ETV Bharat / state

ಚುನಾವಣೆಗೂ ಮುನ್ನ ಕೆಎಸ್​ಆರ್​ಟಿಸಿ ಸಿಬ್ಬಂದಿಗಳಿಗೆ ಗುಡ್ ನ್ಯೂಸ್: ಬಾಕಿ ಮೊತ್ತ ಪಾವತಿಗೆ ಆದೇಶ - Good news for KSRTC staff

ಚುನಾವಣೆಗೂ ಮುನ್ನ ಕೆಎಸ್​​ಆರ್​ಟಿಸಿ ಸಿಬ್ಬಂದಿಗಳಿಗೆ ಗುಡ್ ನ್ಯೂಸ್​ನೊಂದು ಬಂದಿದೆ. ತುಟ್ಟಿಭತ್ಯೆ ಹಿಂಬಾಕಿ, ಗಳಿಕೆ ರಜೆ ನಗದೀಕರಣ, ಉಪಧನದ ಬಾಕಿ ಮೊತ್ತ ಪಾವತಿಗೆ ಆದೇಶ ಹೊರಬಿದ್ದಿದೆ.

arrears of DA  leave encashment  gratuity arrears
ಬಾಕಿ ಮೊತ್ತ ಪಾವತಿಗೆ ಆದೇಶ
author img

By ETV Bharat Karnataka Team

Published : Mar 16, 2024, 2:28 PM IST

ಬೆಂಗಳೂರು: ಲೋಕಸಭಾ ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ ಸಿಬ್ಬಂದಿಗೆ ಕೆಎಸ್ಆರ್​ಟಿಸಿ ಉಡುಗೊರೆ ನೀಡಿದೆ. ತುಟ್ಟಿಭತ್ಯೆ ಹಿಂಬಾಕಿ, ಗಳಿಕೆ ರಜೆ ನಗದೀಕರಣ ಹಾಗೂ ಉಪಧನದ ಬಾಕಿ ಮೊತ್ತ ಒಟ್ಟು ರೂ. 84 ಕೋಟಿ ಪಾವತಿಸಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗು ಕೆಎಸ್ಆರ್​ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ನಿರ್ದೇಶನದಂತೆ ಆದೇಶ ಹೊರಡಿಸಲಾಗಿದೆ.

ಕೆಎಸ್​ಆರ್​ಟಿಸಿಯ ಸಿಬ್ಬಂದಿಗಳಿಗೆ (ಸದರಿ ಅವಧಿಯಲ್ಲಿನ ನಿವೃತ್ತ ಸಿಬ್ಬಂದಿಗಳನ್ನು ಸೇರಿ) 2022-23 ಮೇ ಸಾಲಿನ ಗಳಿಕೆ ರಜೆ ನಗದೀಕರಣದ ಮೊತ್ತ ರೂ.24 ಕೋಟಿಯನ್ನು ಹಾಗೂ ಜುಲೈ-2022 ರಿಂದ ನವೆಂಬರ್-2022 ರ ವರ್ಷದ 5 ತಿಂಗಳು, ಜನವರಿ-2023 ರಿಂದ ಜುಲೈ-2023 ರವರೆಗಿನ 7 ತಿಂಗಳು ಮತ್ತು ಜುಲೈ-2023 ರಿಂದ ಅಕ್ಟೋಬರ್-2023 ರವರೆಗಿನ 4 ತಿಂಗಳುಗಳ ಹಿಂಬಾಕಿ ತುಟ್ಟಿಭತ್ಯೆ ಮೊತ್ತ ರೂ.54 ಕೋಟಿಯನ್ನು ಪಾವತಿಸಲು ಆದೇಶಿಸಲಾಗಿದೆ.

ಮುಂದುವರೆದು, ಜನವರಿ-2024 ರಲ್ಲಿ ಸಂಸ್ಥೆಯ ಸೇವೆಯಿಂದ ನಿವೃತ್ತರಾದ ಸಿಬ್ಬಂದಿಗಳ ಉಪಧನ ರೂ.6 ಕೋಟಿ ಮೊತ್ತವನ್ನು ದಿನಾಂಕ:15.03.2024 ರಂದು ವ್ಯವಸ್ಥಾಪಕ ನಿರ್ದೇಶಕರು ಮೊತ್ತವನ್ನು ಬಿಡುಗಡೆಗೊಳಿಸಲು ಆದೇಶಿಸಿದ್ದಾರೆ.

ಓದಿ: ಏಳನೇ ವೇತನ ಆಯೋಗ ವರದಿ ಸಲ್ಲಿಕೆ; ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ಮುಂದಿನ ತೀರ್ಮಾನ: ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.