ಹುಬ್ಬಳ್ಳಿ: ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮಾರ್ಗಸೂಚಿ ಹೊರಡಿಸಿರುವ ಹೆಸ್ಕಾಂ, ಕೆಲವು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕ ಗಣೇಶ ಮಂಡಳಿಗಳಿಗೆ ಸೂಚನೆ ನೀಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಹೆಸ್ಕಾಂ ಹುಬ್ಬಳ್ಳಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕಿರಣ್ ಕುಮಾರ್ ಬಿ, ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನಧಿಕೃತವಾಗಿ ವಿದ್ಯುತ್ ಲೈನ್‌ಗಳಿಗೆ ಮನೆಗಳಿಂದ ಹುಕ್ ಹಾಕಿ ವಿದ್ಯುತ್ ಸಂಪರ್ಕ ಪಡೆಯಬಾರದು. ಸಂಬಂಧ ಪಟ್ಟ ಹೆಸ್ಕಾಂ ವಿಭಾಗೀಯ ಅಥವಾ ಶಾಖಾ ಕಚೇರಿಗೆ ತೆರಳಿ ಅನುಮತಿ ಪಡೆಯಬೇಕು. ಗಣಪತಿ ಪ್ರತಿಷ್ಠಾಪನೆ ಮಾಡುವ ಸ್ಥಳದ ಸುತ್ತಮುತ್ತ ಯಾವುದೇ ವಿದ್ಯುತ್ ಮಾರ್ಗಗಳಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ವಿದ್ಯುತ್ ಲೈನ್‌ನ ಕೆಳಗೆ ಅಥವಾ ಅಕ್ಕಪಕ್ಕದಲ್ಲಿ ಗಣಪತಿ ಪೆಂಡಾಲ್ ಹಾಕಬಾರದು. ಸುರಕ್ಷತೆಯ ಅಂತರವನ್ನು ಕಾಯ್ದುಕೊಂಡು ಪೆಂಡಾಲ್ ಹಾಕಬೇಕು ಎಂದು ನಿರ್ದೇಶನ ನೀಡಿದೆ.
ಮಳೆಗಾಲ ಇರುವುದರಿಂದ ವಿದ್ಯುತ್ ಅವಘಡಗಳ ತಪ್ಪಿಸಲು ಹೆಚ್ಚಿನ ಜಾಗ್ರತೆ ವಹಿಸುವುದು ಅತ್ಯಗತ್ಯ. ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳಿಗೆ ಬ್ಯಾನರ್ ಮತ್ತು ಫಲಕಗಳನ್ನು ಕಟ್ಟಬಾರದು. ಗಣೇಶನ ವಿಗ್ರಹ ನಿಮಜ್ಜನ ದಿನವೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ವಿದ್ಯುತ್ ತಂತಿಗಳಿಗೆ ತಾಗುವ ರೀತಿಯಲ್ಲಿ ಅತೀ ಎತ್ತರದ ಧ್ವಜ ಕಟ್ಟಬಾರದು. ಗಣೇಶನ ವಿಗ್ರಹಗಳ ನಿಮಜ್ಜನಾ ಮೆರವಣೆಗೆ ನಡೆಯುವ ಬೀದಿಗಳಲ್ಲಿ ವಿದ್ಯುತ್ ಲೈನ್‌ಗಳ ಅಡಚಣೆ ಇದ್ದಲ್ಲಿ ಸಂಬಂಧಿಸಿದ ಹೆಸ್ಕಾಂ ಕಚೇರಿಯ ಗಮನಕ್ಕೆ ತರಬೇಕು. ಅಂತಹ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಗಣೇಶ ನಿಮಜ್ಜನಕ್ಕೆ ಅನುಕೂಲ ಮಾಡಿಕೊಡಲು ಹೆಸ್ಕಾಂ ಸದಾ ಸನ್ನದ್ಧವಾಗಿರುತ್ತದೆ ಎಂದು ಹೆಸ್ಕಾಂ ತಿಳಿಸಿದೆ.
ಒಂದು ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಹೋದರೆ ಏನಾದರೂ ಅವಘಡಗಳು ಸಂಭವಿಸಿದರೆ ಅದಕ್ಕೆ ಹೆಸ್ಕಾಂ ಜವಾಬ್ದಾರಿಯಲ್ಲ. ಹೀಗಾಗಿ ಎಲ್ಲ ಗಣೇಶ ಮಂಡಳಿಗಳು ಸೂಕ್ತ ಸುರಕ್ಷತಾ ಕ್ರಮ ಅನುಸರಿಸಿ ಗಣೇಶ ಹಬ್ಬ ಆಚರಿಸಬೇಕೆಂದು ಹೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ: ಇಲ್ಲಿನ 110/11 ಕೆ.ವಿ ವಿದ್ಯುತ್ ಉಪಕೇಂದ್ರ, ಪವರ್ ಹೌಸ್ ಕಾಂಪೌಂಡ್‌ನ 2ನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಿನ್ನೆಲೆ ಬುಧವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಎಲ್ಲೆಲ್ಲಿ ವ್ಯತ್ಯಯ: ಶಹಾ ಬಜಾರ್, ಸಿಬಿಟಿ ಕಿಲ್ಲಾ, ತೋರವಿ ಗಲ್ಲಿ, ಮಂಗಳವಾರ ಪೇಟ್, ರುದ್ರಾಕ್ಷಿಮಠ, ವಿಟ್ಟವ ಗಲ್ಲಿ, ವಾಲ್ವೇಕರ್ ಗಲ್ಲಿ, ಇಟಗಿ ಮಾರುತಿಗಲ್ಲಿ, ರಾಧಾಕೃಷ್ಣ ಗಲ್ಲಿ, ಬಾಣತಿಗಲ್ಲಿ, ಬರ್ದನ್ ಸಾಲ್, ಎಂ.ಜಿ.ಮಾರ್ಕೆಟ್, ಹೀರೆ ಪೇಟ್, ಬಮ್ಮಾಪೂರ್ ಓಣಿ, ಬೈಲಿ ಓಣಿ, ಸಟ್ಲ್‌ಮೆಂಟ್, ಗೊಲ್ಲರ್ ಕಾಲೋನಿ, ಕೆ.ಬಿ.ನಗರ, ಘಂಟಿಗೇರಿ ಓಣಿ, ಯಲ್ಲಾಪೂರ ಓಣಿ, ಗಾರ್ಡನ್ ಪೇಟ್, ಬಂಕಾಪೂರ ಓಣಿ, ವೀರಪೂರ ಓಣಿ, ಕುಲಕರ್ಣಿ ಗಲ್ಲಿ, ಮಹಾಬಲೇಶ್ವರ ಗುಡಿ, ಶಾಂತಿನಿಕೇತನ ಕಾಲೋನಿ, ಇಂದ್ರನಗರ, ಹುದಾರ್ ಓಣಿ, ಗಣೇಶ್ ಪೇಟ್, ಸ್ಟೇಷನ್ ರೋಡ್, ಹೆಡ್ ಪೋಸ್ಟ್, ಜೆ.ಸಿ. ನಗರ, ಕುಲಕರ್ಣಿ ಹಕ್ಕಲ, ಶೆಟ್ಟರ ಓಣಿ, ಕುಂಬಾರ ಓಣಿ, ಎ.ಕೆ.ಇಂಡಸ್ಟ್ರೀಸ್ ರೋಡ್, ಗುಂಡಿ ಮಾರ್ಕೆಟಿಂಗ್, ತಬೀಬ್ ಲ್ಯಾಂಡ್ ಮತ್ತು ಮಂಟೂರ ಮುಖ್ಯ ರಸ್ತೆ, ಬ್ಯಾಳಿ ಪ್ಲಾಟ್, ಹರಿಶ್ಚಂದ್ರ ಕಾಲೋನಿ, ಅಂಬೇಡ್ಕರ್ ಕಾಲೋನಿ, ಮಂಟೂರ ಮುಖ್ಯರಸ್ತೆ, ಅರಳಿಕಟ್ಟಿ ಕಾಲೋನಿ, ಕುಲಕರ್ಣಿ ಹಕ್ಕಲ, ಹಿಂದೂಸ್ಥಾನ ಐಸ್ ಪ್ಯಾಕ್ಟರಿ, ಮೌಲಾಲಿ ಬ್ಲಾಕ್, ಬುದ್ಧ ವಿಹಾರ, ದುರ್ಗದ ಬೈಲ್ ಬಟರ್ ಮಾರುಕಟ್ಟೆ, ಮೈಸೂರ್ ಅಂಗಡಿ ಬಾಬಾಸನ್ ಗಲ್ಲಿ, ತುಳಜಾ ಭವಾನಿ ಸರ್ಕಲ್, ದಾಜೀಬಾನ ಪೇಟ್, ಜನತಾ ಟ್ರಾಫಿಕ್, ಮೂರುಸಾವಿರ ಮಠ, ಗೌಳಿ ಗಲ್ಲಿ, ಲಕ್ಷ್ಮೀ ಮಾಲ್, ಅಂಬೇಡ್ಕರ್ ಕಾಲೋನಿ, ಪ್ರಿಯದರ್ಶಿನಿ ಕಾಲೋನಿ, ಅಹಮ್ಮದ ನಗರ, ಮಂಟೂರ್ ರೋಡ್, ಮಿಲ್ಲತ್ ನಗರ, ಭಾರತಿ ನಗರ, ಕಸ್ತೂರಿಬಾಯಿ ನಗರ, ಎಫ್.ಸಿ.ಐ. ಗೋಡೌನ್, ಸುಭಾಸ ಕಾಲೋನಿ, ಕನ್ಯಾನಗರ, ಕೃಪಾನಗರ, ಮೈತ್ರಾ ಕಾಲೋನಿ, ನ್ಯಾಷನಲ್ ಟೌನ್, ಗುಂಜಾಲ್ ಪ್ಲಾಟ್, ಮರಾಠ ಗಲ್ಲಿ, ಬಾಣಿ ಓಣಿ, ಕೊಪ್ಪಿಕರ್ ರೋಡ್, ಕೋಯಿನ ರೋಡ್, ಯುರೇಕಾ ಕಾಂಪ್ಲೆಕ್ಸ್, ಪದ್ಮಾ ಟಾಕೀಸ್, ಸಂಯುಕ್ತ ಕರ್ನಾಟಕ ಪ್ರಿಂಟಿಂಗ್ ಪ್ರೆಸ್, ಸ್ವದೇಶಿ ಕಾಂಪ್ಲೆಕ್ಸ್, ವೆನ್‌ಸನ್ಸ್ ಬಿಲ್ಡಿಂಗ್, ನೆಹರೂ ಸ್ಟೇಡಿಯಂ ರೋಡ್, ಮಲ್ಲಿಕಾರ್ಜುನ ಅವೆನ್ಯು, ಕಟಾರಿಯಾ ಕಾಂಪ್ಲೆಕ್ಸ್, ಟ್ರೇಡ್ ಸೆಂಟರ್ ಸುತಾರಿಯಾ ಕಾಂಪ್ಲೆಕ್ಸ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಶಿವಮೊಗ್ಗದ ಗ್ರಾಮಾಂತರ ವಿಭಾಗದಲ್ಲಿ ಸೆಪ್ಟೆಂಬರ್ 05 ರಂದು ವಿದ್ಯುತ್ ವ್ಯತ್ಯಯ: ಎಂಆರ್ಎಸ್ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಕೇಂದ್ರದ ಮಾರ್ಗಗಳಲ್ಲಿ ಸೆಪ್ಟೆಂಬರ್ 05 ರಂದು ಬೆಳಗ್ಗೆ 09.30 ರಿಂದ ಸಂಜೆ 5 ಗಂಟೆ ರವರೆಗೆ ಶಿವಮೊಗ್ಗದ ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ಶಿವಮೊಗ್ಗ ಗ್ರಾಮಾಂತರ ಭಾಗಗಳಾದ ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ತಿರುವಳ್ಳಿ, ಅಬ್ಬರಘಟ್ಟ, ತರಗನಹಳ್ಳಿ ಕ್ರಾಸ್, ಹಾರೋಬೆನವಳ್ಳಿ, ಹಾರೋಬೆನವಳ್ಳಿ ತಾಂಡ, ಗೌಡನಾಯ್ಕನಹಳ್ಳಿ, ಬಿ.ಬೀರನಹಳ್ಳಿ, ಹೊಯ್ಸನಹಳ್ಳಿ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ. ವೀರಭದ್ರ ಕಾಲೋನಿ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ, ಬಂಗಾರಪ್ಪ ಕಾಲೋನಿ, ಜಿ.ಜಿ.ಕ್ಯಾಂಪ್, ಚಿಕ್ಕಮರಡಿ, ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ, ಜಯಂತಿಗ್ರಾಮ, ಹೊನ್ನವಿಲೆ, ರಾಮಮೂರ್ತಿ ಮಿನರಲ್ಸ್, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೋನಿಕ್ಸ್ ಐಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆಎಸ್ಆರ್ಪಿ ಕಾಲೋನಿ, ನವುಲೆ ಬಸವಾಪುರ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.