ETV Bharat / state

ಜೈಲಿನಿಂದ ಬಿಡುಗಡೆಯಾದ ದಿನವೇ ಚಿನ್ನದ ಸರ ಕಳವು: ಕುಖ್ಯಾತ ಸರಗಳ್ಳರಿಬ್ಬರ ಬಂಧನ

ಮಂಗಳೂರಿನಲ್ಲಿ ಇಬ್ಬರು ಕಳ್ಳರು ಜಾಮೀನಿನ ಮೇಲೆ ಬಿಡುಗಡೆಯಾದ ದಿನವೇ ಚಿನ್ನದ ಸರ ಕಳವು ಮಾಡಿ ಮತ್ತೆ ಪೊಲೀಸರ ಅತಿಥಿಗಳಾಗಿರುವ ಘಟನೆ ನಡೆದಿದೆ.

TWO NOTORIOUS CHAIN THIEVES  MANGALURU  ಸರಕಳ್ಳರಿಬ್ಬರ ಬಂಧನ  THIEVES ARRESTED AGAIN
ಜೈಲಿನಿಂದ ಬಿಡುಗಡೆಯಾದ ದಿನವೇ ಚಿನ್ನದ ಸರ ಕಳವು: ಕುಖ್ಯಾತ ಸರಕಳ್ಳರಿಬ್ಬರ ಬಂಧನ (ETV Bharat)
author img

By ETV Bharat Karnataka Team

Published : 3 hours ago

ಮಂಗಳೂರು: ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಕಳ್ಳರು ಜಾಮೀನಿನ ಮೇಲೆ ಬಿಡುಗಡೆಯಾದ ದಿನವೇ ಚಿನ್ನದ ಸರ ಕಳವು ಮಾಡಿದ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತೊಕ್ಕೊಟ್ಟುವಿನ ಹಬೀಬ್ ಹಸನ್ ಯಾನೆ ಚೊಂಬುಗುಡ್ಡೆ ಹಬೀಬ್ ಯಾನೆ ಅಬ್ಬಿ (43), ಬಂಟ್ವಾಳದ ಬಿ ಮೂಡ ದ ಉಮ್ಮರ್ ಶಿಯಾಫ್ (29) ಬಂಧಿತರು.

ಆರೋಪಿಗಳು ಕಮೀಷನರೇಟ್​​​ ವ್ಯಾಪ್ತಿಯಲ್ಲಿ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಬೈಕ್​​ನಲ್ಲಿ ಬಂದು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಸುಲಿಗೆ ಮಾಡಿದ್ದರು. ಈ ಪ್ರಕರಣದಲ್ಲಿ ಭಾಗಿಯಾದ ಕುಖ್ಯಾತ ಸರಕಳ್ಳರಿಬ್ಬರನ್ನು ಕೃತ್ಯ ನಡೆದ 24 ಗಂಟೆ ಒಳಗಡೆ ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ ಚಿನ್ನದ ಸರ ಹಾಗೂ ಕಳವು ಮಾಡಿದ ಬೈಕ್​​​​ ವಶಪಡಿಸಿಕೊಂಡು ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಡಿಸೆಂಬರ್ 6 ರಂದು ನರಿಂಗಾನ ಗ್ರಾಮದ ತೌಡುಗೋಳಿ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡಿಕೊಂಡಿದ್ದ ಸುಜಿನಾ ಡಿಸೊಜಾ ಅವರು ಅಂಗನವಾಡಿ ಕೆಲಸದಲ್ಲಿರುವ ಸಮಯ ಮಧ್ಯಾಹ್ನ 1.15 ಗಂಟೆ ಸುಮಾರಿಗೆ ಇಬ್ಬರು ಆರೋಪಿಗಳು ಬೈಕಿನಲ್ಲಿ ಅಂಗನವಾಡಿಗೆ ಬಂದು, ಬೈಕಿನಿಂದ ಇಳಿದು ಮಂಜನಾಡಿಗೆ ಹೋಗುವ ದಾರಿಯ ಬಗ್ಗೆ ವಿಚಾರಿಸಿದ್ದಾರೆ. ಸುಜಿನಾ ಡಿಸೊಜಾ ಅವರು ಮಂಜನಾಡಿಗೆ ಹೋಗುವ ದಾರಿಯನ್ನು ಹೇಳಿ, ಅಂಗನವಾಡಿ ಬಾಗಿಲು ಹಾಕುವಷ್ಟರಲ್ಲಿ ಬಾಗಿಲನ್ನು ದೂಡಿ ಅಂಗನವಾಡಿ ಒಳಗೆ ಪ್ರವೇಶಿಸಿ, ಸುಜಿನಾ ಡಿಸೊಜಾ ಅವರ ಕುತ್ತಿಗೆಯ ಚಿನ್ನದ ಸರ ಸುಲಿಗೆ ಮಾಡಿ ಆರೋಪಿಗಳು ಬೈಕ್ ಸಮೇತ ಪರಾರಿಯಾಗಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಡಿಸೆಂಬರ್ 9 ರಂದು ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಬೋಳ ಗ್ರಾಮದ ಸುಂಕಮಾರು ಮಂಜರಪಲ್ಕೆ ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವಸಂತಿ ಎಂಬವರಲ್ಲಿ ಬೈಕ್​ನಲ್ಲಿ ಬಂದ ಯುವಕ ಮತ್ತು ಯುವತಿ ಬಾಸ್ಕರ್​ ಎಂಬವರ ಮನೆಗೆ ಹೋಗುವ ದಾರಿ ಯಾವುದು ಎಂದು ಕೇಳಿ ಬೈಕ್ ಸವಾರ ವಸಂತಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿಸಿ ಟಿವಿ ಫೂಟೇಜ್​ ಸುಳುವಿನ ಆಧಾರದ ಮೇಲೆ ಬಂಧನ: ಮಂಗಳೂರು ಕಮೀಷನರೇಟ್​ ವ್ಯಾಪ್ತಿಯ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರು ಸಿಸಿ ಟಿವಿ ಫೂಟೇಜ್​ಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಈ ಹಿಂದೆ ಹಲವು ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಸುಮಾರು 4 ದಿನಗಳ ಹಿಂದೆ ಜೈಲ್​ನಿಂದ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.

ಆರೋಪಿಗಳಿಬ್ಬರು 2 ತಿಂಗಳ ಹಿಂದೆ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಕಡೆ ಮಹಿಳೆಯರ ಕುತ್ತಿಗೆಯಿಂದ ಸರಕಳ್ಳತನ ಮಾಡಿ ಬಂಧನವಾಗಿ ಮಂಗಳೂರು ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದವರು. ಇವರು ಡಿ. 6 ರಂದು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದು, ಅದೇ ದಿನವೇ ಮಂಗಳೂರು ನಗರದ ಜೈಲ್ ರಸ್ತೆಯ ಪರಿಸರದಲ್ಲಿ ಬೈಕ್ ಕಳ್ಳತನ ಮಾಡಿ ಮರುದಿನ ಆರೋಪಿಗಳಿಬ್ಬರು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ತೌಡುಗೋಳಿ ಬಳಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ್ದರು. ಅಲ್ಲದೇ 2 ದಿನ ಬಿಟ್ಟು ಮಂಗಳೂರು ಕೆಎಸ್​ಆರ್​ಟಿಸಿ ಬಸ್​​ ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿದ್ದ ಇನ್ನೊಂದು ಬೈಕ್​ನ್ನು ಕಳವು ಮಾಡಿದ್ದರು. ಅದೇ ಬೈಕ್​ನಲ್ಲಿ ಆರೋಪಿ ಹಬೀಬ್​ನು ಕಾರ್ಕಳದಲ್ಲಿ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ್ದಾನೆ.

39 ಕಳವು ಪ್ರಕರಣಗಳು ದಾಖಲು: ಆರೋಪಿಗಳ ಪೈಕಿ ಹಬೀಬ್ ಹಸನ್ ಯಾನೆ ಅಬ್ಬಿ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ನಗರದ ಬರ್ಕೆ, ಮೂಡಬಿದ್ರಿ, ಸುರತ್ಕಲ್, ಉಳ್ಳಾಲ, ಕೊಣಾಜೆ, ಬಜ್ಪೆ, ವಿಟ್ಲ, ಬಂಟ್ವಾಳ ನಗರ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 39 ಕಳವು, ಜಾನುವಾರು ಕಳವು, ಸರಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿ ಉಮ್ಮರ್ ಶಿಯಾಫ್ ಎಂಬಾತನು ಈ ಹಿಂದೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಹಾಗೂ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ 2 ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನು.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿಗಳು ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಸುಲಿಗೆ ಮಾಡಿದ 24 ಗಂಟೆ ಒಳಗಡೆ ಆರೋಪಿಯನ್ನು ಹಾಗೂ ಸುಲಿಗೆ ಮಾಡಿದ ಸೊತ್ತನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಮೈಸೂರು: ಮಹಿಳೆಯರ ಅಸಭ್ಯ ಚಿತ್ರ ಬಿಡಿಸಿ ಮನೆ ಮುಂದಿಡುತ್ತಿದ್ದ ವ್ಯಕ್ತಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.