ಹಾಸನ: "ಹಾಸನ ನಗರಸಭೆಯನ್ನು ಇಂದಿನಿಂದ ಮಹಾನಗರವನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ" ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು. ಇಂದು ಹಾಸನಾಂಬೆಯ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಹಾಸನ ನಗರಸಭೆಯನ್ನು ಮಹಾನಗರವನ್ನಾಗಿ ಮಾಡುವುದಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಹಾಗಾಗಿ ಮೇಲ್ದರ್ಜೆಗೇರಿಸಲಾಗಿದೆ" ಎಂದು ತಿಳಿಸಿದರು.
"ಹಾಸನಾಂಬೆ ದೇವಿ, ಗಣಪತಿಯ ದರ್ಶನ ಪಡೆದು ಮುಂಬರುವ ವರ್ಷಗಳಲ್ಲಿ ಒಳ್ಳೆಯ ಮಳೆ, ಬೆಳೆ ಆಗಲಿ. ರೈತರು ಸುಭಿಕ್ಷವಾಗಿರಲಿ. ಎಲ್ಲ ಜಲಾಶಯಗಳು ಕೂಡ ತುಂಬಿವೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಜನರಿಗೆ ಒಳ್ಳೆಯದಾದರೇ ನಮಗೂ ಒಳ್ಳೆಯದಾಗುತ್ತದೆ. ನಾವುಗಳೆಲ್ಲ ಪರಸ್ಪರ ಪ್ರೀತಿಸಬೇಕೇ ಹೊರತು ಯಾವ ಕಾರಣಕ್ಕೂ ದ್ವೇಷಿಸಬಾರದು. ದ್ವೇಷವನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಪಟ್ಟಭದ್ರ ಹಿತಾಸಕ್ತಿಗಳು ದ್ವೇಷವನ್ನು ಬೆಳೆಸುವ ಕೆಲಸ ಮಾಡಿದರೆ ಅವರಿಗೆ ತಕ್ಕ ಶಾಸ್ತಿಯಾಗಲಿ" ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.
ಸಂಸದ ಶ್ರೇಯಸ್ ಪಟೇಲ್, ಸಚಿವ ಕೆ.ಎನ್.ರಾಜಣ್ಣ, ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಸಚಿವ ರಾಮಲಿಂಗರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಪರಿಶಿಷ್ಟ ಜಾತಿ ಒಳಮೀಸಲಾತಿ: ದತ್ತಾಂಶ ಪರಿಗಣನೆ ಪರಿಶೀಲನೆಗೆ ಏಕಸದಸ್ಯ ಆಯೋಗ ರಚಿಸಲು ಸಂಪುಟ ತೀರ್ಮಾನ