ETV Bharat / state

ಹಾಸನ: ಮನೆಯಲ್ಲೇ ಅತಿಥಿ ಉಪನ್ಯಾಸಕಿ ಆತ್ಮಹತ್ಯೆ - lecturer suicide - LECTURER SUICIDE

ಅತಿಥಿ ಉಪನ್ಯಾಸಕಿಯೊಬ್ಬರು ಗುರುವಾರ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಅತಿಥಿ ಉಪನ್ಯಾಸಕಿ
ಅತಿಥಿ ಉಪನ್ಯಾಸಕಿ (ETV Bharat)
author img

By ETV Bharat Karnataka Team

Published : May 10, 2024, 6:55 AM IST

ಹಾಸನ: ಅತಿಥಿ ಉಪನ್ಯಾಸಕಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನರಾಯಪಟ್ಟಣದ ಗಾಯಿತ್ರಿ ಬಡಾವಣೆಯಲ್ಲಿ ನಡೆದಿದೆ. ದೀಪಾ (34) ಆತ್ಮಹತ್ಯೆಗೆ ಶರಣಾದ ಅತಿಥಿ ಉಪನ್ಯಾಸಕಿ.

ಸೋಮಶೇಖರ್ ಹಾಗೂ ಭಾಗ್ಯ ದಂಪತಿ ಪುತ್ರಿಯಾಗಿರುವ ದೀಪಾ, ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದರು. ಗುರುವಾರ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವಿವಾಹಿತೆಯಾಗಿದ್ದ ದೀಪಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಾಳಿ ಬದುಕಬೇಕಾಗಿದ್ದ ದೀಪ ಸಾವು ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ.

ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಪಂಚಭೂತಗಳಲ್ಲಿ‌ ಲೀನರಾದ ಬೆಳ್ತಂಗಡಿ ಮಾಜಿ ಶಾಸಕ ವಸಂತ‌ ಬಂಗೇರ - K Vasant Bangera

ETV Bharat Logo

Copyright © 2024 Ushodaya Enterprises Pvt. Ltd., All Rights Reserved.