ಬೆಂಗಳೂರು : ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ಒಳಗಡೆ ಪಂಚೆ ಧರಿಸಿದ್ದಾರೆ ಎಂಬ ಕಾರಣಕ್ಕೆ ಫಕೀರಪ್ಪ ಎನ್ನುವವರಿಗೆ ಪ್ರವೇಶ ನಿರಾಕರಣೆ ಪ್ರಕರಣಕ್ಕೆೆ ಸಂಬಂಧಿಸಿದಂತೆ ಉಂಟಾಗಿದ್ದ ಆಕ್ರೋಶಕ್ಕೆ ಬಂದ್ ಮಾಡಲಾಗಿದ್ದ ಜಿಟಿ ಮಾಲ್ ಮತ್ತೆ ಓಪನ್ ಆಗಿದ್ದು, ಕಾರ್ಯಾಚರಣೆ ಪುನಾರಂಭ ಮಾಡಿದೆ.
ಬಂದ್ ಆಗಿ ಕೇವಲ ಐದು ದಿನಗಳಲ್ಲೇ ಜಿಟಿ ಮಾಲ್ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದು, ಈ ಮಾಲ್ 1.78 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿತ್ತು. ಸಂಪೂರ್ಣ ತೆರಿಗೆ ಪಾವತಿಸಿದ ಹಿನ್ನೆೆಲೆ ಪುನಃ ಆರಂಭಗೊಂಡಿದ್ದು, ಮಂಗಳವಾರದಿಂದ ಜಿಟಿ ಮಾಲ್‌ನ ಕಾರ್ಯಾಚರಣೆ ಪುನರಾರಂಭಗೊಂಡಿದೆ ಎಂದು ಮಾಲೀಕ ಆನಂದ್ ಪುತ್ರ ಪ್ರಶಾಂತ್ ಹೇಳಿದ್ದಾರೆ.
ಘಟನೆಯ ಹಿನ್ನೆಲೆ : ಐದು ದಿನಗಳ ಹಿಂದೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ನಲ್ಲಿ ಪಂಚೆ ಧರಿಸಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆೆ ಫಕೀರಪ್ಪ ಎನ್ನುವವರಿಗೆ ಮಾಲ್ ಒಳಗಡೆ ಚಲನಚಿತ್ರ ವೀಕ್ಷಣೆಗೆ ಮಾಲ್ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದರು. ಈ ಒಂದು ಘಟನೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಸದನದಲ್ಲೂ ಕೂಡ ಈ ವಿಷಯ ಚರ್ಚೆಗೆ ಬಂದಿತ್ತು. ಸಚಿವ ಬೈರತಿ ಸುರೇಶ್ ಒಂದು ವಾರ ಜಿಟಿ ಮಾಲ್ ಬಂದ್ ಮಾಡಿಸುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ : ಪಂಚೆ ಧರಿಸಿದ್ದ ರೈತನಿಗೆ ಪ್ರವೇಶ ನಿರಾಕರಣೆ: ಜಿಟಿ ಮಾಲ್ ಸ್ವಯಂಪ್ರೇರಿತ ಬಂದ್ - GT Mall Close