ETV Bharat / state

ಕುದುರೆಯಲ್ಲಿ ಗ್ಲಾಂಡರ್ಸ್ ರೋಗೋದ್ರೇಕ ಪತ್ತೆ: ಡಿ.ಜೆ.ಹಳ್ಳಿ ಸುತ್ತಮುತ್ತ ರೋಗಪೀಡಿತ ವಲಯ ಘೋಷಣೆ - Glanders Disease - GLANDERS DISEASE

ಕುದುರೆಯೊಂದರಲ್ಲಿ ಗ್ಲಾಂಡರ್ಸ್ ರೋಗ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ರೋಗಪೀಡಿತ ವಲಯ ಎಂದು ಘೋಷಿಸಲಾಗಿದೆ.

glanders disease in horse
ಡಿ.ಜೆ.ಹಳ್ಳಿ
author img

By ETV Bharat Karnataka Team

Published : Apr 17, 2024, 6:46 AM IST

ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ಡಿ.ಜೆ.ಹಳ್ಳಿಯ ಕುದುರೆಯೊಂದರಲ್ಲಿ ಗ್ಲಾಂಡರ್ಸ್ ರೋಗೋದ್ರೇಕ ದೃಢಪಟ್ಟಿರುವುದರಿಂದ ಮೋದಿ ರಸ್ತೆಯ ಡಿ.ಜೆ.ಹಳ್ಳಿ ಕೇಂದ್ರ ಸ್ಥಾನದಿಂದ ಸುತ್ತಲಿನ 5 ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ರೋಗಪೀಡಿತ ವಲಯ ಹಾಗೂ 5 ರಿಂದ 25 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಜಾಗೃತ ವಲಯ ಎಂದು ಪಶುಸಂಗೋಪನೆ ಹಾಗೂ ಹೈನುಗಾರಿಕೆ ಇಲಾಖೆ ಘೋಷಿಸಿದೆ.

Notification
ಅಧಿಸೂಚನೆ

ಈ ಪ್ರದೇಶದ ಒಳಗೆ ಮತ್ತು ಹೊರಗೆ ಕುದುರೆ, ಕತ್ತೆ ಮತ್ತು ಹೇಸರಗತ್ತೆಗಳ ಚಲನವಲನವನ್ನು ನಿರ್ಬಂಧಿಸಲಾಗಿದೆ. 'ಪ್ರಾಣಿಗಳಲ್ಲಿ ಸೋಂಕುಕಾರಕ ಮತ್ತು ಸಾಂಕ್ರಾಮಿಕ ರೋಗಗಳ ಪ್ರತಿಬಂಧಕ ಮತ್ತು ನಿಯಂತ್ರಣ ಅಧಿನಿಯಮ 2009'ರ ಕಲಂ-6 ಅಡಿ ಈ ಆದೇಶ ಹೊರಡಿಸಲಾಗಿದೆ. ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಹೊರಡಿಸಿರುವ ಗ್ಲಾಂಡರ್ಸ್ ನಿಯಂತ್ರಣ ಹಾಗೂ ನಿರ್ಮೂಲನೆ ರಾಷ್ಟ್ರೀಯ ಕ್ರಿಯಾ ಯೋಜನೆ-2019 ರ ಅಧ್ಯಾಯ 4.1 (National Action Plan for Control and Eradication of Glanders in India-2019) ರ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ಡಿ.ಜೆ.ಹಳ್ಳಿಯ ಮೋದಿ ರಸ್ತೆಯಲ್ಲಿ ವಾಸಿಸುತ್ತಿರುವ ಖಲೀದ್ ಷರೀಫ್ ಬಿನ್ ಎ.ಜೆ. ಷರೀಫ್ ಎಂಬುವರ ಮಾಲೀಕತ್ವದ ಕುದುರೆಯಲ್ಲಿ ರೋಗೋದ್ರೇಕ ಕಾಣಿಸಿಕೊಂಡಿದೆ. ಈ ಪ್ರದೇಶದ ಸುತ್ತಲಿನ (ರೇಡಿಯಸ್) 5 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು 'ರೋಗ ಪೀಡಿತ ವಲಯ' ಹಾಗೂ 5 ರಿಂದ 25 ಕಿ.ಮೀ.ಗಳ ವ್ಯಾಪ್ತಿಯ (ರೇಡಿಯಸ್/ ತ್ರಿಜ್ಯ) ಪ್ರದೇಶವನ್ನು 'ಜಾಗೃತ ವಲಯ' ಎಂದು ಘೋಷಣೆ ಮಾಡಲಾಗಿದೆ ಎಂದು ಪಶುಸಂಗೋಪನಾ ಹಾಗೂ ಹೈನುಗಾರಿಕೆ ಇಲಾಖೆಯ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಜಾನುವಾರುಗಳ ಚರ್ಮಗಂಟು ರೋಗ: ವೈರಸ್​ನ ಮೂಲ ಪತ್ತೆ ಮಾಡಿದ ಐಐಎಸ್​ಸಿ ವಿಜ್ಞಾನಿಗಳು - Lumpy Skin Disease

ETV Bharat Logo

Copyright © 2025 Ushodaya Enterprises Pvt. Ltd., All Rights Reserved.