ETV Bharat / state

ತರಾತುರಿಯಲ್ಲಿ ಉದ್ಘಾಟನೆಗೊಂಡ ಹಾವೇರಿಯ ಜಿಪ್ಲಸ್ ಮನೆಗಳು: ಮೂಲ ಸೌಕರ್ಯಗಳಿಲ್ಲದೇ ಪರದಾಡುತ್ತಿರುವ ಕುಟುಂಬಗಳು - No Infrastructure in G Plus Homes - NO INFRASTRUCTURE IN G PLUS HOMES

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ತರಾತುರಿಯಲ್ಲಿ ಉದ್ಘಾಟನೆಗೊಂಡ ಜಿಪ್ಲಸ್​ ಮನೆಗಳಲ್ಲಿ ಅಧಿಕಾರಿಗಳ ಅನುಮತಿ ಪಡೆದು ವಾಸಿಸುತ್ತಿರುವ ಕುಟುಂಬಗಳು ಸರಿಯಾದ ಮೂಲ ಸೌಕರ್ಯಗಳಿಲ್ಲದೇ ಪರದಾಡುತ್ತಿವೆ.

G. Plus houses
ಜಿ.ಪ್ಲಸ್ ಮನೆಗಳು (ETV Bharat)
author img

By ETV Bharat Karnataka Team

Published : Jun 17, 2024, 9:18 AM IST

Updated : Jun 17, 2024, 1:34 PM IST

ತರಾತುರಿಯಲ್ಲಿ ಉದ್ಘಾಟನೆಗೊಂಡ ಹಾವೇರಿಯ ಜಿಪ್ಲಸ್ ಮನೆಗಳು: ಮೂಲ ಸೌಕರ್ಯಗಳಿಲ್ಲದೇ ಪರದಾಡುತ್ತಿರುವ ಕುಟುಂಬಗಳು (ETV Bharat)

ಹಾವೇರಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದ ವೇಳೆ ತರಾತುರಿಯಲ್ಲಿ ಉದ್ಘಾಟನೆಗೊಂಡ ಬಂಕಾಪುರ ಪಟ್ಟಣದ ಜಿ ಪ್ಲಸ್ ಮನೆಗಳಲ್ಲಿ ವಿದ್ಯುತ್, ನೀರು ಮತ್ತು ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿ ವಾಸಿಸುತ್ತಿರುವ ಕುಟುಂಬಗಳು ಪರದಾಡುತ್ತಿವೆ. ಬಂಕಾಪುರ ಪಟ್ಟಣದಿಂದ ತಮ್ಮ ಮನೆಗಳಿಗೆ ನೀರು ತಂದು ಜೀವನ ಸಾಗಿಸುತ್ತಿವೆ. ಇನ್ನು ಬೀದಿ ದೀಪದ ಬೆಳಕಿನಲ್ಲಿ ಇವರ ರಾತ್ರಿಗಳು ಕಳೆಯುತ್ತಿವೆ. ಇತ್ತ ಶೌಚಾಲಯವಿಲ್ಲದೇ ನಿತ್ಯ ಬಹಿರ್ದೆಸೆಗೆ ಬಯಲಿಗೆ ಹೋಗುವುದು ಅನಿವಾರ್ಯವಾಗಿದೆ.

ಶಿಗ್ಗಾಂವಿ ತಾಲೂಕು ಬಂಕಾಪುರ ಪಟ್ಟಣದಲ್ಲಿ ನೂರಾರು ಬಡವರು ಸೂರಿಲ್ಲದ ನಿರಾಶ್ರಿತರಾಗಿದ್ದರು. ಚಳಿ, ಮಳೆಗಾಲ, ಬಿಸಿಲು ಎನ್ನದೇ ಗುಡಿಸಲು ಜೋಪಡಿಗಳಲ್ಲಿ ವಾಸವಾಗಿದ್ದರು. ಬಡವರ ಈ ಸ್ಥಿತಿ ನೋಡಿ, ಸರ್ಕಾರ ಸ್ವಂತ ಮನೆ ಮಾಡಿಸುವ ಯೋಜನೆಗೆ ಮುಂದಾಗಿತ್ತು. ಪುರಸಭೆಯ ಆಶ್ರಯ ಯೋಜನೆಯಲ್ಲಿ ಜಿ ಪ್ಲಸ್ ವನ್ ಯೋಜನೆಯಲ್ಲಿ ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡಲು ಪುರಸಭೆ ಮುಂದಾಗಿತ್ತು. ನಿರಾಶ್ರಿತರಿಂದ ಪುರಸಭೆ ನಲವತ್ತು ಸಾವಿರ ರೂಪಾಯಿ ವಂತಿಗೆ ಪಡೆದು ಜಿ ಪ್ಲಸ್ ಮನೆಗಳನ್ನು ನಿರ್ಮಾಣ ಮಾಡಿತ್ತು.

ನಗರದ ಹೊರವಲಯದ ಶಾಲೆಯ ಹತ್ತಿರ ಸುಮಾರು ಮುನ್ನೂರು ಮನೆಗಳನ್ನು ಅತ್ಯಂತ ಚುರುಕಾಗಿ ನಿರ್ಮಾಣ ಮಾಡಲಾಗಿತ್ತು. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಮುತುವರ್ಜಿಯಿಂದ ಮನೆಗಳು ಸಹ ನಿರ್ಮಾಣಗೊಂಡವು. ಆದರೆ, ತರಾತುರಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದ ವೇಳೆ ಮುನ್ನೂರು ಮನೆಗಳ ಸಂಕೀರ್ಣಗಳನ್ನು ಉದ್ಘಾಟನೆ ಮಾಡಲಾಯಿತು. ಆದರೆ, ತರಾತುರಿಯಲ್ಲಿ ಉದ್ಘಾಟನೆಯಾದ ಕಾರಣ ಮನೆಗಳಿಗೆ ವಿದ್ಯುತ್, ನೀರು ಮತ್ತು ಶೌಚಾಲಯಗಳ ವ್ಯವಸ್ಥೆ ಪೂರ್ಣಗೊಂಡಿಲ್ಲ. ಹಾಗಾಗಿ ಅಧಿಕೃತವಾಗಿ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಿಲ್ಲ.

ಆದರೆ, ಕೆಲವು ಬಡವರು ಬಾಡಿಗೆ ಮನೆಯಲ್ಲಿ ಬಾಡಿಗೆ ಕಟ್ಟಲಾಗದೇ ಜಿ.ಪ್ಲಸ್ ಮನೆಗಳಲ್ಲಿ ಬಂದು ವಾಸಿಸಲಾರಂಭಿಸಿದ್ದಾರೆ. ಇವರಿಗೆ ವಿದ್ಯುತ್​ ಶೌಚಾಲಯ ಸಮಸ್ಯೆ ಮಾತ್ರವಲ್ಲದೇ ಬಳಕೆಗೆ, ಕುಡಿಯಲು ನೀರು ಕೂಡ ದೂರದಿಂದ ತಂದು ಜೀವನ ನಡೆಸುವ ಪರಿಸ್ಥಿತಿ ಇದೆ. ವಿದ್ಯುತ್ ಇಲ್ಲದೇ ಬದುಕು ಸಾಗಿಸುವುದು ಕಷ್ಟವಾಗಿದೆ ಎನ್ನುತ್ತವೆ ಈ ಕುಟುಂಬಗಳು.

"ಮೊಬೈಲ್ ಚಾರ್ಜಿಂಗ್ ಸೇರಿದಂತೆ ಹಲವು ಅವಶ್ಯಕ ಬಳಕೆಗೆ ಪಟ್ಟಣದಲ್ಲಿರುವ ಮನೆಗಳ ಸಹಾಯ ಪಡೆಯುತ್ತಿದ್ದೇವೆ. ಬಯಲು ಬಹಿರ್ದೆಸೆಯ ಸಮಸ್ಯೆಯಂತೂ ಹೇಳತೀರದಾಗಿದೆ. ಅಕ್ಕಪಕ್ಕದ ಜಮೀನುಗಳಿಗೆ ಹೋದರೆ ಬಯ್ಯುತ್ತಿದ್ದಾರೆ. ಪುರಸಭೆಗೆ ನಲವತ್ತು ಸಾವಿರ ಕೊಟ್ಟು ಹಲವು ವರ್ಷಗಳ ನಂತರ ಮನೆಗಳು ನಿರ್ಮಾಣವಾಗಿವೆ. ಮನೆಗಳು ಇನ್ನೇನು ನಮಗೆ ಹಸ್ತಾಂತರ ಆಗುತ್ತವೆ ಎಂಬ ನಿರೀಕ್ಷೆಯಲ್ಲಿದ್ದೆವು. ಇಷ್ಟು ವರ್ಷಗಳಾದರೂ ಮನೆಗಳು ನಮಗೆ ಹಸ್ತಾಂತರವಾಗಿಲ್ಲ. ಅಲ್ಲದೇ ಬಾಡಿಗೆ ಮನೆಯಲ್ಲಿದ್ದು, ಬಾಡಿಗೆ ಕಟ್ಟಲಾಗುತ್ತಿಲ್ಲ" ಎಂದು ಅಳಲು ತೋಡಿಕೊಂಡರು.

"ಬಾಡಿಗೆ ಕಟ್ಟಲಾಗದೇ ಹಸ್ತಾಂತರವಾಗದ ಮನೆಗಳಲ್ಲಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡು ವಾಸಿಸುತ್ತಿದ್ದೇವೆ. ಆದರೆ ಇಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಇವತ್ತು ಆಗುತ್ತೆ, ನಾಳೆಯಾಗುತ್ತೆ ಎಂದು ತಿಂಗಳುಗಳು ಕಳೆದರೂ ನಮಗೆ ವಿದ್ಯುತ್ ಮತ್ತು ನೀರು ಪೂರೈಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ" ಎಂದು ಈ ಕುಟುಂಬಗಳು ಬೇಸರ ವ್ಯಕ್ತಪಡಿಸುತ್ತಿವೆ.

"ಈ ಕುರಿತಂತೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಮಳೆಗಾಲ ಶುರುವಾಗಿದೆ. ಬೇರೆ ಕಡೆ ಇರುವುದು ಕಷ್ಟಕರವಾಗಿದೆ. ಹೀಗಾಗಿ ಜೋಪಡಿ ಮತ್ತು ಗುಡಿಸಲುಗಳಲ್ಲಿರುವ ಬಡ ಫಲಾನುಭವಿಗಳು ಈ ಜಿ.ಪ್ಲಸ್ ವನ್ ಮನೆಗಳಿಗೆ ಬರಲಾರಂಭಿಸಿದ್ದಾರೆ. ಮಳೆಗಾಲದಲ್ಲಿ ತಗ್ಗಿನಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತದೆ. ಸರ್ಕಾರ ಈ ಕೂಡಲೇ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು" ಎಂದು ಇಲ್ಲಿಯ ಕುಟುಂಬಗಳು ಮನವಿ ಮಾಡಿವೆ.

ಇದನ್ನೂ ಓದಿ: ಮೂಲಸೌಕರ್ಯ ಕಲ್ಪಿಸದ ಖಾಸಗಿ ಲೇಔಟ್​ಗಳ ಡೆವಲಪರ್​ಗಳಿಗೆ ನೋಟಿಸ್ ನೀಡಲು ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚನೆ - DCM DK Sivakumar

Last Updated : Jun 17, 2024, 1:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.