ETV Bharat / state

ಕುಮಟಾ: ಉಳ್ಳೂರು ಮಠದ ಬಳಿಯೂ ಗುಡ್ಡ ಕುಸಿತ - ಡ್ರೋನ್​ ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ - Uttara Kannada Landslide - UTTARA KANNADA LANDSLIDE

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಗೆ ಬೆಟ್ಟ-ಗುಡ್ಡಗಳು ಕುಸಿಯುತ್ತಿವೆ. ಕುಮಟಾ-ಸಿದ್ದಾಪುರ ರಸ್ತೆಯ ಉಳ್ಳೂರು ಮಠ ಹಾಗೂ ಸೊಪ್ಪಿನ ಹೊಸಳ್ಳಿ ಸಮೀಪದ ಮೊರ್ಸೆ ಎಂಬಲ್ಲಿ ಬೃಹತ್ ಪ್ರಮಾಣದಲ್ಲಿ ಭೂ ಕುಸಿತವಾಗಿದೆ.

ಉಳ್ಳೂರು ಮಠದ ಬಳಿ ಗುಡ್ಡ ಕುಸಿತದ ಡ್ರೋನ್ ದೃಶ್ಯ
ಉಳ್ಳೂರು ಮಠದ ಬಳಿ ಕುಸಿದ ಗುಡ್ಡ (ETV Bharat)
author img

By ETV Bharat Karnataka Team

Published : Jul 21, 2024, 11:15 AM IST

Updated : Jul 21, 2024, 11:27 AM IST

ಉತ್ತರ ಕನ್ನಡ ಜಿಲ್ಲೆಯಲ್ಲಿ ರಣಮಳೆಗೆ ಗುಡ್ಡ ಕುಸಿತ (ETV Bharat)

ಕಾರವಾರ: ಕುಮಟಾ-ಸಿದ್ದಾಪುರ ರಸ್ತೆಯ ಉಳ್ಳೂರು ಮಠ ಹಾಗೂ ಸೊಪ್ಪಿನ ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊರ್ಸೆ ಎಂಬಲ್ಲಿಯೂ ಭಾರಿ ಪ್ರಮಾಣದ ಗುಡ್ಡ ಕುಸಿದಿದೆ. ಉಳ್ಳೂರು ಮಠದ ಬಳಿ ಗುಡ್ಡ ಕುಸಿದ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆತಂಕ ಹುಟ್ಟಿಸುವಂತಿದೆ.

ಉಳ್ಳೂರು ಮಠ ಸಮೀಪದ ಅರಣ್ಯ ಪ್ರದೇಶದಲ್ಲಿ ಸುಮಾರು ಒಂದು ಎಕರೆಯಷ್ಟು ಗುಡ್ಡ ಕುಸಿದಿದೆ. ಸುಮಾರು 50 ಮೀಟರ್ ದೂರ ಮರ, ಮಣ್ಣು ಜಾರಿ ರಸ್ತೆಗೆ ಬಿದ್ದಂತಿದೆ. ಎರಡು ದಿನದಿಂದ ಕಾರ್ಯಾಚರಣೆ ನಡೆಸಿ ರಸ್ತೆ ಮೇಲಿನ ಮಣ್ಣು ತೆರವುಗೊಳಿಸಲಾಗಿದೆ. ಇದೀಗ ಕುಮಟಾ-ಸಿದ್ದಾಪುರ ನಡುವೆ ವಾಹನ ಸಂಚಾರ ಪುನಾರಂಭವಾಗಿದೆ.

ಇದಲ್ಲದೇ, ಮೊರ್ಸೆ ಬಳಿಯೂ ಭೂ ಕುಸಿತವಾಗಿದೆ. ಬೃಹತ್ ಗಾತ್ರದ ಮರಗಳು ಬುಡಮೇಲಾಗಿ ಹಳ್ಳಗಳಲ್ಲಿ ತೇಲಿ ಬಂದಿದೆ. ಈ ಪ್ರದೇಶದಲ್ಲಿ ಮೂರು ಮನೆಗಳಿದ್ದು, ರಸ್ತೆ ಬಂದ್‌ ಆಗಿದೆ. ಆದರೆ, ಮನೆ ಹಾಗೂ ಜನರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ಘಟನಾ ಸ್ಥಳಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರ ಭೇಟಿ

Last Updated : Jul 21, 2024, 11:27 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.