ETV Bharat / state

ದಿಂಗಾಲೇಶ್ವರ ಸ್ವಾಮೀಜಿ ರಾಜಕೀಯಕ್ಕೆ ಬರುವುದು ತಪ್ಪೇನಿಲ್ಲ, ಆದ್ರೆ ಈಗ ಸಮಯ ಸರಿ ಇಲ್ಲ: ಗುಣಧರನಂದಿ ಮಹಾರಾಜ - Lok Sabha Election 2024 - LOK SABHA ELECTION 2024

ದಿಂಗಾಲೇಶ್ವರ ಸ್ವಾಮೀಜಿ ದೊಡ್ಡ ಧರ್ಮಗುರುಗಳು. ಸಮಾಜಕ್ಕೆ ಅನ್ಯಾಯವಾಗಿದ್ದರೆ ಅದನ್ನು ಹಿರಿಯರೊಂದಿಗೆ ಕುಳಿತು ಬಗೆಹರಿಸಿಕೊಳ್ಳಬೇಕು. ಯಾವುದೇ ಸಮಾಜಕ್ಕೆ ಅನ್ಯಾಯವಾಗಬಾರದು ಎಂದು ವರೂರು ಕ್ಷೇತ್ರದ ಗುಣಧರನಂದಿ ಮಹಾರಾಜರು ಅಭಿಪ್ರಾಯ ವ್ಯಕ್ತಪಡಿಸಿದರು.

Varuru Gunadhara nandi Maharaj spoke to the media.
ವರೂರು ಕ್ಷೇತ್ರದ ಗುಣಧರನಂದಿ ಮಹಾರಾಜರು ಮಾಧ್ಯಮದವರೊಂದಿಗೆ ಮಾತನಾಡಿದರು.
author img

By ETV Bharat Karnataka Team

Published : Apr 17, 2024, 3:38 PM IST

Updated : Apr 17, 2024, 3:52 PM IST

ವರೂರು ಕ್ಷೇತ್ರದ ಗುಣಧರನಂದಿ ಮಹಾರಾಜರು ಮಾಧ್ಯಮದವರೊಂದಿಗೆ ಮಾತನಾಡಿದರು.

ಹುಬ್ಬಳ್ಳಿ: ದಿಂಗಾಲೇಶ್ವರ ಸ್ವಾಮೀಜಿ ನನ್ನನ್ನು ಸಂಪರ್ಕಿಸಿ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಸ್ವಾಮೀಜಿಗಳು ರಾಜಕೀಯಕ್ಕೆ ಬರುವುದು ತಪ್ಪೇನಿಲ್ಲ. ಆದ್ರೆ ರಾಜಕೀಯ ಪ್ರವೇಶಿಸಲು ಸಮಯ ಸರಿಯಿಲ್ಲ ಎಂದು ಹೇಳಿದ್ದೇನೆ ಎಂದು ವರೂರು ತೀರ್ಥಕ್ಷೇತ್ರದ ಗುಣಧರನಂದಿ ಮಹಾರಾಜರು ಹೇಳಿದರು.

ಚುನಾವಣೆಯಲ್ಲಿ ಸೋತರೆ ಮಠದ ಗೌರವಕ್ಕೆ ಧಕ್ಕೆ: ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಧಾರವಾಡ ಲೋಕಸಭಾ ಕ್ಷೇತ್ರ ದೊಡ್ಡದಾಗಿದ್ದು, 546 ಹಳ್ಳಿಗಳನ್ನು ಒಳಗೊಂಡಿದೆ. ಅಲ್ಪ ಸಮಯದಲ್ಲಿ ಹಳ್ಳಿಗಳನ್ನು ಸಂಪರ್ಕಿಸಲು ಅಸಾಧ್ಯ. ಇದು ಅವರಿಗೆ ಕಷ್ಟವಾಗಿ, ಚುನಾವಣೆಯಲ್ಲಿ ಸೋತರೆ ಮಠದ ಗೌರವಕ್ಕೆ ಧಕ್ಕೆಯಾಗಲಿದೆ ಎಂದು ಹೇಳಿದ್ದೇನೆ. ಆದ್ರೆ ಅವರು ಸೋತರೂ ಸರಿ, ಗೆದ್ದರೂ ಸರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. ಅದು ಅವರ ನಿರ್ಧಾರ ಎಂದು ತಿಳಿಸಿದರು.

ಫಕೀರ ದಿಂಗಾಲೇಶ್ವರ ಸ್ವಾಮೀಜಿ ರಾಜಕೀಯ ಪ್ರವೇಶ ಮಾಡಿದ ಸಮಯ ಮತ್ತು ಜಾಗ ಸರಿಯಿಲ್ಲ. ಇದು ಶಿರಹಟ್ಟಿಯ ಫಕೀರೇಶ್ವರ ಮಹಾ ಸಂಸ್ಥಾನದ ಅಸ್ತಿತ್ವದ ಪ್ರಶ್ನೆಯಾಗಿದೆ. ದಿಂಗಾಲೇಶ್ವರ ಸ್ವಾಮೀಜಿ ದೊಡ್ಡ ಧರ್ಮಗುರುಗಳು. ವೈಯಕ್ತಿಕ ಸಮಸ್ಯೆಗಳು ಹಾಗೂ ಅವರ ಸಮಾಜಕ್ಕೆ ಅನ್ಯಾಯವಾಗಿದ್ದರೆ ಅದನ್ನು ಹಿರಿಯರೊಂದಿಗೆ ಕುಳಿತು ಬಗೆಹರಿಸಿಕೊಳ್ಳಬೇಕು. ಯಾವುದೇ ಸಮಾಜಕ್ಕೆ ಅನ್ಯಾಯವಾಗಬಾರದು ಎಂದು ಹೇಳಿದರು.

ಸುರಕ್ಷಿತ ಸದೃಢ ಭಾರತಕ್ಕಾಗಿ ಬೆಂಬಲ: 'ಯಾವ ಪಕ್ಷಕ್ಕೆ ಬೆಂಬಲ ನೀಡುತ್ತೀರಿ' ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗುಣಧರನಂದಿ, 'ಭಾರತ ಸದೃಢವಾಗಬೇಕು. ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಪಕ್ಷಕ್ಕೆ ಬೆಂಬಲ ನೀಡುತ್ತೇವೆ' ಎಂದರು.

ಆತಂಕದ ಕೃತ್ಯ ಕಡಿಮೆ ಆಗಿವೆ: ಪ್ರಧಾನಿ ಮೋದಿಯವರು ಆಡಳಿತಕ್ಕೆ ಬಂದಾಗಿನಿಂದಲೂ ಭಯೋತ್ಪಾದಕ ಕೃತ್ಯಗಳು ಕಡಿಮೆ ಆಗಿವೆ. ಈ‌ ಹಿಂದೆ ಆತಂಕದ ಸ್ಥಿತಿ ದೇಶದಲ್ಲಿ ಇತ್ತು. ಆದ್ರೆ ಮತದಾರರು ತಮಗೆ ಇಷ್ಟವಾದ ಸೂಕ್ತವಾದ ವ್ಯಕ್ತಿಗೆ ಮತ ಹಾಕಲು ಹೇಳುತ್ತೇವೆ. ನಾವು ಯಾರ ಪರ ವಿರೋಧ ಇಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದರು.

ಇದನ್ನೂಓದಿ:ಯಡಿಯೂರಪ್ಪ ಅಧಿಕಾರ ಕಳೆದುಕೊಂಡಿದ್ದು ಪ್ರಲ್ಹಾದ್​ ಜೋಶಿಯಿಂದ : ದಿಂಗಾಲೇಶ್ವರ ಶ್ರೀ - dingaleswar swami

Last Updated : Apr 17, 2024, 3:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.