ETV Bharat / state

'ಪ್ರಜ್ವಲ್​ ಎಲ್ಲಿದ್ದರೂ ಒಂದೆರಡು ದಿನಗಳಲ್ಲಿ ದೇಶಕ್ಕೆ ವಾಪಸ್ ಬಂದು ತನಿಖೆಗೆ ಸಹಕಾರ ಕೊಡಿ': ಹೆಚ್​ಡಿಕೆ ಮನವಿ - h d kumaraswamy

ದೇಶಕ್ಕೆ ವಾಪಸ್ ಬಂದು ತನಿಖೆಗೆ ಸಹಕಾರ ಕೊಡಬೇಕು ಎಂದು ಪ್ರಜ್ವಲ್​ ರೇವಣ್ಣಗೆ ಕೈ ಜೋಡಿಸಿ ಮನವಿ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಹೆಚ್​.ಡಿ. ಕುಮಾರಸ್ವಾಮಿ
ಹೆಚ್​.ಡಿ. ಕುಮಾರಸ್ವಾಮಿ (ETV Bharat)
author img

By ETV Bharat Karnataka Team

Published : May 20, 2024, 6:22 PM IST

ಬೆಂಗಳೂರು: ದೇವೇಗೌಡರು ತಮ್ಮ ಇಡೀ ರಾಜಕೀಯ ಬದುಕನ್ನು ಪ್ರಜ್ವಲ್​ ಬೆಳೆಯಬೇಕು ಎಂದು ಧಾರೆ ಎರೆದಿದ್ದಾರೆ. ಪ್ರಜ್ವಲ್ ನೀನು ಎಲ್ಲೇ ಇದ್ದರೂ ಮುಂದಿನ 24 ಅಥವಾ 48 ಗಂಟೆಯೊಳಗೆ ದೇಶಕ್ಕೆ ವಾಪಸ್​ ಬರುವ ಮೂಲಕ ಪಕ್ಷದ ಕಾರ್ಯಕರ್ತರಿಗೆ ಮತ್ತು ದೇವೇಗೌಡರಿಗೆ ಗೌರವ ತಂದುಕೊಡಪ್ಪ ಎಂದು ನಾನು ಮಾಧ್ಯಮದವರ ಮೂಲಕ ಮನವಿ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಅವರು, ಏನಾಗುತ್ತದೆ, ಯಾಕೆ ಹೆದರ ಬೇಕು. ಈ ನೆಲದ ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ನನ್ನ ಕಾರ್ಯಕರ್ತರು ಪಕ್ಷವನ್ನು ಉಳಿಸಿ ಬೆಳೆಸಿದ್ದಾರೆ. ಅವರ ದುಡಿಮೆಯಿಂದ ನಾವು ನಿಮ್ಮ ಮುಂದೆ ಕೂತು ಮಾತನಾಡುತ್ತಿದ್ದೇವೆ. ಈ ನಾಡಿನ ಲಕ್ಷಾಂತರ ಜನ ನಮ್ಮ ಪಕ್ಷಕ್ಕೆ ಮತ ಕೊಟ್ಟಿದ್ದಾರೆ. ಅವರ ಆಶೀರ್ವಾದದಿಂದ ಇಲ್ಲಿಯವರೆಗೆ ಬೆಳೆದಿದ್ದೇವೆ. ಎಷ್ಟು ದಿನ ಹೀಗೆ ಹೊರಗೆ ಇರಬೇಕು?. ದೇಶಕ್ಕೆ ವಾಪಸ್ ಬಂದು ತನಿಖೆಗೆ ಸಹಕಾರ ಕೊಡಬೇಕು ಎಂದು ಪ್ರಜ್ವಲ್​ ರೇವಣ್ಣಗೆ ಕೈ ಜೋಡಿಸಿ ಮಾಧ್ಯಮಗಳ ಮೂಲಕ ಮನವಿ ಮಾಡುತ್ತೇನೆ ಎಂದರು.

ಎಷ್ಟು ದಿನ ಕಳ್ಳ ಪೊಲೀಸ್ ಆಟ. ಅವಶ್ಯಕತೆ ಇದೆಯಾ?. ನಾನು ನನ್ನ ತಂದೆಯವರ ಮೂಲಕ ಮನವಿ ಮಾಡಿಸಬೇಕು ಅಂದುಕೊಂಡಿದ್ದೆ, ಆದರೆ ತಡೆಯಲಾರದೇ ನಾನೇ ಮಾಧ್ಯಮಗಳ ಮುಂದೆ ಮನವಿ ಮಾಡುತ್ತಿದ್ದೇನೆ. ರೇವಣ್ಣ ಬೇಲ್ ಮೇಲೆ ಹೊರ ಬಂದ ಮೇಲೆ ಎರಡು ಸಲ‌ ಭೇಟಿ ಮಾಡಿದ್ದೀನಿ. ನಾನು ರೇವಣ್ಣಗೂ ಹೇಳಿದ್ದೀನಿ, ಪ್ರಜ್ವಲ್ ಎಲ್ಲೇ ಇದ್ದರೂ ಕರೆಸು ಅಂತ. ನಮ್ಮ ಫೋನ್​ ಟಾಪಿಂಗ್ ಆಗ್ತಿದೆ. ಈ ಘಟನೆಯಿಂದ ನಮ್ಮ ತಂದೆ ರಾಜ್ಯಸಭೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಡೋಕೆ ಮುಂದಾಗಿದ್ದರು. ನಾನೇ ಬೇಡ ಅಂತ ಹೇಳಿ ತಡೆದಿದ್ದೇನೆ. ಈ‌ ಘಟನೆಯಿಂದ ನಮ್ಮ ತಂದೆ ತುಂಬಾ ನೊಂದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಪೆನ್​ಡ್ರೈವ್ ಪ್ರಕರಣದಿಂದ ಮನನೊಂದ ನನ್ನ ಸಹೋದರಿಯರಿಗೆ ಕ್ಷಮೆ ಕೇಳುತ್ತೇನೆ: ಕುಮಾರಸ್ವಾಮಿ - h d kumaraswamy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.