ETV Bharat / state

ರಾಜ್ಯಪಾಲರು ಬಿಜೆಪಿ ಸಹಚರರಂತೆ ಕೆಲಸ ಮಾಡುತ್ತಿದ್ದಾರೆ: ಸಚಿವ ದಿನೇಶ್​ ಗುಂಡೂರಾವ್ - Dinesh Gundu Rao

ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಅವರು ರಾಜ್ಯಪಾಲರ ಕುರಿತು ಮಾತನಾಡುತ್ತಾ, ರಾಜ್ಯಪಾಲರು ಬಿಜೆಪಿ ಸಹಚರರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

dinesh-gundu-rao
ದಿನೇಶ್​ ಗುಂಡೂರಾವ್ (ETV Bharat)
author img

By ETV Bharat Karnataka Team

Published : Aug 23, 2024, 10:10 PM IST

ಹುಬ್ಬಳ್ಳಿ: ರಾಜ್ಯಪಾಲರ ನಡೆ ನೋವಿನ ಸಂಗತಿ. ಅವರು ಸಂವಿಧಾನದ ಮುಖ್ಯಸ್ಥರಾಗಿದ್ದಾರೆ. ಆದರೆ ಬಿಜೆಪಿ ಸಹಚರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಟೀಕಿಸಿದ್ದಾರೆ.

ನಗರದಲ್ಲಿಂದು ‌ಮಾತನಾಡಿದ ಅವರು, ಬಿಜೆಪಿಯವರು ಪಕ್ಷದ ಎಲ್ಲ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅವರು ಅಧಿಕಾರಕ್ಕಾಗಿ ಎಲ್ಲ ರೀತಿಯ ತಪ್ಪು ಮಾಡೋಕೆ ತಯಾರಿದ್ದಾರೆ. ಧರ್ಮ, ಸಿದ್ದಾಂತ, ದೇಶ ಭಕ್ತಿ ಎಲ್ಲವೂ ಸುಮ್ಮನೆ. ಅವರದ್ದು ಕಪಟ ನಡವಳಿಕೆ. ಜಾಸ್ತಿ ತೋರಿಸಿಕೊಳ್ಳೋರೇ ತಪ್ಪು ಮಾಡೋದು. ದೇಶಪ್ರೇಮ ಎಂಬುದು ಕಪಟತನ ಎಂದು ದೂರಿದರು.

ಐಟಿ, ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳು ಬೇರೆ ಪಕ್ಷದವರ ಮೇಲೇನೇ ದಾಳಿ ಮಾಡ್ತವೆ. ಖಾಸಗಿ ದೂರಿನ ಮೇಲೆ ರಾಜ್ಯಪಾಲರು ಅದೇ ದಿನ ಶೋಕಾಸ್ ನೋಟಿಸ್ ನೀಡ್ತಾರೆ. ಕುಮಾರಸ್ವಾಮಿ, ಜೊಲ್ಲೆ, ಜನಾರ್ದನ್ ರೆಡ್ಡಿ ಅವರ ಪೊಲೀಸ್ ವಿಚಾರಣೆ ನಡೆದು ಚಾರ್ಜ್‌ಶೀಟ್ ರೆಡಿ ಮಾಡಿದ್ರೂ ಹಾಗೇ ಬಿದ್ದಿದೆ ಎಂದರು.

ಚುನಾಯಿತ ಸರ್ಕಾರ ಅಸ್ತಿರಗೊಳಿಸುವುದು ಸಾಮಾನ್ಯ ವಿಚಾರನಾ?, ಗೌವರ್ನರ್ ಷಡ್ಯಂತ್ರ ಮಾಡಿದ್ರೆ ನಾವು ಸುಮ್ಮನೆ ಕುತ್ಕೋ ಬೇಕಾ?. ಕೇಂದ್ರ ಬಿಜೆಪಿ ಒತ್ತಡ ಹಾಕಿಸಿ ಈ ರೀತಿ ಮಾಡಿಸಿದ್ದಾರೆ‌. ರಾಜ್ಯಪಾಲರ ಮೇಲೆ ನಮಗೆ ನಂಬಿಕೆ ಇಲ್ಲ. ವಿಜಯೇಂದ್ರ, ಯಡಿಯೂರಪ್ಪ ಅವರ ಬಗ್ಗೇನೇ ಬಿಜೆಪಿಯವರು ಮಾತಾಡ್ತಿದ್ದಾರೆ. ಕಾಂಗ್ರೆಸ್​ನಲ್ಲಿ ನಾವು ಒಗ್ಗಟ್ಟಾಗಿದ್ದೇವೆ. ಅವರ ಮನೆಯೇ ಒಡೆದು ಹೋಗಿದೆ ಎಂದರು.

ಇದನ್ನೂ ಓದಿ: ಹೆಚ್ಚಿನ ವಿವರಣೆ ಕೇಳಿ 11 ಮಸೂದೆ ವಾಪಸು ಕಳುಹಿಸಿದ ರಾಜ್ಯಪಾಲರು! - Governor sent back 11 bills

ETV Bharat Logo

Copyright © 2024 Ushodaya Enterprises Pvt. Ltd., All Rights Reserved.