ETV Bharat / state

'ಸಾರ್ಕೋಮಾ ಕ್ಯಾನ್ಸರ್‌' ಜಾಗೃತಿ: ಎಚ್​ಸಿಜಿ ಕ್ಯಾನ್ಸರ್ ಸೆಂಟರ್ ವತಿಯಿಂದ 5ಕೆ ವಾಕಥಾನ್ - Sarcoma Cancer Walkathon - SARCOMA CANCER WALKATHON

ಸಾರ್ಕೋಮಾ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಧಾನಸೌಧದ ಸಮೀಪ ಎಚ್​ಸಿಜಿ ಕ್ಯಾನ್ಸರ್ ಸೆಂಟರ್ 5ಕೆ ವಾಕಥಾನ್​ ನಡೆಸಿತು.

Sarcoma Cancer Awareness
ಸಾರ್ಕೋಮಾ ಕ್ಯಾನ್ಸರ್‌ ಬಗ್ಗೆ ಜಾಗೃತಿ (ETV Bharat)
author img

By ETV Bharat Karnataka Team

Published : Aug 14, 2024, 4:07 PM IST

ಬೆಂಗಳೂರು: ಅಪರೂಪದ ಕ್ಯಾನ್ಸರ್‌ಗಳಲ್ಲಿ ಒಂದಾದ 'ಸಾರ್ಕೋಮಾ' ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ 'ಸಾರ್ಕೋಮಾ ಸ್ಟ್ರಾಂಗ್‌ ರೈಟ್‌ ಸ್ಟೆಪ್‌ ಫಸ್ಟ್‌ ಟೈಮ್‌' ಶೀರ್ಷಿಕೆಯಡಿ 5ಕೆ ವಾಕಥಾನ್ ನಡೆಸಿತು.

ಸೆಂಟ್‌ ಜೋಸೆಫ್‌ ಮೈದಾನದಿಂದ ಇಂದು ಬೆಳಗ್ಗೆ ಪ್ರಾರಂಭಗೊಂಡ ವಾಕಥಾನ್‌ ಕಬ್ಬನ್‌ಪಾರ್ಕ್‌, ವಿಧಾನಸೌಧದ ಸುತ್ತಮುತ್ತಲ ಪ್ರದೇಶದ ಮೂಲಕ ಹಾದುಹೋಯಿತು.

Sarcoma Cancer Awareness
ಎಚ್​ಸಿಜಿ ಕ್ಯಾನ್ಸರ್ ಸೆಂಟರ್ ವತಿಯಿಂದ 5ಕೆ ವಾಕಥಾನ್ (ETV Bharat)

ಸಾರ್ಕೋಮಾ ಕ್ಯಾನ್ಸರ್‌ನಿಂದ ಬದುಕುಳಿದ ಪ್ರತೀಕ್ಷಾ, ನೌಕಾಪಡೆಯ ಅಧಿಕಾರಿ ಅರ್ನಾಲ್ಡ್ ರೆಗೊ, ಎಚ್‌ಸಿಜಿ ಪ್ರಾದೇಶಿಕ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮನೀಶಾ ಕುಮಾರ್, ಆರ್ತ್ರೋಪೆಡಿಕ್ ಆಂಕೊಲಾಜಿ ಮುಖ್ಯಸ್ಥ ಡಾ.ಪ್ರಮೋದ್ ಎಸ್.ಚಿಂದರ್ ಹಾಗೂ ಕ್ಯಾನ್ಸರ್‌ನಿಂದ ಬದುಕುಳಿದ ರೋಗಿಗಳು, ಅವರ ಕುಟುಂಬಸ್ಥರು, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಸುಮಾರು 850 ಜನರು ಉತ್ಸಾಹದಿಂದ ವಾಕಥಾನ್‌ನಲ್ಲಿ ಪಾಲ್ಗೊಂಡಿದ್ದರು.

ಎಚ್‌ಸಿಜಿ ಪ್ರಾದೇಶಿಕ ಮುಖ್ಯ\ಕಾರ್ಯನಿರ್ವಹಣಾಧಿಕಾರಿ ಮನೀಶಾ ಕುಮಾರ್ ಪ್ರತಿಕ್ರಿಯಿಸಿ, "ಅಪರೂಪದ ಕ್ಯಾನ್ಸರ್‌ಗಳಲ್ಲಿ ಒಂದಾದ ಸಾರ್ಕೋಮಾ ಕ್ಯಾನ್ಸರ್‌ ಯಾವುದೇ ಗುಣಲಕ್ಷಣವಿಲ್ಲದೆ ಕಾಣಿಸಿಕೊಂಡು ಬಾಧಿಸುತ್ತದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯ. ಈ ಕ್ಯಾನ್ಸರ್‌ನಿಂದ ಬದುಕುಳಿದವರಲ್ಲಿ ಆತ್ಮಸ್ಥೈರ್ಯ ತುಂಬುವ ಹಾಗೂ ಕ್ಯಾನ್ಸರ್‌ ವಿರುದ್ಧ ಹೋರಾಡುವವರ ಜೊತೆ ನಾವಿದ್ದೇವೆ ಎಂಬ ಸಂದೇಶದೊಂದಿಗೆ ವಾಕಥಾನ್‌ ನಡೆಸಲಾಯಿತು" ಎಂದು ಹೇಳಿದರು.

ಇದನ್ನೂ ಓದಿ: ವಿಶ್ವ ಕ್ಯಾನ್ಸರ್ ದಿನ: ಬೆಂಗಳೂರಲ್ಲಿ ಬೃಹತ್ ವಾಕಥಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.