ಕಲಬುರಗಿ: ಜೈ ಭಾರತ್ ಮಾತಾ ಸೇವಾ ಸಮಿತಿಯ ಸಂಸ್ಥಾಪಕ ಹಾಗೂ ಪ್ರಭಾವಿ ಸ್ವಾಮೀಜಿಗಳಾದ ನಿರಗುಡಿಯ ಹವಾ ಮಲ್ಲಿನಾಥ ಮುತ್ಯಾಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕಲಬುರಗಿ ಎರಡನೇ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಕಳೆದ 2018 ರಲ್ಲಿ ಕಲಬುರಗಿ ನಗರದ ಎಮ್ ಬಿ ನಗರ ಪೊಲೀಸ್ ಠಾಣೆಯಲ್ಲಿ ಹವಾ ಮಲ್ಲಿನಾಥ ಮುತ್ಯಾ ಸೋಧರ ಸಂಬಂಧಿಯಾದ ಪ್ರಕಾಶ ಎಂಬುವರ ಮೇಲೆ ಮಹಿಳೆಯೊಬ್ಬರು ಅಟ್ರಾಸಿಟಿ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿದ್ರು, ಇದೇ ಪ್ರಕರಣದಲ್ಲಿ ಹವಾ ಮಲ್ಲಿನಾಥ ಮುತ್ಯಾ ವಿರುದ್ಧ ಕೂಡಾ ಕುಮ್ಮಕ್ಕು ನೀಡಿದ ಆರೋಪದ ಹಿನ್ನೆಲೆ 498/A, 506,109, 34 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದ್ದರೂ ಹವಾ ಮಲ್ಲಿನಾಥ ಮುತ್ಯಾ ಹಾಜರಾಗಿರಲಿಲ್ಲ. ವಿಚಾರಣೆಗಾಗಿ ಹಾಜರಾಗದ ಹಿನ್ನೆಲೆ ನ್ಯಾಯಾಲಯ ಬಾಡಿ ವಾರೆಂಟ್ ಜಾರಿ ಮಾಡಿತ್ತು. ವಾರಂಟ್ ಜಾರಿ ಹಿನ್ನೆಲೆ ಸೋಮವಾರ ನ್ಯಾಯಾಲಯದ ಮುಂದೆ ಹವಾ ಮಲ್ಲಿನಾಥ್ ಮುತ್ಯಾ ಹಾಜರಾಗಿದ್ದರು. ಈ ವೇಳೆ ಜಾಮೀನು ನೀಡುವಂತೆ ಮಲ್ಲಿನಾಥ ಮುತ್ಯಾ ಪರ ವಕೀಲರು ಮನವಿ ಮಾಡಿದರು. ಆದರೆ ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿ, ಮಾರ್ಚ್ 2 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಆಕ್ಷೇಪಾರ್ಹ ಹೇಳಿಕೆಗೆ ಬೇಷರತ್ ಕ್ಷಮೆ: ವಕೀಲರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಹಿಂಪಡೆದ ಹೈಕೋರ್ಟ್