ನಾಲ್ಕು ಎಸೆತಗಳಲ್ಲಿ ನೀಡಿದ್ದು ಕೇವಲ 1 ರನ್ ಮಾತ್ರ. ಅದರಲ್ಲಿಯೂ ಕೊನೆಯ ಎರಡು ಎಸೆತಗಳಲ್ಲಿ ರವೀಂದ್ರ ಜಡೇಜಾರನ್ನು ಕಟ್ಟಿ ಹಾಕುವಲ್ಲಿ ಯಶ್ ದಯಾಳ್ ಅಕ್ಷರಶಃ ಯಶಸ್ವಿಯಾದರು. ಆ ಮೂಲಕ ಆರ್​ಸಿಬಿ ತಂಡ ಅಸಾಧಾರಣ ಸಾಧನೆಯೊಂದನ್ನು ಸಾಧಿಸಿ ತೋರಿಸಲು ಕಾರಣವಾದರು.

ಆದರೆ, 2023ರ ಐಪಿಎಲ್​ನಲ್ಲಿ ಯಶ್ ದಯಾಳ್ ಪರಿಸ್ಥಿತಿ ಭಿನ್ನವಾಗಿತ್ತು. ಕಳೆದ ಬಾರಿ ಅವರು ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದರು. ಟೂರ್ನಿಯ 13ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಿದ್ದ ಗುಜರಾತ್ ತಂಡಕ್ಕೆ ಒಂದರ್ಥದಲ್ಲಿ ಯಶ್ ನುಂಗಲಾರದ ತುತ್ತಾಗಿ ಪರಿಣಮಿಸಿದ್ದರು. ಅಂತಿಮ ಓವರ್ ಎಸೆದ ದಯಾಳ್​ಗೆ ರಿಂಕು ಸಿಂಗ್ ಸತತ 5 ಸಿಕ್ಸರ್ ಬಾರಿಸಿ ಕೊಲ್ಕತ್ತಾಗೆ ಗೆಲುವು ತಂದಿತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ಟೀಕೆ ಎದುರಿಸಿದ್ದ ಯಶ್ ದಯಾಳ್, ನೋವಿನಲ್ಲೇ ಅನಾರೋಗ್ಯದಿಂದ ಚಿಂತಿತರಾಗಿ ತೂಕ ಕಳೆದುಕೊಂಡಿದ್ದರು. ಮತ್ತೊಂದೆಡೆ, ಆ ಪಂದ್ಯದ ಹೀರೋ ರಿಂಕು ಸಿಂಗ್ ರಾಷ್ಟ್ರೀಯ ತಂಡದ ಪರ ಪಾದಾರ್ಪಣೆಗೈದರು.

ಚೇತರಿಸಿಕೊಂಡು ದೇಶಿ ಕ್ರಿಕೆಟ್ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಸಹ ಗುಜರಾತ್ ಟೈಟಾನ್ಸ್ ಯಶ್ ದಯಾಳ್​ರನ್ನು 2024ರ ಐಪಿಎಲ್​ಗೆ ತಂಡದಲ್ಲಿ ಉಳಿಸಿಕೊಳ್ಳಲಿಲ್ಲ. ಇತ್ತ ಆರ್​​ಸಿಬಿ‌ ತಂಡ ಅವರನ್ನ ಖರೀದಿಸಿದಾಗಲೂ ಸಹ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಓರ್ವ ಮಾಜಿ ಕ್ರಿಕೆಟಿಗರಂತೂ ಯಶ್ ಆರ್​​ಸಿಬಿ ಸೇರ್ಪಡೆ ಕುರಿತು ಕಾಮೆಂಟರಿ ಬಾಕ್ಸ್​ನಲ್ಲಿ‌ ಕುಳಿತೇ 'ಒಬ್ಬರ ಕಸ ಮತ್ತೊಬ್ಬರಿಗೆ ವಜ್ರ' ಎಂಬ ಮಾತನ್ನಾಡಿದ್ದರು. ಆದರೆ, ಅದೇ ಯಶ್ ಇಂದು ಆರ್​​ಸಿಬಿ ಪಾಲಿನ ಹೀರೋ ಆಗಿ ಮಿಂಚಿದ್ದಾರೆ. ಆರ್​ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟ ಯಶ್ ದಯಾಳ್ ಅವರ ಪ್ರದರ್ಶನಕ್ಕೆ ಸ್ವತಃ ರಿಂಕು ಸಿಂಗ್ ಮೆಚ್ಚಿ ಕೊಂಡಾಡಿದ್ದಾರೆ. ಆರ್​ಸಿಬಿ ಪರ ಈ ಬಾರಿ 13 ಪಂದ್ಯಗಳನ್ನಾಡಿರುವ ಯಶ್, 28.13ರ ಸರಾಸರಿಯಲ್ಲಿ 15 ವಿಕೆಟ್ ಪಡೆದು ಮಿಂಚಿದ್ದಾರೆ.

ಇದನ್ನೂ ಓದಿ: 'ದೇವರ ಪ್ಲಾನ್ ಬೇಬಿ'​: ಯಶ್​ ದಯಾಳ್ ಅದ್ಭುತ ಬೌಲಿಂಗ್​ಗೆ ರಿಂಕು ಸಿಂಗ್ ಸೆಲ್ಯೂಟ್​ - Rinku Singh Post on Yash Dayal

ETV Bharat Logo

Copyright © 2024 Ushodaya Enterprises Pvt. Ltd., All Rights Reserved.