ETV Bharat / state

ಕೂಸಿನ ಮನೆ ಯೋಜನೆ: ಸರ್ಕಾರದ ವಿರುದ್ಧವೇ ಗ್ರಾಮ ಪಂಚಾಯಿತಿ ಠರಾವು ಪಾಸ್​ - koppal

ಸರ್ಕಾರದ ಕೂಸಿನ ಮನೆ ಯೋಜನೆಯ ವಿರುದ್ಧವೇ ಆನೆಗೊಂದಿ ಗ್ರಾಮ ಪಂಚಾಯಿತಿಯಿಂದ ಠರಾವು ಪಾಸ್​ ಮಾಡಲಾಗಿದೆ.

ಕೂಸಿನ ಮನೆ ಯೋಜನೆ  ಸರ್ಕಾರದ ವಿರುದ್ಧವೇ ಪಂಚಾಯಿತಿ ಠರಾವು  Kusina Mane Project  Gram Panchayat
ಕೂಸಿನ ಮನೆ ಯೋಜನೆ: ಸರ್ಕಾರದ ವಿರುದ್ಧವೇ ಗ್ರಾಮ ಪಂಚಾಯಿತಿ ಠರಾವು ಪಾಸ್​
author img

By ETV Bharat Karnataka Team

Published : Jan 26, 2024, 3:08 PM IST

ಗಂಗಾವತಿ: ''ಮಹಿಳಾ ಕೂಲಿ ಕಾರ್ಮಿಕರ ಮಕ್ಕಳ ಹಾರೈಕೆಗೆ ಎಂದು ಪ್ರತಿ ಗ್ರಾಮ ಪಂಚಾಯಿತಿಯಲ್ಲೊಂದು ಕೂಸಿನ ಮನೆ ಆರಂಭಿಸಬೇಕು ಎಂಬ ರಾಜ್ಯ ಸರ್ಕಾರದ ಯೋಜನೆ ಅವೈಜ್ಞಾನಿಕವಾಗಿದೆ'' ಎಂದು ಗ್ರಾಮ ಪಂಚಾಯಿತಿಯೊಂದು ಸರ್ಕಾರದ ನಿರ್ಣಯದ ವಿರುದ್ಧ ಠರಾವು ಪಾಸು ಮಾಡಿದೆ.

ಕೂಸಿನ ಮನೆ ಯೋಜನೆ  ಸರ್ಕಾರದ ವಿರುದ್ಧವೇ ಪಂಚಾಯಿತಿ ಠರಾವು  Kusina Mane Project  Gram Panchayat
ಕೂಸಿನ ಮನೆ ಯೋಜನೆ: ಸರ್ಕಾರದ ವಿರುದ್ಧವೇ ಗ್ರಾಮ ಪಂಚಾಯಿತಿ ಠರಾವು ಪಾಸ್​

ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಕೆ. ಮಹಾದೇವಿ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಸದಸ್ಯರು, ''ಇದೊಂದು ಅವೈಜ್ಞಾನಿಕ ಯೋಜನೆಯಾಗಿದ್ದು, ಅನುಷ್ಠಾನಕ್ಕೆ ಸಾಕಷ್ಟು ಸಮಸ್ಯೆ ಇದೆ. ಹೀಗಾಗಿ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದನ್ನು ಅನುಷ್ಠಾನಕ್ಕೆ ತರುವುದು ಬೇಡ. ಈ ಬಗ್ಗೆ ಪಂಚಾಯಿತಿ ಸಭೆಯಲ್ಲಿ ಠರಾವು ಪಾಸು ಮಾಡಿ ಸರ್ಕಾರಕ್ಕೆ ಸಲ್ಲಿಸೋಣ'' ಎಂಬ ನಿರ್ಣಯ ಬಹುತೇಕ ಸದಸ್ಯರಿಂದ ವ್ಯಕ್ತವಾಯಿತು.

ಕೂಸಿನ ಮನೆ ಯೋಜನೆಗೆ ಯಾಕೆ ವಿರೋಧ?: ''ಪಂಚಾಯಿತಿಯ ವ್ಯಾಪ್ತಿ 4 ರಿಂದ 6 ಕಿಲೋ ಮೀಟರ್ ಇರುತ್ತದೆ. ಕಾರ್ಮಿಕ ಮಹಿಳೆ ತನ್ನ ಮಗುವನ್ನು ಕೂಸಿನ ಕೇಂದ್ರದಲ್ಲಿ ಬಿಡಲು ಎರಡರಿಂದ ಮೂರು ಕಿಲೋ ಮೀಟರ್ ಬರಬೇಕು. ಅಲ್ಲಿಂದ ಕೂಲಿಗೆ ಹೋಗಬೇಕು. ಕೆಲಸದ ಮಧ್ಯೆಯೇ ಹಾಲುಣಿಸಲು ಮತ್ತೆ ಕೇಂದ್ರಕ್ಕೆ ಬರಬೇಕು. ಹಾಲುಣಿಸಿದ ಬಳಿಕ ಕೆಲಸ ಮಾಡುವ ಸ್ಥಳಕ್ಕೆ ಹೋಗಬೇಕು. ಹೀಗಾಗಿ ಅತ್ತ ಮಗುವಿನ ಲಾಲನೆ, ಪಾಲನೆ ಇತ್ತ ಚಿಕ್ಕಮಕ್ಕಳನ್ನು ಹೊಂದಿರುವ ಮಹಿಳಾ ಕಾರ್ಮಿಕರ ಮೇಲೆ ಇನ್ನಿಲ್ಲದ ಒತ್ತಡ ನಿರ್ಮಾಣವಾಗುತ್ತದೆ'' ಎಂದು ಸದಸ್ಯ ವೆಂಕಟೇಶ ಬಾಬು ಸಭೆಗೆ ತಿಳಿಸಿದರು.

ಏಳು ದಿನ ತರಬೇತಿ ನೀಡಿದರೆ, ಮಕ್ಕಳನ್ನು ನಿಭಾಯಿಸಲು ಸಾಧ್ಯವೇ?: ಚಿಕ್ಕಮಕ್ಕಳನ್ನು ವರ್ಷಾನುಗಟ್ಟಲೇ ನೋಡಿಕೊಳ್ಳುವ ಅಂಗನವಾಡಿ ಸಹಾಯಕಿಯರು, ಕಾರ್ಯಕರ್ತೆಯರಿಗೆ ಇದು ಕಷ್ಟ. ಇಂತಹ ಸಂದರ್ಭದಲ್ಲಿ ಕೂಸಿನ ಮನೆಯಲ್ಲಿ ಮಕ್ಕಳ ಲಾಲನೆ - ಪಾಲನೆಗೆ ಎಂದು ನಿಯೋಜಿತವಾಗುವ ಮಹಿಳೆಯರಿಗೆ ಕೇವಲ ಏಳು ದಿನ ತರಬೇತಿ ನೀಡಿದರೆ, ಮಕ್ಕಳನ್ನು ನಿಭಾಯಿಸಲು ಸಾಧ್ಯವೇ ಎಂಬ ಪ್ರಶ್ನೆ ಸಭೆಯಲ್ಲಿ ವ್ಯಕ್ತವಾಯಿತು.

ಸ್ಥಳೀಯ ಅನುದಾನದಲ್ಲಿ 35 ಸಾವಿರ ವೆಚ್ಚ ಮಾಡಲು ಸಾಧ್ಯವೇ?: ಅಲ್ಲದೇ ರಾಜ್ಯದಲ್ಲಿ ಹತ್ತು ಸಾವಿರ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಇಂತಹ ಸಂದರ್ಭದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳೆಯ ಕಟ್ಟಡವನ್ನು ಬಳಸಿಕೊಂಡು ಸ್ಥಳೀಯ ಅನುದಾನದಲ್ಲಿ 35 ಸಾವಿರ ವೆಚ್ಚ ಮಾಡಿ ಸುಣ್ಣ, ಬಣ್ಣ ಬಳಿದು ಕೂಸಿನ ಮನೆಗೆ ಬಳಸಿಕೊಳ್ಳಿ ಎಂದು ಸರ್ಕಾರ ಸೂಚನೆ ನೀಡಿದೆ. ಇದು ಅವೈಜ್ಞಾನಿಕವಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಇದನ್ನೂ ಓದಿ: ಕಾಂಗ್ರೆಸ್​ಗೆ ಪಕ್ಷ ನಿಷ್ಠೆ ಇರುವವರನ್ನು ಮಾತ್ರ ಸೇರಿಸಿಕೊಳ್ಳಿ: ಮಲ್ಲಿಕಾರ್ಜುನ ಖರ್ಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.